ಬ್ಯಾನರಲ್ಲಿ ಪುನೀತ್‌ ಚಿತ್ರ ಬಳಸದ್ದಕ್ಕೆ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಕಿಡಿ

By Kannadaprabha NewsFirst Published Feb 8, 2023, 6:55 AM IST
Highlights

'ಪುನೀತ್‌ ರಾಜ್‌ಕುಮಾರ್‌ ರಸ್ತೆ ನಾಮಕರಣ ಸಮಾರಂಭದ ಬ್ಯಾನರ್‌ನಲ್ಲಿ ಪುನೀತ್‌ ಅವರ ಭಾವಚಿತ್ರವೇ ಇಲ್ಲ. ಕಂದಾಯ ಸಚಿವ ಆರ್‌.ಅಶೋಕ್‌ ಅವರೇ ಈ ಬ್ಯಾನರ್‌ನಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಚಿತ್ರ ಹುಡುಕಿಕೊಡಿ’ ಎಂದು ಪ್ರಶ್ನಿಸಿದ ಕಾಂಗ್ರೆಸ್‌. 

ಬೆಂಗಳೂರು(ಫೆ.08):  ನಗರದ ನಾಯಂಡಹಳ್ಳಿ ಜಂಕ್ಷನ್‌ನಿಂದ ಬನ್ನೇರುಘಟ್ಟ ರಸ್ತೆಯ ಮೆಗಾಸಿಟಿ ಮಾಲ್‌ವರೆಗಿನ ಹೊರ ವರ್ತುಲ ರಸ್ತೆಗೆ ಮಂಗಳವಾರ ನಟ ಪುನೀತ್‌ ರಾಜ್‌ಕುಮಾರ್‌ ಅವರ ಹೆಸರನ್ನು ನಾಮಕರಣ ಮಾಡಲಾದ ಕಾರ್ಯಕ್ರಮಕ್ಕೆ ಸಂಬಂಧಿಸಿದ ಬ್ಯಾನರ್‌ಗಳಲ್ಲಿ ಪುನೀತ್‌ ಅವರ ಭಾವಚಿತ್ರ ಪ್ರಕಟಿಸದ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್‌ ಸರ್ಕಾರವನ್ನು ಟೀಕಿಸಿದೆ.

ಕರ್ನಾಟಕ ರತ್ನ ಡಾ.ಪುನೀತ್‌ ರಾಜ್‌ಕುಮಾರ್‌ ರಸ್ತೆ ನಾಮಕರಣ ಸಮಾರಂಭಕ್ಕೆ ಸಂಬಂಧಿಸಿದಂತೆ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಅಳವಡಿಸಲಾಗಿದ್ದ ಕೇವಲ ಬಿಜೆಪಿ ನಾಯಕರ ಭಾವಚಿತ್ರಗಳಿರುವ ಬ್ಯಾನರನ್ನು ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌, ‘ಪುನೀತ್‌ ರಾಜ್‌ಕುಮಾರ್‌ ರಸ್ತೆ ನಾಮಕರಣ ಸಮಾರಂಭದ ಬ್ಯಾನರ್‌ನಲ್ಲಿ ಪುನೀತ್‌ ಅವರ ಭಾವಚಿತ್ರವೇ ಇಲ್ಲ. ಕಂದಾಯ ಸಚಿವ ಆರ್‌.ಅಶೋಕ್‌ ಅವರೇ ಈ ಬ್ಯಾನರ್‌ನಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಚಿತ್ರ ಹುಡುಕಿಕೊಡಿ’ ಎಂದು ಪ್ರಶ್ನಿಸಿದೆ.

ಬೆಂಗಳೂರು ವಿವಿ ಬಿಕಾಂ ಪಠ್ಯ ಪುಸ್ತಕದಲ್ಲಿ ಪುನೀತ್‌ ರಾಜ್‌ಕುಮಾರ್‌!

ಮತ್ತೊಂದು ಟ್ವೀಟ್‌ನಲ್ಲಿ ರೈತರ ಸಾಲ ಮನ್ನಾ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಅವರು ನೀಡಿರುವ ಹೇಳಿಕೆಯ ಕುರಿತು ‘ರೈತ ವಿರೋಧಿ ಬಿಜೆಪಿ’ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಆಕ್ಷೇಪಿಸಿದ್ದು, ‘ರೈತರ ಸಾಲ ಮನ್ನಾ ಮಾಡುವುದು ನಿಷ್ೊ್ರಯೋಜಕ ಎಂದಿರುವ ತೇಜಸ್ವಿ ಸೂರ್ಯ ಅವರೇ, ಉದ್ಯಮಿಗಳ .10 ಲಕ್ಷ ಕೋಟಿ ಸಾಲವನ್ನು ಎನ್‌ಪಿಎ ಹೆಸರಲ್ಲಿ ಎಳ್ಳುನೀರು ಬಿಟ್ಟಿದ್ದು ಆರ್ಥಿಕತೆಯ ಉಪಯೋಗವೇ? ತಾಲಿಬಾನಿಗಳ ಆಷ್ಘಾನಿಸ್ಥಾನಕ್ಕೆ ಪ್ರತಿ ವರ್ಷ ನೂರಾರು ಕೋಟಿ ದಾನ ಮಾಡುವುದು ದೇಶದ ಆರ್ಥಿಕತೆಗೆ ಸಹಾಯಕವೇ ಪ್ರಶ್ನಿಸಿದೆ.

click me!