ಶ್ರೀ ಮಠದ ಪೀಠಾಧಿಪತಿ ಶ್ರೀ ಸುಬುದೇಂಧ್ರ ತೀರ್ಥರ ನೇತೃತ್ವದಲ್ಲಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ| ವಿಗ್ರಹದ ಪ್ರತಿಷ್ಠಾಪನೆಯ ವೇಳೆ ಕಾಣಿಸಿಕೊಂಡ ಕೋತಿ| ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿರುವ ರಾಘವೇಂದ್ರ ಮಠ|
ರಾಯಚೂರು(ಮಾ.15): ಗುರು ವೈಭವ ಉತ್ಸವದ ಹಿನ್ನೆಲೆಯಲ್ಲಿ ರಾಯರ ಮಠದಲ್ಲಿ ಇಂದು(ಸೋಮವಾರ) ಶ್ರೀ ರಾಘವೇಂದ್ರ ಸ್ವಾಮೀಜಿಗಳ ಪಟ್ಟಾಭಿಷೇಕ ಮಹೋತ್ಸವ ನಡೆದಿದೆ. ಪಟ್ಟಾಭಿಷೇಕದ ಬಳಿಕ ಅಭಯ ಆಂಜನೇಯ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ.
ಶ್ರೀ ಮಠದ ಪೀಠಾಧಿಪತಿ ಶ್ರೀ ಸುಬುದೇಂಧ್ರ ತೀರ್ಥರ ನೇತೃತ್ವದಲ್ಲಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆದಿದೆ. 32 ಅಡಿ ಎತ್ತರ ಏಕಶಿಲಾ ಅಭಯ ಆಂಜನೇಯ ಸ್ವಾಮಿಯ ವಿಗ್ರಹ ಪ್ರತಿಷ್ಠಾಪನೆಯಾಗಿದೆ. ವಿಗ್ರಹದ ಪ್ರತಿಷ್ಠಾಪನೆಯ ವೇಳೆ ಕೋತಿಯೊಂದು ಕಾಣಿಸಿಕೊಂಡು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
undefined
ರಾಯಚೂರು: ಮಹಾ ಶಿವರಾತ್ರಿ, ಮಂತ್ರಾಲಯದ ರಾಯರ ಮಠದಲ್ಲಿ ರುದ್ರಾಭಿಷೇಕ
ಆಂಜನೇಯ ಸ್ವಾಮಿಯ ಪೂಜೆಗೆ ಇರಿಸಿದ ದಾಳಿಂಬೆ ಹಣ್ಣುನ್ನು ಕೋತಿ ಕಿತ್ತುಕೊಂಡು ಹೋಗಿದೆ. ಆಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆಯ ಪೂಜೆ ಮುಗಿಯುವರೆಗೂ ಕೋತಿ ವಿಗ್ರಹದ ಬಳಿಯೇ ಇತ್ತು. ಕೋತಿಯನ್ನ ಮೂರ್ತಿಯಿಂದ ಎಷ್ಟೇ ಓಡಿಸಿದ್ರೂ ಪೂಜೆ ಮುಗಿಯವರೆಗೂ ಮೂರ್ತಿ ಬಳಿಯೇ ಇತ್ತು ಎಂದು ತಿಳಿದು ಬಂದಿದೆ.