ನೀರಾವರಿಗೆ ಯೋಜನೆಗಳಿಗೆ ಕಾಂಗ್ರೆಸ್‌ ದ್ರೋಹ: ಸಚಿವ ಹಾಲಪ್ಪ ಆಚಾರ್‌

By Kannadaprabha News  |  First Published Oct 23, 2022, 3:30 AM IST

ಸಮ್ಮಿಶ್ರ ಸರ್ಕಾರದಲ್ಲಿ ನಾನು ಶಾಸಕನಾದಾಗ, ಆಗಿನ ಸಿಎಂ ಕುಮಾರಸ್ವಾಮಿಗೆ ದುಂಬಾಲು ಬಿದ್ದು ಬೋರ್ಡಿಗೆ ನೀರಾವರಿ ಕಡತ ಬರುವಂತೆ ಮಾಡಿದೆ. ಆನಂತರ ಕುಮಾರಸ್ವಾಮಿ ಅನುದಾನ ನೀಡಿದರು: ಆಚಾರ್‌


ಕುಕನೂರು(ಅ.23):  ಕೊಪ್ಪಳ ಜಿಲ್ಲೆಯ ನೀರಾವರಿ ಯೋಜನೆಗೆ ಕಾಂಗ್ರೆಸ್‌ ಅನ್ಯಾಯ, ದ್ರೋಹ ಮಾಡಿದೆ ಎಂದು ಸಚಿವ ಹಾಲಪ್ಪ ಆಚಾರ್‌ ಕಿಡಿಕಾರಿದ್ದಾರೆ. ತಾಲೂಕಿನ ಮಸಬಹಂಚಿನಾಳ ಗ್ರಾಮದ ಬಿಜೆಪಿ ಕಾರ್ಯಾಲಯದಲ್ಲಿ ಯಲಬುರ್ಗಾ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಮಹಾಶಕ್ತಿ ಕೇಂದ್ರಗಳ ಸಂಘಟನಾತ್ಮಕ ಸಭೆಯಲ್ಲಿ ಅವರು ಮಾತನಾಡಿದರು. ನೀರಾವರಿ ಯೋಜನೆ ಪರ್ಯಾಯ ಯೋಜನೆಯಾಗಿ ಕೆರೆ ತುಂಬಿಸಲು ಅವಕಾಶ ಇದ್ದು, ಶೀಘ್ರದಲ್ಲಿ ಕ್ಷೇತ್ರದ ಎಲ್ಲಾ ಕೆರೆಗಳಿಗೂ ನೀರು ಬರಲಿದೆ ಎಂದರು.

2013ರಲ್ಲಿ ಜಗದೀಶ ಶೆಟ್ಟರ್‌ ಮುಖ್ಯಮಂತ್ರಿ ಹಾಗೂ ಬಸವರಾಜ ಬೊಮ್ಮಾಯಿ ಅವರು ನೀರಾವರಿ ಸಚಿವರಿದ್ದಾಗ ಯಲಬುರ್ಗಾ ಕ್ಷೇತ್ರದ ಬೇವೂರಿನಲ್ಲಿ ಸಾವಿರ ಕೋಟಿ ರು. ಅನುದಾನ ತಂದು ನೀರಾವರಿಗೆ ಭೂಮಿಪೂಜೆ ಮಾಡಿದ್ದೆವು. ಅದನ್ನು ಕಾಂಗ್ರೆಸ್‌ ಅಡ್ಡಗಲ್ಲು ಎಂದಿತು. ನೀರಾವರಿಗೆ ವರ್ಷಕ್ಕೆ .10 ಸಾವಿರ ಕೋಟಿ ನೀಡುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದರು. ಆದರೆ ನಯಾ ಪೈಸೆ ನೀಡಲಿಲ್ಲ. ಅಲ್ಲದೆ ಇಲ್ಲಿಯ ಆಗಿನ ಶಾಸಕರು ಹಾಗೂ ಮಾಜಿ ಮಂತ್ರಿ ಬಸವರಾಜ ರಾಯರಡ್ಡಿ ಅವರಿಗೆ ನೀರಾವರಿ ಬೋರ್ಡಿನ ಸಭೆಯಲ್ಲಿ ನೀರಾವರಿ ಯೋಜನೆಯ ಕಡತಕ್ಕೆ ಆಡಳಿತಾತ್ಮಕ ಒಪ್ಪಿಗೆ ಪಡೆಯಲು ಆಗಲಿಲ್ಲ. ಅದೇ ಸಿದ್ದರಾಮಯ್ಯ ಅವರು ನೀರಾವರಿ ಯೋಜನೆ ಕಡತವನ್ನು ರದ್ದು ಮಾಡಿದ್ದರು. ತುಂಗಭದ್ರಾ ನದಿ ದಡದಲ್ಲಿ ನೀರಾವರಿ ಯೋಜನೆಗೆ ಕಾಂಗ್ರೆಸ್‌ ಪೂಜೆ ಮಾಡಿತ್ತು. ಆದರೆ ಅದು ಕಾರ್ಯರೂಪಕ್ಕೆ ಬರಲೇ ಇಲ್ಲ. ಆಗ ಒಪ್ಪಿಗೆ ನೀಡಿದ್ದರೆ ಕೇವಲ .17 ಸಾವಿರ ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆ ಪೂರ್ಣ ಆಗುತ್ತಿತ್ತು. ಆನಂತರ ಬಂದ ಸಮ್ಮಿಶ್ರ ಸರ್ಕಾರದಲ್ಲಿ ನಾನು ಶಾಸಕನಾದಾಗ, ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ದುಂಬಾಲು ಬಿದ್ದು ಬೋರ್ಡಿಗೆ ನೀರಾವರಿ ಕಡತ ಬರುವಂತೆ ಮಾಡಿದೆ. ಆನಂತರ ಕುಮಾರಸ್ವಾಮಿ ಅವರು ಅನುದಾನ ನೀಡಿದರು. ಹೋದ ಜೀವ ಮರಳಿ ಬಂದಂತಾಗಿ ಕೆಲಸ ಆರಂಭವಾಯಿತು ಎಂದು ವಿವರಿಸಿದರು.

Latest Videos

undefined

ಭಾರತ ಜೋಡೋ: ಚುನಾವಣೆಗೆ ಮಳ್ಳು ಮಾಡುವ ಯಾತ್ರೆ -ಹಾಲಪ್ಪ ಆಚಾರ್‌

ಎಸಿ ಮನೆಯಲ್ಲಿ ರಾಯರಡ್ಡಿ:

ಕೆರೆ ಹಾಗೂ ರೈತರ ಕಷ್ಟಎಸಿ ಮನೆಯಲ್ಲಿರುವ ಮಾಜಿ ಸಚಿವ ರಾಯರಡ್ಡಿ ಅವರಿಗೆ ಏನು ಗೊತ್ತು? ಎಂದು ಆಚಾರ ಹೇಳಿದರು. ಹಿಂದಿನ ಈ ಕ್ಷೇತ್ರದ ಮಂತ್ರಿ ಲ್ಯಾಪ್‌ಟಾಪ್‌ ಹಗರಣ, ಮಾಕ್ಸ್‌ ಕಾರ್ಡ್‌ ಹಗರಣ... ಹೀಗೆ ಭ್ರಷ್ಟಾಚಾರದಲ್ಲಿ ಮುಳುಗಿದ್ದರು. ನನ್ನ ಆಡಳಿತ ಅವಧಿಯಲ್ಲಿ ಎಲ್ಲಾದರೂ ಒಂದು ರು. ಅವ್ಯವಹಾರ ಆಗಿದ್ದರೆ ನಾನು ರಾಜಿನಾಮೆಗೆ ಸಿದ್ಧ. ಯಾವ ಅಧಿಕಾರಿಯಿಂದ ನಾನು ಒಂದು ಕಪ್‌ ಚಹಾ ಸಹ ಕುಡಿದಿಲ್ಲ ಎಂದರು.

ತಾಲೂಕಿನ ಕೆಂಪಳ್ಳಿ ಕೆರೆ ಕಾಂಗ್ರೆಸ್‌ನ ಪಾಪದ ಕೂಸು. ಆ ಕೆರೆಯ ಅಭಿವೃದ್ಧಿ ಹಣವನ್ನು ಕಾಂಗ್ರೆಸ್‌ ಲೂಟಿ ಮಾಡಿದೆ. ಕ್ಷೇತ್ರದಲ್ಲಿ ಎಲ್ಲ ಗ್ರಾಮದ ಕೆರೆಗಳನ್ನು ಅಭಿವೃದ್ಧಿ ಪಡಿಸಿದ್ದೇನೆ ಎಂದು ಸಚಿವ ಹಾಲಪ್ಪ ಆಚಾರ್‌ ಹೇಳಿದರು.

ಬಿಜೆಪಿ ಯಲಬುರ್ಗಾ ಮಂಡಲ ಅಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರತನ್‌ ದೇಸಾಯಿ, ಹಂಚ್ಯಾಳಪ್ಪ ತಳವಾರ, ಕೊಟ್ರಪ್ಪ ತೋಟದ ಮಾತನಾಡಿದರು. ರಾಜ್ಯ ಕಾರ‍್ಯಕಾರಿಣಿ ಸದಸ್ಯೆ ಶಿವಲೀಲಾ ದಳವಾಯಿ, ಮಂಡಲ ಕಾರ್ಯದರ್ಶಿ ಶಿವಪ್ಪ ವಾದಿ, ಮಾರುತಿ ಗಾವರಾಳ, ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಶಿವಕುಮಾರ ನಾಗಲಾಪುರಮಠ, ವೀರಣ್ಣ ಹುಬ್ಬಳ್ಳಿ, ಬಸವನಗೌಡ ತೊಂಡಿಹಾಳ, ಜಗನ್ನಾಥಗೌಡ, ಬಸವರಾಜ ಹಾಳಕೇರಿ, ಶರಣಪ್ಪ ಬಣ್ಣದಬಾವಿ, ರಷೀದಸಾಬ್‌ ಹಣಜಗೇರಿ, ಮಂಗಳೇಶ ಮಂಗಳೂರು, ಶಿವಣ್ಣ ಮುತ್ತಾಳ, ಸುಧಾಕರ ದೇಸಾಯಿ, ಫಕೀರಪ್ಪ, ಬಾಲರಾಜ ಗಾಳಿ, ಮಲ್ಲಿಕಾರ್ಜುನ ಚೌಧರಿ, ಕನಕಪ್ಪ ಬ್ಯಾಡರ, ಅಯ್ಯನಗೌಡ ಕೆಂಚಮ್ಮನವರ್‌, ಮಹಾಂತೇಶ ಹೂಗಾರ, ಮಂಜುನಾಥ ಮಾಲಗಿತ್ತಿ, ವೀರಭದ್ರಪ್ಪ ಅಬಾರಿ, ಮಂಜುನಾಥ ಗಟ್ಟೆಪ್ಪನವರ್‌, ಸಿ.ಎಚ್‌. ಪೊಪಾ, ಶರಣಪ್ಪ ಈಳಗೇರ, ಸಾದಿಕ್‌ ಪಾಷಾ, ಶಂಕರಗೌಡ ಟಣಕನಕಲ್ಲ ಇತರರಿದ್ದರು.
 

click me!