ಮಹಾಲಿಂಗಪುರ ಪುರಸಭೆಯಲ್ಲಿ ಅನುದಾನ ದುರ್ಬಳಕೆ: ಕಾಂಗ್ರೆಸ್ ಸದಸ್ಯರಿಂದ ಪ್ರತಿಭಟನೆ

By Suvarna NewsFirst Published Oct 8, 2021, 1:05 PM IST
Highlights

* ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನಲ್ಲಿರುವ ಮಹಾಲಿಂಗಪುರ ಪಟ್ಟಣ
* ಡಿಸಿ ಮತ್ತು ಪಿಡಿಗೆ ದೂರು ನೀಡಲು ಮುಂದಾದ ಕಾಂಗ್ರೆಸ್‌ ಸದಸ್ಯರು
* ಸೂಕ್ತ ತನಿಖೆಗೆ ಕಾಂಗ್ರೆಸ್‌ ಸದಸ್ಯರ ಆಗ್ರಹ 

ಮಹಾಲಿಂಗಪುರ(ಅ.08): ಮಹಾಲಿಂಗಪುರ(Mahalingapur) ಪುರಸಭೆಯಲ್ಲಿ ಕಾಮಗಾರಿಗಳನ್ನ ಕೈಗೊಳ್ಳುವಾಗ ಮೀಸಲಿಟ್ಟ ದುಡ್ಡನ್ನ ಸಮರ್ಪಕವಾಗಿ ವಿನಿಯೋಗ ಮಾಡಿಲ್ಲ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಪುರಸಭಾ ಸದಸ್ಯರು ನಿನ್ನೆ(ಗುರುವಾರ) ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಂಗ್ರೆಸ್(Congress) ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹಾಗೂ ಪುರಸಭೆ ಕಾಂಗ್ರೆಸ್ ಸದಸ್ಯರಾದ ಜಾವೇದ್‌ ಬಾಗವಾನ್ ಹಾಗೂ ಬಲವಂತಗೌಡರ ನೇತೃತ್ವದಲ್ಲಿ ಪ್ರತಿಭಟನಾ(Protest) ಪಾದಯಾತ್ರೆ ಹೋರಾಟ ನಡೆಸಿದರು. ನಂತರ ಪುರಸಭೆ ಬಳಿ ಧರಣಿ ಕುಳಿತು ತೀವ್ರ ಆಕ್ರೋಶ ಹೊರಹಾಕಿದ್ದಾರೆ. 

ಎಸ್ಸಿ ಎಸ್ಟಿ ಕಾಲೋನಿಗಳಿಗೆ ಮೀಸಲಿಟ್ಟ ಅನುದಾನವನ್ನೂ ಸಹ ಇತರೆ ವಾರ್ಡ್‌ಗಳಿಗೆ ಬಳಕೆ ಜೊತೆಗೆ ಈ ಮೊದಲು ಮಾಡಿದ ಕಾಮಗಾರಿಗಳಿಗೆ ಮತ್ತೇ ಮತ್ತೇ ಹಣ ಮೀಸಲಿಟ್ಟು ಬೇಕಾಬಿಟ್ಟಿಯಾಗಿ ಹಣ ದುರ್ಬಳಕೆಯಾಗುತ್ತಿದೆ. ಈ ಕುರಿತು ಸೂಕ್ತ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಪುರಸಭೆಯಲ್ಲಿ ಸದ್ಯ ಬಿಜೆಪಿ ಆಡಳಿತವಿದ್ದು, ಹೀಗಿರುವಾಗಿ ಪುರಸಭೆಯಲ್ಲಿ(Town Municipal) ಅನುದಾನ ಬಳಕೆ ಮಾಡುವ ವಿಚಾರದಲ್ಲಿ ಸಮರ್ಪಕವಾಗಿ ಕಾಂಗ್ರೆಸ್ಸಿಗರಿಗೆ ನೀಡ್ತಿಲ್ಲ ಅನ್ನೋ ಆರೋಪ ಒಂದೆಡೆಯಾದರೆ ಮತ್ತೊಂದೆಡೆ ಪಟ್ಟಣದ ಎಸ್ಸಿ ಎಸ್ಟಿ ಕಾಲೋನಿಗಳಿಗೆ ಮೀಸಲಿಟ್ಟ ಬರೋಬ್ಬರಿ 75 ಲಕ್ಷ ಹಣವನ್ನ ಬೇರೆ ಬೇರೆಡೆ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗುತ್ತಿರೋ ಬಗ್ಗೆ ಕಾಂಗ್ರೆಸ್‌ನವರು ಆರೋಪ ಮಾಡಿದ್ದಾರೆ‌.

ದಲಿತರು ಸಿಎಂ ಆಗೋದ್ರಲ್ಲಿ ತಪ್ಪೇನಿಲ್ಲ: ಕಾಂಗ್ರೆಸ್‌ ನಾಯಕ ತಿಮ್ಮಾಪೂರ

ಇನ್ನು ಈ ಬಗ್ಗೆ  ಕೇಳೋಕೆ ಹೋದ್ರೂ ಕೇಳೋರಿಲ್ವಂತೆ. ಇನ್ನು ಸಭೆಯಲ್ಲಿ ಚರ್ಚೆ ಮಾಡದೇ ಇರುವ ಅನೇಕ ವಿಷಯಗಳನ್ನ ಠರಾವುಗಳಲ್ಲಿ ಹಾಕಿ ಟೆಂಡರ್ ಕರೆದು ಬೇಕಾಬಿಟ್ಟಿ ಕೆಲಸ ಮಾಡ್ತಿದ್ದಾರಂತೆ. ಹೀಗಾಗಿ ಈ ಸಂಭಂದ ಜಿಲ್ಲಾಧಿಕಾರಿಗಳಿಗೆ ಮತ್ತು ಯೋಜನಾ ನಿರ್ದೆಶಕರಿಗೆ ದೂರು ಸಲ್ಲಿಸಿದ್ದು, ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಅಂತ ಕಾಂಗ್ರೆಸ್ ಸದಸ್ಯ ಜಾವೇದ್ ಬಾಗವಾನ ಒತ್ತಾಯಿಸಿದ್ದಾರೆ. 

ಇನ್ನು ಬಿಜೆಪಿ(BJP) ನೇತೃತ್ವದ ಸರ್ಕಾರ, ಶಾಸಕರು ಇರೋದ್ರಿಂದ ಕಾಂಗ್ರೆಸ್‌ನವರನ್ನ ಕೇಳೋರಿಲ್ಲ ಅನ್ನೋ ವಾದ ಕಾಂಗ್ರೆಸ್ ಪುರಸಭೆ ಸದಸ್ಯರದಾಗಿದೆ. ಇನ್ನು ಮಹಾಲಿಂಗಪುರ ಪುರಸಭೆಗೆ ಅಂದಾಜು ಎರಡೂವರೆ ಕೋಟಿ ಆದಾಯ ಬರುತ್ತಿದ್ದರೆ ಮೂರು ಕೋಟಿಗೂ ಅಧಿಕ ಟೆಂಡರ್ ಕರೆದು ಹಣವನ್ನ ಬೇಕಾಬಿಟ್ಟಿ ದುರ್ಬಳಕೆಗೆ ಮಾಡಲಾಗುತ್ತಿದೆ. ಸಾಲದ್ದಕ್ಕೆ ಈಗ ಮೊದಲು ಮಾಡಿದ ಕಾಮಗಾರಿಗಳು ಪೂರ್ಣಗೊಂಡಿದ್ದರ ಮೇಲೆಯೇ ಅದಕ್ಕೆ ಅನುದಾನ ಹಾಕಿ ಮತ್ತೆ  ಟೆಂಡರ್ ಕರೆದು ಹಣ ಪೋಲು ಮಾಡುತ್ತಿದ್ದು, ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಅಂತ ಕಾಂಗ್ರೆಸ್ ಪುರಸಭೆ ಸದಸ್ಯ ಬಲವಂತಗೌಡ ಆಗ್ರಹಿಸಿದ್ದಾರೆ. 
 

click me!