ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಿಂದಾಗಿ ನಗರದಲ್ಲಿರುವ ಆಧಾರ ಸೇವಾ ಕೇಂದ್ರಕ್ಕೆ ಮಹಿಳೆಯರು ಲಗ್ಗೆಯಿಡುತ್ತಿದ್ದು, ಇವರನ್ನು ನಿಯಂತ್ರಿಸಲು ಇಲ್ಲಿನ ಕೇಂದ್ರದ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ.
ಹುಬ್ಬಳ್ಳಿ (ಜೂ.15) ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಿಂದಾಗಿ ನಗರದಲ್ಲಿರುವ ಆಧಾರ ಸೇವಾ ಕೇಂದ್ರಕ್ಕೆ ಮಹಿಳೆಯರು ಲಗ್ಗೆಯಿಡುತ್ತಿದ್ದು, ಇವರನ್ನು ನಿಯಂತ್ರಿಸಲು ಇಲ್ಲಿನ ಕೇಂದ್ರದ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ.
ರಾಜ್ಯ ಸರ್ಕಾರ ಒಂದೊಂದಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇವುಗಳ ಲಾಭ ಪಡೆದುಕೊಳ್ಳಲು ಆಧಾರ ಕಾರ್ಡ್ ಪ್ರಮುಖವಾಗಿದೆ. ಇನ್ನು ಗೃಹಲಕ್ಷ್ಮೇ ಯೋಜನೆಗೆ ಆಧಾರ ಕಾರ್ಡ್ ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಕಳೆದ 2-3 ದಿನಗಳಿಂದ ಕ್ಲಬ್ ರಸ್ತೆಯಲ್ಲಿರುವ ಆಧಾರ ಕಾರ್ಡ್ ಸೇವಾ ಕೇಂದ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇವರನ್ನು ನಿಯಂತ್ರಿಸುವುದೇ ಇಲ್ಲಿನ ಸಿಬ್ಬಂದಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕರ್ನಾಟಕದ ಅಕ್ಕಿ ಖರೀದಿ ಒಪ್ಪಂದ ರದ್ದುಗೊಳಿಸಿದ ಕೇಂದ್ರ ಸರ್ಕಾರ: ಜುಲೈ 1ರಿಂದ ಅನ್ನಭಾಗ್ಯ ಯೋಜನೆ ಜಾರಿ ಅನುಮಾನ
ಕಳೆದ 5-6 ತಿಂಗÜಳಿಂದ ಖಾಲಿಯಾಗಿದ್ದ, ದಿನಕ್ಕೆ 20-30 ಜನರು ತಿದ್ದುಪಡಿಗಾಗಿ ಆಧಾರ್ ಸೇವಾ ಕೇಂದ್ರಕ್ಕೆ ಬರುತ್ತಿದ್ದರು. ಆದರೆ, ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸುತ್ತಿದ್ದಂತೆ ಜನರು ತಮ್ಮ ಆಧಾರ್‌ಗಳಲ್ಲಿ ಹೆಸರು ತಿದ್ದುಪಡಿ, ವಿಳಾಸದ ತಿದ್ದುಪಡಿಗಾಗಿ ಈಗ ಸೇವಾ ಕೇಂದ್ರಗಳಿಗೆ ಲಗ್ಗೆ ಇಡುತ್ತಿದ್ದಾರೆ.
ಪ್ರಮುಖವಾಗಿ ಗೃಹಲಕ್ಷ್ಮೇ ಯೋಜನೆಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಇದಕ್ಕಾಗಿ ಅರ್ಜಿ ಸಲ್ಲಿಸಲು ಹೋಗುತ್ತಿರುವ ಮಹಿಳೆಯರು ಕಾರ್ಡಿನಲ್ಲಿ ಸಣ್ಣಪುಟ್ಟತಪ್ಪುಗಳಿರುವುದನ್ನು ಗಮನಿಸಿ ತಿದ್ದುಪಡಿಗಾಗಿ ಆಧಾರ್ ಸೇವಾಕೇಂದ್ರಕ್ಕೆ ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಒಂದು ವಾರದಿಂದ ಇದೇ ಸಮಸ್ಯೆ:
ಆಧಾರ್ ಸೇವಾ ಕೇಂದ್ರದಲ್ಲಿ 7ಕ್ಕೂ ಹೆಚ್ಚು ಕೌಂಟರ್‌ಗಳಲ್ಲಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಆದರೂ ಸಹ ಜನರನ್ನು ನಿಯಂತ್ರಿಸಲು ಆಗುತ್ತಿಲ್ಲ. ಬೆಳಗಾದರೆ ಸಾಕು ಸಾವಿರಾರು ಸಂಖ್ಯೆಯಲ್ಲಿ ಜನರು ಸೇವಾಕೇಂದ್ರಕ್ಕೆ ಆಗಮಿಸುತ್ತಿದ್ದಾರೆ. ಇಲ್ಲಿ ಜನದಟ್ಟಣೆ ನಿಯಂತ್ರಿಸಲು ಟೋಕನ್ ನೀಡುವ ವ್ಯವಸ್ಥೆ ಮಾಡಲಾಗಿದ್ದು, ಬುಧವಾರ ಬೆಳಗ್ಗೆ ಟೋಕನ್ ಪಡೆಯಲು ಒಮ್ಮಿಂದೊಮ್ಮೆಲೆ ಜನರು ಸೇವಾ ಕೇಂದ್ರಕ್ಕೆ ಆಗಮಿಸಿದ ವೇಳೆ ನೂಕುನುಗ್ಗಲು ಉಂಟಾಯಿತು. ಈ ವೇಳೆ ಅಲ್ಲಿನ ಸಿಬ್ಬಂದಿ ಕೆಲಕಾಲ ಟೋಕನ್ ನೀಡುವುದನ್ನು ಬಂದ್ ಮಾಡಿದರು. ನಂತರ ಎಲ್ಲರನ್ನು ಸಾಲಾಗಿ ನಿಲ್ಲಿಸಿದ ಬಳಿಕ ಟೋಕನ್ ನೀಡಲಾಯಿತು.
ಕರ್ನಾಟಕ ಗೃಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ
ನನ್ನ ಮಗಳ ಹೆಸರು ತಿದ್ದುಪಡಿಗಾಗಿ ಕಳೆದ 2-3 ದಿನಗಳಿಂದ ಆಧಾರ ಸೇವಾ ಕೇಂದ್ರಕ್ಕೆ ಬರುತ್ತಿದ್ದೇನೆ. ತುಂಬಾ ಗದ್ದಲವಿದೆ. ಮೂರನೇ ದಿನವಾದ ಬುಧವಾರ ನನಗೆ ಟೋಕನ್ ಸಿಕ್ಕಿದೆ. ಅದೂ ಶುಕ್ರವಾರ ಬರುತ್ತದೆ. ಇಷ್ಟೊಂದು ವಿಳಂಬವಾದರೆ ಹೇಗೆ?
- ರೇಣವ್ವ ಕರಿಸಿದ್ದಣ್ಣವರ, ಅಂಚಟಗೇರಿ ನಿವಾಸಿ