ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಶಾಸಕ ಸಿ.ಟಿ.ರವಿ ನೀಡಿರುವ ಹೇಳಿಕೆಯನ್ನು ಖಂಡಿಸಿ ಇಂದು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಸೆ.17): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಶಾಸಕ ಸಿ.ಟಿ.ರವಿ ನೀಡಿರುವ ಹೇಳಿಕೆಯನ್ನು ಖಂಡಿಸಿ ಇಂದು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ತಾಲ್ಲೂಕು ಕಛೇರಿಯಿಂದ ಶಾಸಕ ಸಿ.ಟಿ ರವಿಯ ವಿರುದ್ದ ಧಿಕ್ಕಾರಗಳನ್ನು ಕೂಗಿ ಪ್ರತಿಭಟನೆ ಮೆರವಣಿಗೆ ನಡೆಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡರು.
ಸಿ.ಟಿ.ರವಿ ಮುಖವಾಡ ಧರಿಸಿ ಕುಡುಕನಂತೆ ನೃತ್ಯ: ಮಾಜಿ ಸಿದ್ದರಾಮಯ್ಯ ಕಚ್ಚೆ ಹರಕು ಎನ್ನುವ ಸಿ.ಟಿ.ರವಿ ಹೇಳಿಕೆ ವಿರುದ್ಧ ಕಾಂಗ್ರೆಸ್ ಹಮ್ಮಿಗೊಂಡಿದ್ದ ಪ್ರತಿಭಟನೆಯಲ್ಲಿ ಸಿ.ಟಿ.ರವಿ ಮುಖವಾಡ ಧರಿಸಿದ ಕಾಂಗ್ರೆಸ್ ಕಾರ್ಯಕರ್ತ ಕುಡುಕನಂತೆ ನೃತ್ಯ ಮಾಡಿ ವ್ಯಂಗ್ಯ ಮಾಡಿದರು. ಎಮ್.ಜಿ.ರಸ್ತೆಯಲ್ಲಿ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ರಸ್ತೆ ಉದ್ದಕ್ಕೂ ಮುಖವಾಡ ಧರಿಸಿ ಕುಡುಕನಂತೆ ನೃತ್ಯ ಮಾಡಿ ಸಿ.ಟಿ.ರವಿ ವಿರುದ್ಧ ವ್ಯಂಗ್ಯ ಮಾಡಲಾಯಿತು.
ಹಿಂದೂ ಹುಡುಗಿ-ಮುಸ್ಲಿಂ ಹುಡುಗ ವಿವಾಹಕ್ಕೆ ಅಡ್ಡಿ: ಹಿಂದೂ ಕಾರ್ಯಕರ್ತರ ವಿರುದ್ಧ ಕೇಸ್ ಬುಕ್
ಪ್ರತಿಭಟನಾ ಸಭೆಯಲ್ಲಿ ಶಾಸಕ ಸಿ.ಟಿ.ರವಿ ವಿರುದ್ದ ವಾಗ್ದಾಳಿ: ನಗರದ ಅಜಾದ್ ಪಾರ್ಕ್ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಡಾ.ಕೆ.ಪಿ ಅಂಶುಮಂತ್ ಮಾತನಾಡಿ ಇತ್ತೀಚೆಗೆ ದಾವಣಗೆರೆಯಲ್ಲಿ ಜರುಗಿದ ಸಿದ್ದರಾಮಯ್ಯ ಜಯಂತಿ ಕಾರ್ಯಕ್ರಮಕ್ಕೆ ಸೇರಿದ್ದ ಆಗಾಧ ಜನಸ್ತೋಮವನ್ನು ಕಂಡು ಬಿಜೆಪಿಗರು ಹತಾಶರಾಗಿ ಅವರ ವಿರುದ್ದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕ್ಷೇತ್ರದ ಶಾಸಕ ಸಿ.ಟಿ ರವಿ ಸಭ್ಯತೆಯ ಎಲ್ಲೆ ಮೀರಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಚಿಕ್ಕಮಗಳೂರು: ಜಪಾವತಿ ನದಿಯ ಅಬ್ಬರಕ್ಕೆ ಕೊಚ್ಚಿ ಹೋದ ಕಾಫಿ, ಅಡಿಕೆ ತೋಟ, ಕಂಗಾಲಾದ ರೈತ
ಸಿಟಿ ರವಿಯಿಂದ ಜಿಲ್ಲೆಗೆ ಕಳಂಕ: ವಿಧಾನ ಪರಿಷತ್ ಮಾಜಿ ಶಾಸಕಿ ಗಾಯಿತ್ರಿಶಾಂತೇಗೌಡ ಮಾತನಾಡಿ ಪ್ರಕೃತಿ ಸೌಂದರ್ಯ ಮತ್ತು ಆತಿಥ್ಯಕ್ಕೆ ಚಿಕ್ಕಮಗಳೂರು ಜಿಲ್ಲೆಗೆ ಪ್ರಪಂಚದಲ್ಲಿಯೇ ಒಳ್ಳೆಯ ಹೆಸರಿದೆ ಅಂತಹ ಜಿಲ್ಲೆಗೆ ಕಳಂಕ ತರುತ್ತಿದ್ದಾರೆ ಎಂದು ಕಿಡಿಕಾರಿದ ಅವರು ಸಿ.ಟಿ ರವಿ ಜೇನುಗೂಡಿಗೆ ಕಲ್ಲು ಹೊಡೆದಿದ್ದಾರೆ. ಮುಂದಿನ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಿ.ಟಿ ರವಿಯದು ಹರುಕು ಬಾಯಿ, ಕೊಳಕು ಮನಸ್ಸು, ಮನಸ್ಸಿನಲ್ಲಿರುವುದೇ ಬಾಯಿಯಲ್ಲಿ ಬರುತ್ತದೆ ಇಂತಹ ವ್ಯಕ್ತಿ ಸಿದ್ದರಾಮಯ್ಯರಂತಹ ಸಭ್ಯ ರಾಜಕಾರಣಿಯನ್ನು ಟೀಕಿಸುತ್ತಿದ್ದಾರೆ ಎಂದು ಹರಿಹಾಯ್ದರು.