ಬಂಧನದ ಭೀತಿಯಲ್ಲಿದ್ದ ವಿವಾದಿತ ಸಾಹಿತಿ ಕೆ.ಎಸ್.ಭಗವಾನ್ ಸಂಕಷ್ಟದಿಂದ ಪಾರು

By Ravi Janekal  |  First Published Dec 13, 2022, 2:43 AM IST

ಬಂಧನದ ಭೀತಿ ಎದುರಿಸುತ್ತಿದ್ದ ವಿವಾದಿತ ಸಾಹಿತಿ ಪ್ರೊ. ಕೆ. ಎಸ್. ಭಗವಾನ್ ಕೊನೆಗೂ ಈ ಸಂಕಷ್ಟದಿಂದ ಪಾರಾಗಿದ್ದಾರೆ. ಸಾಗರ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದಾಖಲಾದ ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಗೈರು ಹಾಜರಾದ ಕಾರಣ ನ್ಯಾಯಾಲಯದಿಂದ ಜಾಮೀನು ರಹಿತ ಬಂಧನದ ವಾರೆಂಟ್ ಪಡೆದಿದ್ದರು.


 ಶಿವಮೊಗ್ಗ (ಡಿ.13) : ಬಂಧನದ ಭೀತಿ ಎದುರಿಸುತ್ತಿದ್ದ ವಿವಾದಿತ ಸಾಹಿತಿ ಪ್ರೊ. ಕೆ. ಎಸ್. ಭಗವಾನ್ ಕೊನೆಗೂ ಈ ಸಂಕಷ್ಟದಿಂದ ಪಾರಾಗಿದ್ದಾರೆ. ಸಾಗರ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದಾಖಲಾದ ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಗೈರು ಹಾಜರಾದ ಕಾರಣ ನ್ಯಾಯಾಲಯದಿಂದ ಜಾಮೀನು ರಹಿತ ಬಂಧನದ ವಾರೆಂಟ್ ಪಡೆದಿದ್ದರು. ಆದರೆ ಪ್ರೊ. ಭಗವಾನ್ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಅರ್ಜಿ ಸಂಬಂಧ ವಿಚಾರಣೆ ನಡೆಸಿದ ೫ ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರಾದ ಪ್ರಭಾವತಿ ಅವರು ಆರೋಪಿ ಪ್ರೊ. ಭಗವಾನ್ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.

೧ ಲಕ್ಷ ರು. ವೈಯುಕ್ತಿಕ ಬಾಂಡ್ ನೀಡಿ, ೧೦ ದಿನಗಳ ಒಳಗಾಗಿ ಪೊಲೀಸರ ಮುಂದೆ ಹಾಜರಾಗುವಂತೆ ನ್ಯಾಯಾಧೀಶರು ಆದೇಶಿಸಿದರು.

Tap to resize

Latest Videos

ರಾಮ ಮಂದಿರ ಏಕೆ ಬೇಡ? ಎಂಬ ಕೃತಿ ಸಂಬಂಧ ಸಾಗರದ ಇಕ್ಕೇರಿಯ ಆರ್‌ಎಸ್‌ಎಸ್ ಕಾರ್ಯಕರ್ತ ಮಹಾಬಲೇಶ್ವರ ಅವರು ಸಾಗರದ ನ್ಯಾಯಾಲಯದಲ್ಲಿ ಪ್ರೊ. ಭಗವಾನ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ವಿಚಾರಣೆ ನಡೆಸಿದ ಸಾಗರ ನ್ಯಾಯಾಲಯವು ಪ್ರೊ ಭಗವಾನ್ ವಿರುದ್ದ ಐಪಿಸಿ ಸೆಕ್ಷನ್ ೨೯೫(ಎ) ರಡಿಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಿಕೊಂಡು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್‌ ನೀಡಿತ್ತು. ಆದರೆ ಹಲವು ಬಾರಿ ಸಮನ್‌ಸ್‌ ನೀಡಿದ ಬಳಿಕವೂ ಪ್ರೊ. ಭಗವಾನ್ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿ ಮೈಸೂರು ಎಸ್‌ಪಿ ಮೂಲಕ ಜಾರಿ ಮಾಡಿತ್ತು.

ಹೇ ಭಗವಾನ್! ‘ಮೈಸೂರು ಅರಸರಿಗಿಂತಲೂ ಮುನ್ನ ಕೆಆರ್‌ಎಸ್‌ ಕನಸು ಕಂಡಿದ್ದು ಟಿಪ್ಪು!’

click me!