Davanagere: ಸಚಿವ-ಸಂಸದರ ನಿರ್ಲಕ್ಷ್ಯ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

Published : Nov 18, 2022, 01:38 PM IST
Davanagere: ಸಚಿವ-ಸಂಸದರ ನಿರ್ಲಕ್ಷ್ಯ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ಸಾರಾಂಶ

ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ಮಿತಿ ಮೀರಿದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯ ಖಂಡಿಸಿ ವಿಪಕ್ಷ ಕಾಂಗ್ರೆಸ್‌ನ ಸದಸ್ಯರು, ಮುಖಂಡರು ಇಲ್ಲಿನ ವೀರ ಮದಕರಿ ನಾಯಕ ವೃತ್ತದಲ್ಲಿ ಗುರುವಾರ ಪ್ರತಿಭಟಿಸಿದರು.

ದಾವಣಗೆರೆ (ನ.18): ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ಮಿತಿ ಮೀರಿದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯ ಖಂಡಿಸಿ ವಿಪಕ್ಷ ಕಾಂಗ್ರೆಸ್‌ನ ಸದಸ್ಯರು, ಮುಖಂಡರು ಇಲ್ಲಿನ ವೀರ ಮದಕರಿ ನಾಯಕ ವೃತ್ತದಲ್ಲಿ ಗುರುವಾರ ಪ್ರತಿಭಟಿಸಿದರು. ನಗರದ ಹೊಂಡದ ರಸ್ತೆಯ ವೀರ ಮದಕರಿ ನಾಯಕ ವೃತ್ತದಲ್ಲಿ ಪಾಲಿಕೆ ವಿಪಕ್ಷ ನಾಯಕ ಜಿ.ಎಸ್‌. ಮಂಜುನಾಥ ಗಡಿಗುಡಾಳ್‌ ನೇತೃತ್ವದಲ್ಲಿ ಪಾಲಿಕೆ ಆಡಳಿತ ಪಕ್ಷ ಬಿಜೆಪಿ ಹಾಗೂ ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಮಂಜುನಾಥ ಗಡಿಗುಡಾಳ ಮಾತನಾಡಿ, ಪಾಲಿಕೆ ಬಿಜೆಪಿ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ಮೇರೆ ಮೀರುತ್ತಿದೆ. ಅಧಿಕಾರಿಗಳೂ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಜಕಾತಿ ಅವಧಿ ವಿಸ್ತರಣೆ ಹೆಸರಿನಲ್ಲಿ ಪಾಲಿಕೆ ವ್ಯವಸ್ಥಾಪಕ ವೆಂಕಟೇಶ ಲೋಕಾಯುಕ್ತರ ಕೈಗೆ ಲಂಚ ಹಣದ ಸಮೇತ ಸಿಕ್ಕಿ ಬಿದ್ದಿದ್ದಾರೆ ಎಂದು ಆಪಾದಿಸಿದರು. ಬಿಜೆಪಿ ಪಾಲಿಕೆ ಸದಸ್ಯರಿಗೂ ಹಣ ಕೊಡದೆ ಯಾವುದೇ ಕೆಲಸ ಆಗುವುದಿಲ್ಲವೆಂದು ಸ್ವತಃ ಅಧಿಕಾರಿಗಳೆ ಹೇಳುತ್ತಿರುವುದನ್ನು ಗಮನಿಸಿದರೆ ಇಡೀ ಪಾಲಿಕೆ ಆಡಳಿತ ಯಂತ್ರ ಭ್ರಷ್ಟಾಚಾರದಲ್ಲಿ ಮುಳುಗಿರುವುದು ಸ್ಪಷ್ಟವಾಗುತ್ತದೆ. 

ವೈದ್ಯರ ನಿರ್ಲಕ್ಷ್ಯದಿಂದ ಹೊಟ್ಟೆ ನೋವಿನಿಂದಾಗಿ ಆಸ್ಪತ್ರೆ ಸೇರಿದ್ದ ಮಹಿಳೆ ಸಾವು

ಭ್ರಷ್ಟಾಚಾರ ವಿರುದ್ಧ ಕ್ರಮಕ್ಕೆ ಮುಂದಾಗಬೇಕಿದ್ದ ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಸಚಿವ ಬಸವರಾಜ ಭೈರತಿ ಭ್ರಷ್ಟರನ್ನು ರಕ್ಷಿಸುವುದಕ್ಕೆ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ ಎಂದು ಅವರು ದೂರಿದರು. ನಗರಾಭಿವೃದ್ಧಿ, ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಭೈರತಿ ಇಲ್ಲಿವರೆಗೆ ಒಂದೇ ಒಂದು ಸಲ ಪಾಲಿಕೆ ಸದಸ್ಯರ ಸಮಸ್ಯೆ ಆಲಿಸಲು ಸಭೆ ಕರೆದಿಲ್ಲ. ಜನನ, ಮರಣ ಪ್ರಮಾಣಪತ್ರ, ಖಾತೆ ಎಕ್ಸ್‌ಟ್ರಾಕ್ಟ್, ಬಿಲ್‌ ಮಂಜೂರು ಮಾಡಲು, ಟೆಂಡರ್‌ ಅವಧಿ ವಿಸ್ತರಣೆ ಹೀಗೆ ಪ್ರತಿಯೊಂದಲ್ಲೂ ಸುಲಿಗೆ ಮಾಡುವ ಅಡ್ಡೆಯಾಗಿ ಪಾಲಿಕೆ ಪರಿವರ್ತನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೆದ್ದಾರಿಯುದ್ದಕ್ಕೂ ಆಟೋ ನಂಬರ್ ಪ್ಲೇಟ್ ರಿಕಗ್ನೇಶನ್ ಕ್ಯಾಮೆರಾ: ಎಸ್ಪಿ ರಿಷ್ಯಂತ್‌

ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಉದಯಕುಮಾರ, ಸದಸ್ಯರಾದ ವಿನಾಯಕ ಪೈಲ್ವಾನ್‌, ಕೆ.ಚಮನ್‌ ಸಾಬ್‌, ಎ.ಬಿ.ರಹೀಂ ಸಾಬ್‌, ಎ.ನಾಗರಾಜ, ಸುಧಾ ಇಟ್ಟಿಗುಡಿ ಮಂಜುನಾಥ, ಮೀನಾಕ್ಷಿ ಜಗದೀಶ, ಶಿವಲೀಲಾ ಕೊಟ್ರಯ್ಯ, ಜಿ.ಡಿ. ಪ್ರಕಾಶ, ಕಬೀರ್‌ ಅಲಿ, ಸೈಯದ್‌ ಚಾರ್ಲಿ, ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ, ಕೆಪಿಸಿಸಿ ವಕ್ತಾರ ಡಿ. ಬಸವರಾಜ, ದೂಡಾ ಮಾಜಿ ಅಧ್ಯಕ್ಷರಾದ ಮಾಲತೇಶ ಜಾಧವ್‌, ಅಯೂಬ್‌ ಪೈಲ್ವಾನ, ಇಟ್ಟಿಗುಡಿ ಮಂಜುನಾಥ, ಚಂದ್ರಪ್ಪ ತರಕಾರಿ, ಕೆ.ಎಲ್‌.ಹರೀಶ ಬಸಾಪುರ, ಬಾಬುರಾವ್‌ ಸಾಳಂಕಿ, ಪಿ.ಜೆ.ನಾಗರಾಜ, ನಿಖಿಲ್‌ ಕೊಂಡಜ್ಜಿ, ಸೀಮೆಣ್ಣೆ ಮಲ್ಲೇಶ, ಮಾಜಿ ಮೇಯರ್‌ಗಳಾದ ಎಚ್‌.ಬಿ.ಗೋಣೆಪ್ಪ, ಅನಿತಾ ಬಾಯಿ ಮಾಲತೇಶ, ಎಸ್‌.ಮಲ್ಲಿಕಾರ್ಜುನ, ಎಂ.ಮಂಜುನಾಥ, ರಾಕೇಶ, ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು.

PREV
Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC