ನಿರುದ್ಯೋಗಿಗಳಿಗೆ ಮಾಸಿಕ 6ಸಾವಿರ ಭತ್ಯೆ : ಡಿಕೆ ಶಿವಕುಮಾರ್

By Kannadaprabha NewsFirst Published Apr 10, 2021, 10:37 AM IST
Highlights

ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಉಪ ಚುನಾವಣೆ ಹಿನ್ನೆಲೆ ವಿವಿಧ ಪಕ್ಷಗಳು ಭರ್ಜರಿ ತಯಾರಿಯಲ್ಲಿ ತೊಡಗಿವೆ. ತಮ್ಮದೇ ಗೆಲುವಿಗಾಗಿ ಕಸರತ್ತು ನಡೆಸುತ್ತಿದ್ದು ಮತದಾರನ ಬಳಿ  ಮತ ಸೆಳೆಯಲು ವಿವಿಧ ರೀತಿಯ ಯೋಜನೆಗಳ ಬಗ್ಗೆ ಘೋಷಣೆ ಮಾಡುತ್ತಿದ್ದಾರೆ. ಇತ್ತ ಕೈ ನಾಯಕರು ನಿರುದ್ಯೋಗಿಗಳಿಗೆ ಭತ್ಯೆ ನಿಡುವುದಾಗಿ ಹೇಳಿದ್ದಾರೆ. 

  ಬಸವಕಲ್ಯಾಣ (ಏ.10):  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಲ್ಲಿ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು  6 ಸಾವಿರ ರು. ಭತ್ಯೆ ನೀಡಲಾಗುವುದು. ಈ ಘೋಷಣೆಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರ್ಪಡೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಭರವಸೆ ನೀಡಿದರು.

ತಾಲೂಕಿನ ಹಾರಕೂಡ ಗ್ರಾಮದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಏನು ಕ್ರಮ ಕೈಗೊಂಡಿದೆ? ಜನರಿಗೆ ಉದ್ಯೋಗ ನೀಡುವ ಭರವಸೆ ಏನಾಯ್ತು? ನಮ್ಮ ಸರ್ಕಾರವೇನಾದರೂ ಅಧಿಕಾರಕ್ಕೆ ಬಂದರೆ ಬಡವರಿಗೆ 10 ಕೆಜಿ ಅಕ್ಕಿ ನೀಡಲಾಗುವದು ಎಂದರು.

ಲಿಂಗಾಯತರೂ ನಮ್ಮವರೇ, ಮರಾಠಿಗರೂ ಅಣ್ಣ ತಮ್ಮಂದಿರೇ: ಡಿಕೆಶಿ

ರಾಜ್ಯದಲ್ಲಿ ಈ ಹಿಂದೆ ನಡೆದ ಆಪರೇಷನ್‌ ಕಮಲದಲ್ಲಿ  30-40 ಕೋಟಿ ಹಣ ನೀಡಿ ಶಾಸಕರನ್ನು ಖರೀದಿಸಲಾಗಿದೆ. ದಿ. ಶಾಸಕ ಬಿ.ನಾರಾಯಣರಾವ್‌ ಸೇರಿ ಕಾಂಗ್ರೆಸ್‌ನ ನಿಷ್ಠಾವಂತ ಶಾಸಕರನ್ನು ಬಿಜೆಪಿ ಸೆಳೆಯಲು ಯತ್ನಿಸಿತ್ತು. ಆದರೆ ನಾರಾಯಣರಾವ್‌ ಸ್ವಾಭಿಮಾನದಿಂದ ಬದುಕಿ ಕಲ್ಯಾಣದ ಗೌರವ ಉಳಿಸಿ ತಮ್ಮ ಸ್ಥಾನವನ್ನು ಬಿಜೆಪಿಗೆ ಮಾರಿಕೊಂಡಿಲ್ಲ. ಅವರಿಗೆ ಕಾಂಗ್ರೆಸ್‌ ಮೇಲೆ ಅಷ್ಟೊಂದು ಪ್ರೀತಿ, ಗೌರವವಿತ್ತು ಎಂದರು.

click me!