ನ್ಯೂ ಇಯರ್ ಸೆಲೆಬ್ರೇಷನ್‌ಗೆ ಕೊರೋನಾ ಆತಂಕ: ಬೆಂಗಳೂರಿನಲ್ಲಿ ಅಲರ್ಟ್

By Govindaraj SFirst Published Dec 22, 2022, 9:52 AM IST
Highlights

ವಿದೇಶದಲ್ಲಿ ಕೊರೊನಾ ಕೇಸ್ ಹೆಚ್ಚಳ ಬೆನ್ನಲ್ಲೇ ಬೆಂಗಳೂರಿನಲ್ಲಿ ಅಲರ್ಟ್ ಆಗಿದ್ದು, ಇದೀಗ ನ್ಯೂ ಇಯರ್ ಸೆಲೆಬ್ರೇಷನ್‌ಗೆ ಕೊರೋನಾ ಆತಂಕ ಎದುರಾಗಿದೆ. ಹೊಸ ವರ್ಷಕ್ಕೆ ಅನುಮತಿ ನೀಡಿದರೆ ಸೋಂಕು ಹೆಚ್ಚಳವಾಗುವ ಭೀತಿಯಿದ್ದು, ಸೆಲೆಬ್ರೇಷನ್ ಬೇಡ ಎಂದು ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಯವರು ಹೇಳಿದ್ದಾರೆ. 

ಬೆಂಗಳೂರು (ಡಿ.22): ವಿದೇಶದಲ್ಲಿ ಕೊರೊನಾ ಕೇಸ್ ಹೆಚ್ಚಳ ಬೆನ್ನಲ್ಲೇ ಬೆಂಗಳೂರಿನಲ್ಲಿ ಅಲರ್ಟ್ ಆಗಿದ್ದು, ಇದೀಗ ನ್ಯೂ ಇಯರ್ ಸೆಲೆಬ್ರೇಷನ್‌ಗೆ ಕೊರೋನಾ ಆತಂಕ ಎದುರಾಗಿದೆ. ಹೊಸ ವರ್ಷಕ್ಕೆ ಅನುಮತಿ ನೀಡಿದರೆ ಸೋಂಕು ಹೆಚ್ಚಳವಾಗುವ ಭೀತಿಯಿದ್ದು, ಸೆಲೆಬ್ರೇಷನ್ ಬೇಡ ಎಂದು ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಯವರು ಹೇಳಿದ್ದಾರೆ. ಸೋಷಿಯಲ್ ಡಿಸ್ಟೆನ್ಸ್ ಕಡ್ಡಾಯಗೊಳಿಸಲು ತಜ್ಞರ ಸಲಹೆ ಕೇಳಿದ್ದು, ತಜ್ಞರಿಂದ ನ್ಯೂ ಇಯರ್ ಸೆಲೆಬ್ರೇಷನ್ ಬೇಡವೆಂದು ಅಭಿಪ್ರಾಯ ವ್ಯಕ್ತವಾಗಿದೆ. 

ಎಂಜಿ ರೋಡ್, ಬ್ರಿಗೇಡ್ ರೋಡ್‌ನಲ್ಲಿನ ಮಧ್ಯರಾತ್ರಿಯ ಸೆಲೆಬ್ರೇಷನ್‌ಗೆ ರಿಸ್ಟಿಕ್ಷನ್ ಹಾಕಲು ಚಿಂತನೆ ನಡೆಸಲಾಗಿದ್ದು,ಹೊಟೇಲ್, ಮಾಲ್‌ಗಳಿಗೂ ಟೈಮ್ ಲಿಮಿಟ್ ನೀಡಲು ಚಿಂತನೆ ಮಾಡಲಾಗಿದೆ. ಈಗಾಗಲೇ ನ್ಯೂ ಇಯರ್ ಸೆಲೆಬ್ರೇಷನ್ ತಯಾರಿಯಲ್ಲಿರುವ ವ್ಯಾಪಾರಿಗಳಿಗೆ ಶಾಕ್ ಆಗಿದ್ದು,  ಬೆಂಗಳೂರಿನಲ್ಲಿ ಮತ್ತೆ ಸ್ಟಿಕ್ಟ್ ರೂಲ್ಸ್ ಜಾರಿಯಾಗುತ್ತಾ ಎಂಬ ಪರಿಸ್ಥಿತಿ ಎದುರಾಗಿದೆ. ಮತ್ತೆ ಮಾಸ್ಕ್ ಕಡ್ಡಾಯಕ್ಕೆ ಬಿಬಿಎಂಪಿ ಚಿಂತನೆ ನಡೆಸಿದ್ದು, ರೈಲು ಬಸ್ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯ ಮಾಸ್ಕ್ ಸಾಧ್ಯತೆಯಿದೆ. ಇನ್ನು ಹೊಸ ವರ್ಷಕ್ಕೆ ಜನಸಂದಣಿ ಹೆಚ್ಚಾಗುವ ಸಾಧ್ಯತೆಯಿದ್ದು, ಹೊರದೇಶದಿಂದ ನಗರಕ್ಕೆ ಹಲವು ವಿದೇಶಿಗರು ಬರುತ್ತಾರೆ. 

ಶೀಘ್ರ ಕೋವಿಡ್‌ ಮಾರ್ಗಸೂಚಿ ಬಿಡುಗಡೆ: ಸಚಿವ ಸುಧಾಕರ್‌

ಹೀಗಾಗಿ ಈ ವೇಳೆ ಕೋವಿಡ್ ಹೆಚ್ಚಾಗುವ ಸಾಧ್ಯತೆ ಹೆಚ್ಚು. ಜೊತೆಗೆ ಮೊದಲ ಹಂತದಲ್ಲಿ ದಂಡವಿಲ್ಲದೆ ಮಾಸ್ಕ್ ಧರಿಸುವಂತೆ ಅರಿವು ಮೂಡಿಸಲು ಚಿಂತನೆ ನಡೆಸಿದ್ದು, ಮಾರ್ಕೆಟ್‌, ಮಾಲ್, ಥಿಯೇಟರ್, ಪಾರ್ಕ್ ಸೇರಿ ಹಲವೆಡೆ ಮಾಸ್ಕ್ ಕಡ್ಡಾಯ ರೂಲ್ಸ್ ಸಾಧ್ಯತೆಯಿದೆ. ಬಸ್ ಮೆಟ್ರೋ, ವಿಮಾನಯಾನಕ್ಕೆ, ಮಾಸ್ಕ್ ಕಡ್ಡಾಯ ಮಾಡೋ ಸಾಧ್ಯತೆಯಿದ್ದು, ರಾಜ್ಯದಲ್ಲಿ ವೈರಸ್ ಪ್ರಮಾಣ ಹೆಚ್ಚಾದ್ರೆ ದಂಡ ಹಾಕಲು ಪ್ಲಾನ್ ಮಾಡಲಾಗಿದೆ. ಸದ್ಯ ವಿದೇಶದಲ್ಲಿ ಕೊರೊನಾ ಹೆಚ್ಚಳ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಕಡ್ಡಾಯ ರೂಲ್ಸ್ ಸಾಧ್ಯತೆಯಿದೆ. 

ಇಂದು ಸಿಎಂ ಮಹತ್ವದ ಸಭೆ: ಕೋವಿಡ್‌ ಸೋಂಕು ಕುರಿತ ವಿಷಯವನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಈ ಸಂಬಂಧ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲು ಗುರುವಾರ ಸುವರ್ಣಸೌಧದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವದ ವಿವಿಧ ದೇಶಗಳಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಯಾವ ರೀತಿಯಲ್ಲಿದೆ ಎಂಬ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 

Bengaluru: ನಗರದಲ್ಲಿ ಮತ್ತೆ ಮಾಸ್ಕ್‌ ಕಡ್ಡಾಯ ಆಗುತ್ತಾ?

ಈ ಬಗ್ಗೆ ಕಟ್ಟೆಚ್ಚರ ವಹಿಸಲು ರಾಜ್ಯಕ್ಕೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೋವಿಡ್‌ ಸೋಂಕನ್ನು ಯಾವ ರೀತಿ ನಿಯಂತ್ರಣ ಮಾಡಬೇಕು, ಯಾವ ರೀತಿಯ ಟೆಸ್ಟ್‌ಗಳನ್ನು ಹೆಚ್ಚಳ ಮಾಡಬೇಕು ಎನ್ನುವ ಕುರಿತು ಚರ್ಚಿಸಲು ಗುರುವಾರ ಸುವರ್ಣ ವಿಧಾನಸೌಧದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ ಕರೆಯಲಾಗಿದೆ. ಸಭೆಯಲ್ಲಿ ರಾಜ್ಯದಲ್ಲಿ ಕೋವಿಡ್‌ ಸೋಂಕು ಹರಡುವಿಕೆ ತಡೆಗಟ್ಟುವ ಕ್ರಮಗಳ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

click me!