Bengaluru Rains:  ಬಿಜೆಪಿ ಬಂದು ಬ್ರಾಂಡ್ ಬೆಂಗಳೂರು ಹೋಯ್ತು, ರಾಮಲಿಂಗಾ ರೆಡ್ಡಿ ಕಿಡಿ

By Gowthami KFirst Published Sep 5, 2022, 5:19 PM IST
Highlights

ಬೆಂಗಳೂರು ನಗರದಲ್ಲಿ ಮಳೆ ಅವಾಂತರ ಹಿನ್ನೆಲೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ಸರಕಾರಕ್ಕೆ ಅಭಿವೃದ್ಧಿ ಮಾಡುವ ಇಚ್ಛಾಶಕ್ತಿಯೇ ಇಲ್ಲ ಎಂದು ಕಿಡಿಕಾರಿದ್ದಾರೆ.

ಬೆಂಗಳೂರು (ಸೆ.5): ಬೆಂಗಳೂರಿನಲ್ಲಿ ಮಳೆ ಅವಾಂತರ ಹಿನ್ನೆಲೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ನಿನ್ನೆ ಅತಿ ಹೆಚ್ಚು ಮಳೆ ಬಿದ್ದಿದೆ‌ 148 ಮಿಲಿ‌ಮಿಟರ್ ನಷ್ಟು ಮಳೆ ಬಿದ್ದಿದೆ‌. ಮಳೆ ಬರುವುದು ಪ್ರಕೃತಿ ನಿಯಮ ಆದ್ರೆ ನಾವು ಯಾವ ರೀತಿ ಎದುರಿಸುತ್ತೇವೆ ಎಂಬುದು ಮುಖ್ಯ. ನಮ್ಮ ಸರ್ಕಾರ ಇದ್ದಾಗಾ ತಡೆ ಗೋಡೆಗಳನ್ನು ಕಟ್ಟಿದ್ದೇವೆ. ನಾವು ಅಧಿಕಾರದಲ್ಲಿದ್ದಾಗ ಪಕ್ಷಪಾತೀತವಾಗಿ ಕ್ಷೇತ್ರಗಳ ಅಭಿವೃದ್ಧಿಗೆ ಹಣ ಕೊಟ್ಟಿದ್ದೆವು. ನಗರದ ಎಲ್ಲಾ ರಾಜ ಕಾಲುವೆಗಳಿಗೆ ತಡೆಗೋಡೆ ಕಟ್ಟಿದ್ದೆವು. ಮಿಲಿಟರಿ ತರ ಈ ಸಂದರ್ಭದಲ್ಲಿ ಕೆಲಸ ಮಾಡಬೇಕು. ಮಂತ್ರಿಗಳಲ್ಲಿ ಹೊಂದಾಣಿಕೆಯಿಲ್ಲ, ಅವರ ಕ್ಷೇತ್ರ ಬಿಟ್ಟು ಬರುವುದಿಲ್ಲ‌. ಇಂಜಿನಿಯರ್ ಗಳ ಕಡೆಯಿಂದ ಸರ್ಕಾರ ಮಾಡಬೇಕು. ಸಿಎಂ ಅವರೇ ಉಸ್ತುವಾರಿ ಇದ್ದಾರೆ‌. ಸಮಸ್ಯೆ ಬಗೆಹರಿಯುತ್ತದೆ ಎಂದು ಭಾವಿಸಿದ್ದೇವೆ. ಈ ಪರಿಸ್ಥಿತಿಯನ್ನು ಸರ್ಕಾರ ಸರಿಯಾಗಿ ನಿಭಾಯಿಸಿಲ್ಲ. ಮಳೆಗೆ ಕಾಂಗ್ರೆಸ್ ಶಾಸಕರು, ಬಿಜೆಪಿ ಶಾಸಕರು, ಜೆಡಿಎಸ್ ಶಾಸಕರ ಎಂದು ಏನಿಲ್ಲ‌. ಮಳೆ ಬರುವುದು ಸಹಜ, ಅದನ್ನು ಸಮರ್ಥವಾಗಿ ಎದುರಿಸಬೇಕು. ಎಂದು ರಾಜ್ಯ ಸರ್ಕಾರದ ವಿರುದ್ಧ ರಾಮಲಿಂಗರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸಿಟಿ ರೌಂಡ್ಸ್ ವಿಚಾರ: ಮುಖ್ಯಮಂತ್ರಿಗಳು ನಗರ ಪ್ರದಕ್ಷಿಣೆ ಹಾಕುವ ವಿಚಾರವಾಗಿ ಮಾತನಾಡಿದ  ರಾಮಲಿಂಗರೆಡ್ಡಿ ಅವರು, ನಗರ ಪ್ರದಕ್ಷಿಣೆ ಮಾಡುವುದು ತಪ್ಪಲ್ಲ. ಆದರೆ ಭೇಟಿ ಬಳಿಕ ಫಾಲೋ ಅಪ್ ಇರಬೇಕು.  ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಸರ್ಕಾರ ಮಾಡಬೇಕು. ಸಿಎಂ ಒಂದು ವರ್ಷದ ಮುಂಚೆಯೇ ಸಾವಿರಾರು ಕೋಟಿ ಘೋಷಣೆ ಮಾಡಿದ್ರು. ಆದರೆ ಇನ್ನು ಟೆಂಡರ್ ಆಗಿಲ್ಲ. ಈಗೀಗ ಟೆಂಡರ್ ಕೆರೆಯುತ್ತಿದ್ದಾರೆ. ಬಿಜೆಪಿ ಅವರಿಗೆ ಅಭಿವೃದ್ಧಿ ಎನ್ನುವುದೇ ಗೊತ್ತಿಲ್ಲ. ಅಭಿವೃದ್ಧಿಗೆ ಆದ್ಯತೆ ಕೊಡುತ್ತಿಲ್ಲ. ನಮ್ಮ ಸರ್ಕಾರದಲ್ಲಿ  ರಸ್ತೆಗುಂಡಿ ಮುಚ್ಚಿಸಿದ್ದೇವು. ಸರ್ಕಾರಕ್ಕೆ ಇದರ ಬಗ್ಗೆ ಇಚ್ಛಾಶಕ್ತಿಯೇ ಇಲ್ಲ ಎಂದು ಕಿಡಿಕಾರಿದ್ದಾರೆ.

 ಬಿಜೆಪಿ ಬಂದು ಬ್ರಾಂಡ್ ಬೆಂಗಳೂರು ಹೋಯ್ತು:  ಬಿಜೆಪಿ ಅವರು ಬಂದ ಮೇಲೆ ಬ್ರಾಂಡ್ ಬೆಂಗಳೂರು ಹೋಯಿತು. ಐಟಿ ಬಿಟಿ ಬಂದ ಮೇಲೆ ಮನೆ ಬಾಡಿಗೆಗಾಗಿ ಸಾಕಷ್ಟು ಜನ ಮನೆ ಕಟ್ಟಿದ್ದಾರೆ. ಪರೋಕ್ಷವಾಗಿ ಹಾಗೂ ನೇರವಾಗಿ ಉದ್ಯೋಗಗಳು ಸಿಗುತ್ತಿಲ್ಲ. ಅದಕ್ಕಾಗಿ ಐಟಿ ಬಿಟಿಯವರು ಪತ್ರ ಬರೆದಿದ್ದಾರೆ. ಅವರು ಬೆಂಗಳೂರು ಬಿಟ್ಟು ಹೋದ್ರೆ ಸಮಸ್ಯೆಗಳಾಗುತ್ತವೆ. ಬಿಜೆಪಿಯವರು ಬಂದ ಮೇಲೆ ಕಸದ ಸಮಸ್ಯೆ, ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಾಗಿದೆ.  ಮಳೆ ಬಂದಾಗ ಬಿಡಿ, ಎರಡು ವರ್ಷಗಳಿಂದ ರಸ್ತೆ ಗುಂಡಿಗಳ ಹೆಚ್ಚಾಗಿದೆ. ಇದಕ್ಕಾಗಿ ಕೋರ್ಟ್ ನಲ್ಲಿ ಪ್ರತ್ಯೇಕ ಬೆಂಚ್ ಮಾಡಿದ್ದಾರೆ.  ಬಿಜೆಪಿಯವರು ಅಭಿವೃದ್ಧಿ ಮಾಡಲ್ಲ, ಮಾಡಲು ಬಿಡುವುದಿಲ್ಲ ಎಂದು ಸರ್ಕಾರ ವಿರುದ್ಧ ರಾಮಲಿಂಗರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

Heavy Rain: ಅತಿವೃಷ್ಟಿ ಹಾನಿಗೆ ಹಂತ ಹಂತವಾಗಿ ಪರಿಹಾರ

 ಪ್ರಹ್ಲಾದ ಜೋಶಿ ಹೇಳಿಕೆಗೆ ಪ್ರತಿಕ್ರಿಯೆ:  ಐಟಿ ಕಂಪನಿಗಳು ಬೆಂಗಳೂರಿನ ಒತ್ತುವರಿ ಮಾಡಿಕೊಂಡಿದ್ದಕ್ಕೆ, ಬೆಂಗಳೂರಿಗೆ ಈ ಪರಿಸ್ಥಿತಿ ಬಂದಿದೆ ಎಂಬ ಪ್ರಹ್ಲಾದ ಜೋಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ರಾಮಲಿಂಗರೆಡ್ಡಿ, ಪ್ರಹ್ಲಾದ ಜೋಶಿ ಅವರು ಬಿಜೆಪಿಯ ಮಾತಿನ ಮಲ್ಲರು. ಐಟಿ ಕಂಪನಿಗಳು ಭೂಮಿ ಒತ್ತುವರಿ ಮಾಡಿದ್ರೆ , ಒಡೆದು ಹಾಕಲಿ‌. ನಮ್ಮ ಸರ್ಕಾರದ ಇದ್ದಾಗ ಒತ್ತುವರಿ ಮಾಡಿಕೊಂಡಿಲ್ಲ‌. ಡೈವರ್ಟ್ ಮಾಡಲು ಈ ರೀತಿ ಹೇಳುತ್ತಾರೆ. ಹೆದರಿಸುವ ಕೆಲಸ ಬಿಜೆಪಿಯವರು ಮಾಡ್ತಾರೆ. 

ಕರ್ನಾಟಕದಲ್ಲಿ ಇನ್ನೂ 3 ದಿನ ಭಾರಿ ಮಳೆ, ಈ ಜಿಲ್ಲೆಗಳಲ್ಲಿ ವರುಣನ ಆರ್ಭಟ

ಅರವಿಂದ ಲಿಂಬಾವಳಿ ದರ್ಪದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ರಾಮಲಿಂಗಾ ರೆಡ್ಡಿ, ಜನಪ್ರತಿನಿಧಿಗಳು ಸಮಾಧಾನವಾಗಿ ಉತ್ತರಿಸಬೇಕು. ಅವರಿಗೂ ಕೆಟ್ಟ ಹೆಸರು, ಅವರ ಪಕ್ಷಕ್ಕೂ ಕೆಟ್ಟ ಹೆಸರು ಬರಲ್ವೇ? ಯಾವ ಪಕ್ಷದ ಕಾರ್ಯಕರ್ತೆಯಾದರೇನು ? ನಮ್ಮ ಬಳಿಗೂ ಬೇರೆ ಪಕ್ಷದವರು ಬರುತ್ತಾರಲ್ಲವಾ ? ಹೇಳುವುದನ್ನ ಸಮಾಧಾನವಾಗಿ ಹೇಳಬೇಕಷ್ಟೇ. ಒತ್ತುವರಿಯಾಗಿದ್ದರೆ ಕ್ರಮಕೈಗೊಳ್ಳಲಿ. ನೋಟಿಸ್ ಕೊಟ್ಟು ಒಡೆದು ಹಾಕಲಿ. ಅದು ಬಿಟ್ಟು ಮಹಿಳೆ ಜೊತೆ ಈ ರೀತಿ ವರ್ತಿಸೋದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

click me!