ಬಿಜೆಪಿಯಲ್ಲಿ ಸಾಕಷ್ಟು ಶಾಸಕರು ಅಸಮಧಾನಿತರಿದ್ದಾರೆ| ಈ ಸರಕಾರ ಬಹಳಷ್ಟು ದಿನ ನಡೆಯೋದಿಲ್ಲ ಎನ್ನುವ ಮಾತುಗಳೂ ಸಹ ಕೇಳಿ ಬರುತ್ತಿವೆ: ಹಿಟ್ನಾಳ|
ಕೊಪ್ಪಳ(ಜ.16): ಸಿಡಿ ಇದೆಯೋ, ಇಲ್ಲವೋ ಎಂಬುದರ ಬಗ್ಗೆ ತನಿಖೆ ಆಗಲಿ. ಸಿಡಿ ವಿಚಾರ ಏನಿದೆಯೋ ನನಗೆ ಗೊತ್ತಿಲ್ಲ. ಕಾನೂನು ಪ್ರಕಾರ ತನಿಖೆಯಾಗಲಿ. ಅವರವರ ಶಾಸಕರೇ ಅದನ್ನ ಹೊರಗೆ ಹಾಕುತ್ತಿದ್ದಾರೆ. ನಮಗೂ ಸಂಶಯ ಇದೆ, ಏನಿದೆ ಹೊರಗೆ ಬರಲಿ. ಸಿಡಿ ವಿಚಾರದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಯಾಕೆ ವೀಕ್ ಆಗಿದ್ದಾರೆ ಗೊತ್ತಿಲ್ಲ. ಸಿಡಿ ವಿಷಯ ಹೊರಗೆ ಬರಲಿ ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ.
ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಸಾಕಷ್ಟು ಶಾಸಕರು ಅಸಮಧಾನಿತರಿದ್ದಾರೆ. ಈ ಸರಕಾರ ಬಹಳಷ್ಟು ದಿನ ನಡೆಯೋದಿಲ್ಲ ಎನ್ನುವ ಮಾತುಗಳೂ ಸಹ ಕೇಳಿ ಬರುತ್ತಿವೆ ಎಂದು ತಿಳಿಸಿದ್ದಾರೆ.
ಕಾಲೇಜು ಪ್ರಾರಂಭವಾದರೂ ಪಾಠ ಮಾಡೋಕೆ ಉಪನ್ಯಾಸಕರೇ ಇಲ್ಲ..!
ದನದ ಮಾಂಸ ತಿನ್ನುತ್ತೇನೆ ಎನ್ನುವ ಸಿದ್ದರಾಮಯ್ಯರನ್ನ ಜೈಲಿಗೆ ಹಾಕ್ತೀವಿ ಎಂದು ಸಚಿವರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ನಾನು ತಿನ್ನುತ್ತೇನಿ, ತಿನ್ನದೆ ಇರಬಹುದು ಎಂದು ಹೇಳಿದ್ದಾರೆ. ಬಿಜೆಪಿ ಮುಖಂಡರೇ ಹೆಚ್ಚು ದನದ ಮಾಂಸ ರಫ್ತು ಮಾಡುತ್ತಾರೆ. ಹಾಗಾದ್ರೆ ರಫ್ತು ಮಾಡುವವರನ್ನು ಏಕೆ ಜೈಲಿಗೆ ಹಾಕಿಲ್ಲ. ಸರಕಾರದಲ್ಲಿ ಸ್ಪಷ್ಟತೆ ಇಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ ಮೇಲೆ ಒಂದೇ ಒಂದು ಪೈಸೆ ಅನುದಾನ ನೀಡಿಲ್ಲ. ನಾವು 10 ವರ್ಷ ಹಿಂದಕ್ಕೆ ಹೋಗಿದ್ದೇವೆ. ಅನುದಾನದ ವಿಷಯದಲ್ಲಿ ತಾರತಮ್ಯ ಇದೆ, ಬಿಜೆಯವರಿಗೂ ಅಸಮಧಾನ ಇದೆ. ಸರಕಾರ ಅಭಿವೃದ್ಧಿ ವಿಷಯದಲ್ಲಿ ಇನ್ನೂ ಟೆಕಾಫ್ ಆಗಿಲ್ಲ ಎಂದಿದ್ದಾರೆ.