ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ 160 ಸ್ಥಾನಗಳು ಖಚಿತ

By Kannadaprabha News  |  First Published May 5, 2023, 5:42 AM IST

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸುಮಾರು 160 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವ ಮೂಲಕ ಸ್ವತಂತ್ರ ಸರ್ಕಾರವನ್ನು ಮಾಡಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ್‌ ಹಾಲಪ್ಪ ವಿಶ್ವಾಸ ವ್ಯಕ್ತಪಡಿಸಿದರು.


  ತುರುವೇಕೆರೆ :  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸುಮಾರು 160 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವ ಮೂಲಕ ಸ್ವತಂತ್ರ ಸರ್ಕಾರವನ್ನು ಮಾಡಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ್‌ ಹಾಲಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣಕ್ಕೆ ಹೊಂದಿಕೊಂಡಂತಿರುವ ಕೊಟ್ಟೂರನ ಕೊಟ್ಟಿಗೆ ಗ್ರಾಮದಲ್ಲಿ ಅಭ್ಯರ್ಥಿ ಬೆಮಲ್‌ ಕಾಂತರಾಜ್‌ ರವರ ಪರ ಮತಯಾಚನೆ ಮಾಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.

Tap to resize

Latest Videos

ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಪ್ರಣಾಳಿಕೆ ಮತ್ತು ಈಗಾಗಲೇ ನೀಡಿರುವ ಭರವಸೆಗಳು ರಾಜ್ಯದ ಜನರ ಮನಸ್ಸನ್ನು ಹೊಕ್ಕಿದೆ. ಬಹುಪಾಲು ಮಹಿಳೆಯರು ತಮಗೆ ಉತ್ತಮ ಪ್ರಣಾಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್‌ ಬೆಂಬಲಿಸಲು ನಿರ್ಧರಿಸಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ಜನರ ಆಕ್ರೋಶ ಹೆಚ್ಚಾಗಿದೆ. ಆಡಳಿತ ವಿರೋಧಿ ಅಲೆಯ ಲಾಭ ಕಾಂಗ್ರೆಸ್‌ಗೆ ಆಗಲಿದೆ. ಬಿಜೆಪಿ ಸರ್ಕಾರ ಮೀಸಲಾತಿ ನಿಗದಿ ಮಾಡಿರುವುದಾಗಿ ಹೇಳಿ ವಂಚಿಸಿರುವ ಕಾರಣದಿಂದ ಎಲ್ಲಾ ಸಮುದಾಯಗಳು ಬಿಜೆಪಿ ವಿರುದ್ಧ ತಿರುಗಿ ಬಿದ್ದಿವೆ ಎಂದು ಮುರುಳೀಧರ್‌ ಹಾಲಪ್ಪ ಹೇಳಿದರು.

ತುಮಕೂರು ಜಿಲ್ಲೆಯಲ್ಲಿ 11 ಸ್ಥಾನಕ್ಕೆ 11 ಸ್ಥಾನವೂ ಸಹ ಕಾಂಗ್ರೆಸ್‌ ಪಾಲಾಗಲಿದೆ. ಈ ಹಿಂದೆ ಕಾಂಗ್ರೆಸ್‌ ನೀಡಿದ್ದ ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಸಿರುವ ಸಂತೃಪ್ತಿ ಇದೆ. ಹಾಗಾಗಿ ಜನರೂ ಸಹ ಕಾಂಗ್ರೆಸ್‌ ಪಕ್ಷ ನೀಡುವ ಪ್ರಣಾಳಿಕೆಯನ್ನು ನಂಬುತ್ತಾರೆ. ಕೆಲವರು ಉದ್ದೇಶಪೂರ್ವಕವಾಗಿ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಟೀಕೆ ಮಾಡುತ್ತಾರೆ. ಆದರೆ ನಮ್ಮ ಪಕ್ಷ ಕೊಟ್ಟಮಾತಿನಂತೆ ನಡೆದುಕೊಳ್ಳುತ್ತದೆ ಎಂದು ಮುರುಳೀಧರ್‌ ಹಾಲಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ತಮ್ಮ ಪಕ್ಷದ ಮುಖಂಡರಾದ ಜಗದೀಶ್‌ ಶೆಟ್ಟರ್‌ ಮತ್ತು ಸವದಿಯವರಿಗೆ ಟಿಕೇಟ್‌ ನೀಡದಿದ್ದುದ್ದು, ಬಿ ಎಸ್‌ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ ಅವಮಾನಿಸಿದ ಘಟನೆಯಿಂದ ಬೇಸತ್ತಿರುವ ಲಿಂಗಾಯತ ಸಮುದಾಯ ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಿದೆ ಎಂದು ಮುರಳೀಧರ್‌ ಹಾಲಪ್ಪ ಹೇಳಿದರು.

ಸಮಾಜ ಘಾತುಕ ಸಂಘಟನೆ ನಿಷೇಧ

ಕಾಂಗ್ರೆಸ್‌ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸಲಾಗುವುದು ಎಂದು ಪ್ರಕಟಿಸಲಾಗಿದೆ. ಯಾವುದೇ ಸಂಘಟನೆ ಸಮಾಜಘಾತಕ ಕಾರ್ಯದಲ್ಲಿ ತೊಡಗಿದರೆ ಅಂತಹ ಸಂಘಟನೆಗಳನ್ನು ಯಾವುದೇ ಮುಲಾಜಿಲ್ಲದೇ ನಿಷೇಧಿಸುವುದು ಸರಿ. ಹಾಗಾಗಿ ತಮ್ಮ ಪಕ್ಷ ಈ ಅಂಶವನ್ನು ಪ್ರಸ್ತಾಪಿಸಿದೆ. ಆದರೆ ಬಿಜೆಪಿಯವರಿಗೆ ಕಾಂಗ್ರೆಸ್‌ನ್ನು ಟೀಕಿಸಲು ಅಥವಾ ಕಾಂಗ್ರೆಸ್‌ ನೀಡಿರುವ ಪ್ರಣಾಳಿಕೆಯ ಅಂಶವನ್ನು ಟೀಕಿಸಲು ಅವಕಾಶವಿಲ್ಲದ್ದರಿಂದ ಬಿಜೆಪಿ ಈಗ ಭಜರಂಗದಳ ನಿಷೇಧ ಎಂಬ ವಿಷಯವನ್ನು ಚರ್ಚಾ ವಸ್ತುವನ್ನಾಗಿ ಬಳಸಿದೆ ಎಂದು ಮುರುಳೀಧರ್‌ ಹಾಲಪ್ಪ ಟೀಕಿಸಿದರು.

ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಪ್ರಣಾಳಿಕೆ ಮತ್ತು ಈಗಾಗಲೇ ನೀಡಿರುವ ಭರವಸೆಗಳು ರಾಜ್ಯದ ಜನರ ಮನಸ್ಸನ್ನು ಹೊಕ್ಕಿದೆ. ಬಹುಪಾಲು ಮಹಿಳೆಯರು ತಮಗೆ ಉತ್ತಮ ಪ್ರಣಾಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್‌ ಬೆಂಬಲಿಸಲು ನಿರ್ಧರಿಸಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ಜನರ ಆಕ್ರೋಶ ಹೆಚ್ಚಾಗಿದೆ.

ಮುರಳೀಧರ್‌ ಹಾಲಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

click me!