ಇಲ್ಲಿನ ನೌಕರರಿಗೆಲ್ಲಾ ಕೊರೋನಾ ರ‍್ಯಾಪಿಡ್ ಟೆಸ್ಟ್‌

Suvarna News   | Asianet News
Published : Aug 18, 2020, 12:43 PM ISTUpdated : Aug 18, 2020, 01:07 PM IST
ಇಲ್ಲಿನ ನೌಕರರಿಗೆಲ್ಲಾ ಕೊರೋನಾ  ರ‍್ಯಾಪಿಡ್  ಟೆಸ್ಟ್‌

ಸಾರಾಂಶ

ಕೊರೋನಾ ಮಹಾಮಾರಿ ಎಲ್ಲೆಡೆ ಹಬ್ಬುತ್ತಿದ್ದು ಇದೀಗ ಇಲ್ಲಿನ ಎಲ್ಲಾ ನೌರರಿಗೆ ಕೊರೋನಾ ಪರೀಕ್ಷೆ ಸಾಮೂಹಿಕವಾಗಿ ಮಾಡಲಾಗುತ್ತಿದೆ.

 ಬೊಮ್ಮನಹಳ್ಳಿ (ಆ.18): ಇಲ್ಲಿನ ಗಾರ್ಮೆಂಟ್‌ ಕಾರ್ಖಾನೆಗಳ ನೌಕರರಿಗೆ ಕೊರೋನಾ  ರ‍್ಯಾಪಿಡ್‌ ಟೆಸ್ಟ್‌ ನಡೆಸುವ ಕಾರ್ಯಕ್ಕೆ ಶಾಸಕ ಸತೀಶ್‌ ರೆಡ್ಡಿ ಸೋಮವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಕೊರೋನಾ ಬಗ್ಗೆ ಯಾರು ಹೆದರ ಬೇಡಿ. ನಿಮಗೆ ಬೇಕಾದ ಎಲ್ಲಾ ಸೌಲಭ್ಯಗಳ ಕಲ್ಪಿಸಲಾಗಿದೆ. ನಮ್ಮ ಭಾಗದಲ್ಲಿ 100ಕ್ಕೂ ಅಧಿಕ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ. ನಿಮ್ಮ ಮನೆ ಬಾಗಿಲಿಗೆ ಬಂದು ಪರೀಕ್ಷೆ ಮಾಡುತ್ತೇವೆ ಎಂದರು.

ಕಡಿಮೆ ಅವಧಿಯಲ್ಲಿ ಹೆಚ್ಚು ಜನರಿಗೆ ಹರಡುತ್ತೆ ರೂಪಾಂತರಗೊಂಡ ಕೊರೋನಾ ವೈರಸ್...

ಜಂಟಿ ಆಯುಕ್ತ ರಾಮಕೃಷ್ಣ ಮಾತನಾಡಿ, ಬೊಮ್ಮನಹಳ್ಳಿ ವಲಯದಲ್ಲಿ ನಿತ್ಯ 5000ಕ್ಕೂ ಹೆಚ್ಚು ಪರೀಕ್ಷೆ ನಡೆಸುವ ಗುರಿ ಹೊಂದಿದ್ದೇವೆ. 1 ಲಕ್ಷಕ್ಕೂ ಅಧಿಕ ಗಾರ್ಮೆಂಟ್ಸ್‌ ನೌಕರರಿದ್ದು, ಈ ಸಂಬಂಧ ಕಾರ್ಖಾನೆಗಳ ಮಾಲಿಕರ ಜತೆ ಮಾತನಾಡಲಾಗಿದೆ.

ಇದೀಗ ಕೊರೋನಾ ಜತೆಯಲ್ಲೇ ಜೀವನ ಸಾಗಿಸುವ ಅನಿವಾರ್ಯತೆ ಇದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕಿದೆ ಎಂದರು. ಆರೋಗ್ಯಾಧಿಕಾರಿ ಸುರೇಶ್‌, ಡಾ.ನಾಗೇಂದ್ರಪ್ಪ ಇತರರಿದ್ದರು.

PREV
click me!

Recommended Stories

ತಾಳಿ ಕಟ್ಟುವ ಶುಭ ವೇಳೆ 'ಇವನು ನನ್ನ ಗಂಡ' ಎಂದ ಯುವತಿ; ಮಾಜಿ ಪ್ರೇಯಸಿ ರಾಕ್, ಮದುವೆ ಮನೇಲಿದ್ದವರು ಶಾಕ್!
ಸಿಲ್ಕ್ ಬೋರ್ಡ್- ಕೆ.ಆರ್ ಪುರ ಮೆಟ್ರೋ ನಿಲ್ದಾಣದವರೆಗೂ ಹೈಟೆಕ್ ಹೊರವರ್ತುಲ ರಸ್ತೆ ಅಭಿವೃದ್ಧಿಗಾಗಿ ₹307 ಕೋಟಿ ಅನುಮೋದನೆ