ದುಬೈ ಮೂಲದ ಸೋಂಕು ಪ್ರಬಲ: ಮಂಗಳೂರಲ್ಲಿ ಹೆಚ್ಚಿದ ಪ್ರಕರಣ

Kannadaprabha News   | Asianet News
Published : May 22, 2020, 11:22 AM IST
ದುಬೈ ಮೂಲದ ಸೋಂಕು ಪ್ರಬಲ:  ಮಂಗಳೂರಲ್ಲಿ ಹೆಚ್ಚಿದ ಪ್ರಕರಣ

ಸಾರಾಂಶ

ದ.ಕ. ಜಿಲ್ಲೆಗೆ ದುಬೈ ಯಾನಿಗಳ ಕೊರೋನಾ ಆತಂಕ ಮತ್ತೆ ಎದುರಾಗಿದೆ. ಗುರುವಾರದ ಹೆಲ್ತ್‌ ಬುಲೆಟಿನ್‌ನಲ್ಲಿ ಜಿಲ್ಲೆಯಲ್ಲಿ 6 ಮಂದಿಗೆ ಕೊರೋನಾ ಪಾಸಿಟಿವ್‌ ದೃಢಪಟ್ಟಿದೆ. ಇದರೊಂದಿಗೆ ದುಬೈನಿಂದ ಇದುವರೆಗೆ ಆಗಮಿಸಿದ ಎರಡು ವಿಮಾನಗಳ ಒಟ್ಟು 21 ಮಂದಿಗೆ ಕೊರೋನಾ ಸೋಂಕು ತಟ್ಟಿದಂತಾಗಿದೆ.

ಮಂಗಳೂರು(ಮೇ 22): ದ.ಕ. ಜಿಲ್ಲೆಗೆ ದುಬೈ ಯಾನಿಗಳ ಕೊರೋನಾ ಆತಂಕ ಮತ್ತೆ ಎದುರಾಗಿದೆ. ಗುರುವಾರದ ಹೆಲ್ತ್‌ ಬುಲೆಟಿನ್‌ನಲ್ಲಿ ಜಿಲ್ಲೆಯಲ್ಲಿ 6 ಮಂದಿಗೆ ಕೊರೋನಾ ಪಾಸಿಟಿವ್‌ ದೃಢಪಟ್ಟಿದೆ. ಇದರೊಂದಿಗೆ ದುಬೈನಿಂದ ಇದುವರೆಗೆ ಆಗಮಿಸಿದ ಎರಡು ವಿಮಾನಗಳ ಒಟ್ಟು 21 ಮಂದಿಗೆ ಕೊರೋನಾ ಸೋಂಕು ತಟ್ಟಿದಂತಾಗಿದೆ.

ಮಂಗಳೂರಿಗೆ ಮೇ 18ರಂದು ಆಗಮಿಸಿದ ದುಬೈನಿಂದ ಆಗಮಿಸಿದ 178 ಮಂದಿ ಪ್ರಯಾಣಿಕರ 110 ಮಂದಿ ಜಿಲ್ಲಾಡಳಿತ ನಿಗದಿಪಡಿಸಿದ ಕ್ವಾರಂಟೈನ್‌ನಲ್ಲಿದ್ದರು. ಇವರಲ್ಲಿ 6 ಮಂದಿಗೆ ಕೊರೋನಾ ಸೋಂಕು ಗುರುವಾರ ದೃಢಪಟ್ಟಿದೆ. ಇದರೊಂದಿಗೆ ಇಲ್ಲಿವರೆಗೆ ಕೇವಲ ದುಬೈನಿಂದ ಆಗಮಿಸಿದ ಪ್ರಯಾಣಿಕರ ಪೈಕಿ 21 ಮಂದಿಗೆ ಸೋಂಕು ಕಾಣಿಸಿದಂತಾಗಿದೆ. ಮೊದಲ ವಿಮಾನದಲ್ಲಿ ಆಗಮಿಸಿದ 179 ಪ್ರಯಾಣಿಕರಲ್ಲಿ 15 ಮಂದಿಗೆ, 2ನೇ ವಿಮಾನದಲ್ಲಿ ಬಂದವರಲ್ಲಿ 6 ಮಂದಿಗೆ ಕೊರೋನಾ ಕಾಣಿಸಿದೆ.

ರಾತ್ರೋ ರಾತ್ರಿ ಗೂಡ್ಸ್‌ ಕಂಟೈನರ್‌ನಲ್ಲಿ ಕಾರ್ಮಿಕರ ಸಾಗಾಟ..! ಇಲ್ಲಿವೆ ಫೋಟೋಸ್

29 ವರ್ಷದ ಒಬ್ಬರು ಕಲಬುರಗಿ ನಿವಾಸಿಯಾದರೆ, ಉಳಿದ ಐವರು ದ.ಕ. ಜಿಲ್ಲೆಯವರು. 60 ವರ್ಷ, 44 ವರ್ಷ, 42 ವರ್ಷ, 44 ವರ್ಷ, 29 ವರ್ಷ ಹಾಗೂ 35 ವರ್ಷದ ಗಂಡಸರಾಗಿದ್ದು, ಈಗ ಇವರೆಲ್ಲರನ್ನು ಕ್ವಾರಂಟೈನ್‌ನಿಂದ ವೆನ್ಲಾಕ್‌ ಆಸ್ಪತ್ರೆಗೆ ಸೇರಿಸಲಾಗಿದೆ.

40 ಮಂದಿಗೆ ಕ್ವಾರಂಟೈನ್‌:

ಮೇ 20ರಂದು ಮಸ್ಕತ್‌ನಿಂದ ಮಂಗಳೂರಿಗೆ 64 ಮಂದಿ ಪ್ರಯಾಣಿಕರು ಆಗಮಿಸಿದ್ದಾರೆ. ಇವರಲ್ಲಿ 40 ಮಂದಿ ಜಿಲ್ಲಾಡಳಿತ ನಿಗದಿಪಡಿಸಿದ ಕ್ವಾರಂಟೈನ್‌ ಕೇಂದ್ರದಲ್ಲಿ ಇದ್ದಾರೆ. ಈ ಪೈಕಿ 15 ಮಂದಿ ಸರ್ಕಾರದ ಉಚಿತ ಕ್ವಾರಂಟೈನ್‌ನಲ್ಲಿದ್ದಾರೆ. 21 ಮಂದಿ ಉಡುಪಿ ಜಿಲ್ಲೆಗೆ, 3 ಮಂದಿ ಕಾರವಾರಕ್ಕೆ ಪ್ರಯಾಣಿಸಿದ್ದಾರೆ ಎಂದು ಜಿಲಾಡಳಿತ ಪ್ರಕಟಣೆ ತಿಳಿಸಿದೆ.

ಓರ್ವ ಬಿಡುಗಡೆ:

ಕೊರೋನಾ ಟೆಸ್ಟ್‌ಗೆ ಸಂಬಂಧಿಸಿ ಗುರುವಾರ 502 ಸ್ಯಾಂಪಲ್‌ಗಳ ವರದಿ ಬಂದಿದೆ. ಇದರಲ್ಲಿ 6 ಸ್ಯಾಂಪಲ್‌ ಪಾಸಿಟಿವ್‌ ಆಗಿದ್ದು, 496 ಸ್ಯಾಂಪಲ್‌ಗಳು ನೆಗೆಟಿವ್‌ ಆಗಿವೆ. ಪಾಸಿಟಿವ್‌ ಬಂದಿರುವ ಸ್ಯಾಂಪಲ್‌ಗಳೆಲ್ಲ ಮೇ 18ರಂದು ದುಬೈನಿಂದ ಆಗಮಿಸಿದ 2ನೇ ಏರ್‌ಲಿಫ್ಟ್‌ಗೆ ಸಂಬಂಧಿಸಿದೆ. ಇದೇ ವೇಳೆ ಕೋವಿಡ್‌ ಸೋಂಕಿನಿಂದ ವೆನ್ಲಾಕ್‌ ಆಸ್ಪತ್ರೆಗೆ ದಾಖಲಾಗಿದ್ದ ಕುಲಶೇಖರ ನಿವಾಸಿ ಡಿಸ್ಚಾಜ್‌ರ್‍ ಆಗಿದ್ದಾರೆ.

ಪಿ-506 ಸಂಖ್ಯೆಯ 45 ವರ್ಷದ ಕುಲಶೇಖರ ನಿವಾಸಿ ಪಾಸಿಟಿವ್‌ ಕಾರಣಕ್ಕೆ ಏ.23ರಂದು ವೆನ್ಲಾಕ್‌ ಆಸ್ಪತ್ರೆಗೆ ದಾಖಲಾಗಿದ್ದರು, ಅಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಗುರುವಾರ ಡಿಸ್ಚಾಜ್‌ರ್‍ ಆಗಿದ್ದಾರೆ. ಅವರ ಕೈಗೆ ಮೊಹರು ಹಾಕಲಾಗಿದ್ದು, ಮನೆಯಲ್ಲೇ 14 ದಿನಗಳ ಕ್ವಾರಂಟೈನ್‌ ವಿಧಿಸಲಾಗಿದೆ. ಅವರನ್ನು ಸ್ಥಳೀಯ ನಿವಾಸಿಗಳು ಚಪ್ಪಾಳೆ ಮೂಲಕ ಸಂಭ್ರಮದಿಂದ ಬರಮಾಡಿಕೊಂಡರು.

ಜನ-ವಾಹನ ದಟ್ಟಣೆ: ಕಡೂರಿನಲ್ಲಿ ಸಾಮಾಜಿಕ ಅಂತರ ಮಂಗಮಾಯ..!

ಇನ್ನೂ 408 ವರದಿ ಬಾಕಿ: ಇನ್ನು 408 ಮಂದಿಯ ವರದಿ ನಿರೀಕ್ಷಿಸಲಾಗಿದೆ. 333 ಮಂದಿಯ ಗಂಟಲಿನ ದ್ರವದ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದರಲ್ಲಿ ದುಬೈನಿಂದ 3ನೇ ಬಾರಿ ಆಗಮಿಸಿದ 64 ಮಂದಿಯಲ್ಲಿ ಮಂಗಳೂರಿನಲ್ಲಿ ಕ್ವಾರಂಟೈನ್‌ನಲ್ಲಿರುವ 40 ಮಂದಿಯ ಗಂಟಲು ದ್ರವ ಸ್ಯಾಂಪಲ್‌ ಸೇರಿದೆ ಎಂದು ಹೇಳಲಾಗಿದೆ. ಇನ್ನೆರಡು ದಿನದಲ್ಲಿ ಇದರ ವರದಿಯೂ ಪ್ರಕಟವಾಗಲಿದೆ.

ಗುರುವಾರ 15 ಮಂದಿಯನ್ನು ಆಬ್ಸರ್ವೇಷನ್‌ನಲ್ಲಿ ಇರಿಸಲಾಗಿದೆ. ಶ್ವಾಸಕೋಶ ತೊಂದರೆಗೆ ಸಂಬಂಧಿಸಿ 21 ಪ್ರಕರಣ ವರದಿಯಾಗಿದೆ. ಮೊಬೈಲ್‌ ಫೀವರ್‌ ಕ್ಲಿನಿಕ್‌ನಲ್ಲಿ 24 ಮಂದಿಯ ತಪಾಸಣೆ ನಡೆಸಲಾಗಿದೆ. ಸುರತ್ಕಲ್‌ ಎನ್‌ಐಟಿಕೆಯಲ್ಲಿ 32 ಹಾಗೂ ಮಂಗಳೂರು ಇಎಸ್‌ಐ ಆಸ್ಪತ್ರೆಯಲ್ಲಿ 14 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ.

ಮದುವೆಯಲ್ಲಿ ಭಾಗಿಯಾಗಿದ್ದ ಕೊರೋನಾ ಸೋಂಕಿತ ವೃದ್ಧೆ!

ಪ್ರಸಕ್ತ ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ. 21 ಮಂದಿ ಗುಣಮುಖರಾಗಿದ್ದು, 5 ಮಂದಿ ಮೃತಪಟ್ಟಿದ್ದಾರೆ. 35 ಮಂದಿ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

PREV
click me!

Recommended Stories

ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ
ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು