ಮರ್ಯಾದೆ ಇದ್ದರೆ ಕಾಂಗ್ರೆಸ್‌ ಕಚೇರಿಗೆ ಕಾಲಿಡಬೇಡಿ : ಕೈ ಶಾಸಕರಿಗೆ ವಾರ್ನಿಂಗ್

By Web DeskFirst Published Aug 29, 2019, 12:57 PM IST
Highlights

ಕೋಲಾರ ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಕಾಂಗ್ರೆಸ್ ಶಾಸಕರಿಗೆ ವಾರ್ನಿಂಗ್ ನೀಡಿದ್ದು ಮರ್ಯಾದೆ ಇದ್ದರೆ ಕಚೇರಿಗೆ ಕಾಲಿಡಬೇಡಿ ಎಂದಿದ್ದಾರೆ. 

ಕೋಲಾರ (ಆ.29):  ಕಳೆದ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್‌ಗೆ ದ್ರೋಹ ಬಗೆದವರಿಗೆಲ್ಲಾ ಮಾನ ಮರ್ಯಾದೆ ಇದ್ದರೆ ಕಾಂಗ್ರೆಸ್‌ ಕಚೇರಿಗೆ ಕಾಲಿಡಬಾರದು ಎಂದು ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಮಾಲೂರಿನಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಸತ್ಯ ಶೋಧನಾ ಸಮಿತಿ ಸಭೆಯ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್‌ ಕುಮಾರ್‌, ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ನಸೀರ್‌ ಅಹಮದ್‌, ಕೊತ್ತೂರು ಮಂಜುನಾಥ್‌ ವಿರುದ್ಧ ವಾಗ್ದಾಳಿ ನಡೆಸಿದರು.

ರಮೇಶ್‌ಕುಮಾರ್‌ಗೆ ಮರ್ಯಾದೆ ಇಲ್ಲ

ಕಾಂಗ್ರೆಸ್‌ ವಿರುದ್ಧ ಕೆಲಸ ಮಾಡಿರುವ ರಮೇಶ್‌ ಕುಮಾರ್‌ಗೆ ಮಾನ ಮರ್ಯಾದೆ ಇಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವೋಟ್‌ ಹಾಕ್ಬೇಡಿ ಅಂತ ಚುನಾವಣಾ ಪ್ರಚಾರ ಮಾಡಿದ್ದ ಇವರು ಕಾಂಗ್ರೆಸ್‌ ಕಚೇರಿ ಬರ್ತಾರೆ, ಇವರು ಚುನಾವಣೆಯಲ್ಲಿ ಮಾಡಿದ ಪಕ್ಷ ದ್ರೋಹದ ವಿರುದ್ಧ ನಾನು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದೇನೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿರುವವರ ಪಟ್ಟಿಮತ್ತು ವಿವರಗಳನ್ನು ಸಂರ್ಪೂಣವಾಗಿ ಕೊಟ್ಟಿದೇನೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅವರನ್ನು ಬೆಳೆಸಿದ್ದೇ ನಾನು:

ರಮೇಶ್‌ ಕುಮಾರ್‌ ಅವರನ್ನು ಕಾಂಗ್ರೆಸ್‌ಗೆ ಕರೆ ತಂದಿದ್ದು ನಾನು, ಕಾಂಗ್ರೆಸ್‌ ಟಿಕೆಟ್‌ ಕೊಡಿಸಿ ಗೆಲ್ಲಿಸಿದ್ದೂ ನಾನೇ, ಪಕ್ಷದಲ್ಲಿ ಅವರು ಈ ಮಟ್ಟಕ್ಕೆ ಬೆಳೆದಿದ್ದಾರೆಂದರೆ ಅದಕ್ಕೆ ನಾನೇ ಕಾರಣ. ಇಷ್ಟೆಲ್ಲ ನನ್ನಿಂದ ಬೆಳೆದು ನನಗೇ ಮೋಸ ಮಾಡಿದ್ದಾರೆ, ನನ್ನ ವಿರುದ್ಧ ಚುನಾವಣೆ ಮಾಡಿದ್ದಾರೆ. ಇವರಿಗೆ ಮರ್ಯಾದೆ ಇದ್ದರೆ ಕಾಂಗ್ರೆಸ್‌ ಕಚೇರಿಗೆ ಕಾಲಿಡಬಾರದು. ಪಕ್ಷಕ್ಕೆ ದ್ರೋಹ ಮಾಡಿರುವ ರಮೇಶ್‌ ಕುಮಾರ್‌ ಕಾಂಗ್ರೆಸ್‌ ಪಕ್ಷಕ್ಕೆ ಬೇಡ. ಸಚಿವ ನಾಗೇಶ್‌ ಕೂಡಾ ನನಗೆ ಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆಯಲ್ಲಿ ಇವರ್ಯಾರು ಕಾಂಗ್ರೆಸ್‌ ಪರ ಕೆಲಸ ಮಾಡಲಿಲ್ಲ, ಕಾಂಗ್ರೆಸ್‌ ಸೋಲಿಗೆ ಕಾಂಗ್ರೆಸ್‌ ಶಾಸಕರೇ ಕಾರಣ. ರಮೇಶ್‌ ಕುಮಾರ್‌, ನಜೀರ್‌ ಅಹಮದ್‌, ಎಸ್‌ಎನ್‌.ನಾರಾಯಣಸ್ವಾಮಿ ವಿ.ಮುನಿಯಪ್ಪ ವಿರುದ್ಧ ಕ್ರಮಕ್ಕೆ ಶಿಪಾರಸು ಮಾಡಲಾಗಿದೆ,ರ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಒತ್ತಾಯಿಸಿದರು.

click me!