ಉಪ ಚುನಾವಣೆಗೂ ಮುನ್ನವೇ ಕಾಂಗ್ರೆಸಿಗೆ ಒಲಿದ ಅಧಿಕಾರ

Published : Nov 28, 2019, 02:27 PM IST
ಉಪ ಚುನಾವಣೆಗೂ ಮುನ್ನವೇ ಕಾಂಗ್ರೆಸಿಗೆ ಒಲಿದ ಅಧಿಕಾರ

ಸಾರಾಂಶ

ರಾಜ್ಯದಲ್ಲಿ ಇನ್ನು ಕೆಲ ದಿನದಲ್ಲಿ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ಇದಕ್ಕೂ ಮುನ್ನವೇ ಇಲ್ಲಿ ಕಾಂಗ್ರೆಸ್ ಜಯಗಳಿಸಿ ಅಧಿಕಾರ ಪಡೆದುಕೊಂಡಿದೆ. 

ಕೋಲಾರ (ನ.28) : ರಾಜ್ಯದಲ್ಲಿ ಉಪ ಚುನಾವಣಾ ಕಣ ರಂಗೇರಿದೆ. 15 ಕ್ಷೇತ್ರಗಳಲ್ಲಿ ಉಪ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿರುವ ಬೆನ್ನಲ್ಲೇ ಇತ್ತ ಕೋಲಾರ ಜಿಲ್ಲಾ ಪಂಚಾಯತ್ ಕೈ ವಶವಾಗಿದೆ. 

ಕೋಲಾರ ಜಿಲ್ಲಾ ಪಂಚಾಯತ್ ನಲ್ಲಿ ಕಾಂಗ್ರೆಸ್ ಜಯ ಗಳಿಸಿದ್ದು, ನೂತನ ಅಧ್ಯಕ್ಷರಾಗಿ ಸಿ.ಎಸ್. ವೆಂಕಟೇಶ್ ಆಯ್ಕೆಯಾಗಿದ್ದಾರೆ. 

ಕಳೆದ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಬೆಂಬಲಿಗರಾದ ಕೋಲಾರ ತಾಲೂಕಿನ ವೇಮಗಲ್ ವೆಂಕಟೇಶ್ ಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಪಟ್ಟ ಒಲಿದಿದೆ.

ಕೋಲಾರ: ಮಾಲೂರಿನಲ್ಲಿ ದಿನಕ್ಕೊಬ್ಬ ತಹಸೀಲ್ದಾರ್..!...

ಇನ್ನು ಮಾಜಿ ಸಚಿವ ರಮೇಶ್ ಕುಮಾರ್ ಬಣಕ್ಕೆ ಕೋಲಾರ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಹಿನ್ನಡೆಯಾದಂತಾಗಿದೆ. ಒಟ್ಟು 23 ಸದಸ್ಯರಿಂದ ನೂತನ ಅಧ್ಯಕ್ಷರಿಗೆ ಬೆಂಬಲ ದೊರಕಿದೆ.

ರಾಜಾರೋಷವಾಗಿ ಬಸ್ಸಲ್ಲೇ ಇದನ್ನು ಸಾಗಿಸ್ತಿದ್ದ ಮಹಿಳೆ ಅರೆಸ್ಟ್

ರಾಜ್ಯದಲ್ಲಿ ಡಿಸೆಂಬರ್ 5 ರಂದು 15 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಜಯಗಳಿಸುವ ಮೂಲಕ ಜಯದ ಮುನ್ಸೂಚನೆ ಸಿಕ್ಕಿದಂತಾಗಿದೆ. ಡಿಸೆಂಬರ್ 9 ರಂದು ಉಪ ಚುನಾವನೆಯ ಫಲಿತಾಂಶ ಪ್ರಕಟವಾಗಲಿದೆ.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC