ರಾಜಕಾಲುವೆ ಮೇಲೆ ಉದ್ಯಾನ ನಿರ್ಮಾಣ : ಸ್ಥಳೀಯರಿಂದ ವಿರೋಧ

By Ravi Janekal  |  First Published Oct 1, 2022, 7:43 AM IST

ಗದಗ ನಗರದ ಹೃದಯ ಭಾಗದಲ್ಲಿರೋ ಜವಳಗಲ್ಲಿ ವ್ಯಾಪ್ತಿಯ ರಾಜ ಕಾಲುವೆ ಸ್ಲ್ಯಾಬ್ ಮೇಲೆ ಉದ್ಯಾನ ನಿರ್ಮಿಸುತ್ತಿರುವುದನ್ನು ಸ್ಥಳೀಯರು ವಿರೋಧಿಸಿದ್ದಾರೆ. ಉದ್ಯಾನ ನಿರ್ಮಾಣದಿಂದ ಸ್ಥಳೀಯರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಮತ್ತು ಉದ್ಯಾನ ನನಿರ್ಮಾಣವಾದಲ್ಲಿ ಕುಡುಕರು ಬೀಡುಬಿಡುವ ಸಾಧ್ಯತೆ ಇದೆ. ಇದು ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗಲಿದೆ ಎಂದು ವಿರೋಧ.


ಗದಗ (ಅ.1) : ನಗರದ ಹೃದಯ ಭಾಗದಲ್ಲಿರೋ ಜವಳಗಲ್ಲಿ ವ್ಯಾಪ್ತಿಯ ರಾಜ ಕಾಲುವೆ ಸ್ಲ್ಯಾಬ್ ಮೇಲೆ ಉದ್ಯಾನ ನಿರ್ಮಿಸುತ್ತಿರುವುದನ್ನು ಸ್ಥಳೀಯರು ವಿರೋಧಿಸಿದ್ದಾರೆ.

ಒತ್ತುವರಿ ತೆರವು ಮತ್ತೆ ಆರಂಭ, ಲೇಕ್‌ವ್ಯೂ ಅಪಾರ್ಚ್‌ಮೆಂಟಿಂದ ಒತ್ತುವರಿ ಆಗಿದ್ದ ಜಾಗ ತೆರವು

Latest Videos

undefined

ಕಾಲುವೆ ಪಕ್ಕದಲ್ಲೇ ಮನೆಗಳಿದ್ದು, ಮನೆಗಳ ರಸ್ತೆ ಬಂದ್ ಮಾಡಿ ಉದ್ಯಾನ ನಿರ್ಮಿಸಲಾಗ್ತಿದೆ. ಉದ್ಯಾನ ನಿರ್ಮಾಣವಾದ್ರೆ ಸ್ಥಳೀಯರಿಗೆ ಲಾಭಕ್ಕಿಂತ ಹೆಚ್ಚಿನ ಸಮಸ್ಯೆಯಾಗುತ್ತೆ. ಮಾರ್ಕೆಟ್ ಏರಿಯಾದಿಂದ ಬರುವ ಕುಡುಕರು ಉದ್ಯಾನವನದಲ್ಲಿ ಬೀಡುಬಿಡುವ ಸಾಧ್ಯತೆ ಇದೆ. ಕುಡುಕರಿಂದ ಸ್ಥಳೀಯ ನಿವಾಸಿಗಳು ಮಹಿಳೆಯರು, ಮಕ್ಕಳಿಗೆ ತೊಂದರೆಯಾಗುತ್ತದೆ ಎಂಬ ಕಾರಣದಿಂದ ಸ್ಥಳೀಯರು ಯಾವುದೇ ಕಾರಣಕ್ಕೂ ರಾಜಕಾಲುವೆ ಮೇಲೆ ಉದ್ಯಾನ ನಿರ್ಮಾಣ ಮಾಡಬಾರದು ಎಂದು ಆಗ್ರಹಿಸಿದ್ದಾರೆ.

ಎಸಿಪಿ /ಎಸ್ ಟಿಪಿ ಅನುಧಾನದಲ್ಲಿ ಜುಲೈ 2021 ರಲ್ಲೇ ಕಾಮಗಾರಿಗೆ ಅನುಮೋದನೆ ಸಿಕ್ಕಿತ್ತು. ಯೋಜನೆಯಡಿ ಜವಳಗಲ್ಲಿ 17/18 ವಾರ್ಡ್ ಮಧ್ಯದ ರಾಜಕಾಲುವೆ ಮೇಲೆ ಉದ್ಯಾನ, ಗೌರವ ಘಟಕ, ಸಮುದಾಯ ಕಟ್ಟಡ ಕಟ್ಟಲು ಅನುಮೋದನೆ ಸಿಕ್ಕಿತ್ತು. ಯೋಜನೆಯಂತೆ ಗೌರಿ ಶಂಕರ್ ಲಾಡ್ಜ್ ನಿಂದ ಡಿಸಿ ಮಿಲ್ ವರೆಗೆ 1 ಕೋಟಿ ಅನುದಾನದಲ್ಲಿ ಉದ್ಯಾನ ಕೆಲಸ ನಡೆದಿತ್ತು.. ಆದ್ರೆ, ಸ್ಥಳೀಯರ ವಿರೋಧದ ಹಿನ್ನೆಲೆ ಸ್ಥಗಿತವಾಗಿದೆ.. 

ನಗರಸಭೆ ಪೂರ್ವಾನುಮತಿ ಪಡೆಯದೇ ಕೆಲಸ ನಡೆದಿದೆ ಅಂತಾ ನಗರಸಭೆ ಅಧ್ಯಕ್ಷೆ ಉಷಾ ದಾಸರ್ ಆಕ್ಷೇಪಣೆ ಸಲ್ಲಿಸಿದ್ರು.‌ ಇದರಿಂದಾಗಿ 19ನೇ ತಾರೀಕು ಪೌರಾಯುಕ್ತ ರಮೇಶ್ ಸುಣಗಾರ, ಕಾಮಗಾರಿ ಸ್ಥಗಿತಗೊಳಿಸುವಂತೆ ಕೋರಿ, ನಿರ್ಮಿತಿ ಕೇಂದ್ರಕ್ಕೆ ಪತ್ರ ಬರೆದಿದ್ರು. ಆದ್ರೆ, ಪತ್ರಕ್ಕೆ ಕ್ಯಾರೇ ಅನ್ನದ ನಿರ್ಮಿತಿ ಕೇಂದ್ರ ಕಾಮಗಾರಿ ಮುಂದುವರಿಸಿದ್ರು.. ಸದ್ಯ ಸ್ಥಳೀಯರ ವಿರೋಧದ ಹಿನ್ನೆಲೆ ಕಾಮಗಾರಿ ಸ್ಥಗಿತಗೊಂಡಿದೆ. ಗದಗ್‌ನಲ್ಲಿ ಲಂಚ ಸ್ವೀಕರಿಸುತ್ತಿದ್ದ ಅಗ್ನಿಶಾಮಕ ಅಧಿಕಾರಿ ಲೋಕಾಯುಕ್ತ ಬಲೆಗೆ

click me!