ಗೂಡ್ಸ್‌ ವಾಹನ, ಲಾರಿ ಮಧ್ಯೆ ಅಪಘಾತ: ಇಬ್ಬರ ದುರ್ಮರಣ

Published : Jun 28, 2020, 10:31 AM IST
ಗೂಡ್ಸ್‌ ವಾಹನ, ಲಾರಿ ಮಧ್ಯೆ ಅಪಘಾತ: ಇಬ್ಬರ ದುರ್ಮರಣ

ಸಾರಾಂಶ

ಅಪಘಾತ: ಚಾಲಕ, ಕ್ಲೀನರ್‌ ಸ್ಥಳದಲ್ಲೇ ಸಾವು|ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಅರ್ಜನಾಳ ಕ್ರಾಸ್‌ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಘಟನೆ| ಈ ಸಂಬಂಧ ಝಳಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು|

ಇಂಡಿ(ಜೂ.28): ತಾಲೂಕಿನ ಅರ್ಜನಾಳ ಕ್ರಾಸ್‌ ಬಳಿಯ ರಾಷ್ಟ್ರೀಯ ಹೆದ್ದಾರಿ ಮೇಲೆ ಗೂಡ್ಸ್‌ ವಾಹನ ಮತ್ತು ಲಾರಿ ಮಧ್ಯೆ ಮುಖಾಮುಖಿಯಾಗಿ ಅಪಘಾತವಾಗಿ ಚಾಲಕ ಹಾಗೂ ಕ್ಲೀನರ್‌ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ನಡೆದಿದೆ.

ಧಾರವಾಡ ಜಿಲ್ಲೆಯ ಈರಣ್ಣ ಎಸ್‌. ನೀರಲಕಟ್ಟಿ (30) ಹಾಗೂ ಬೆಳಗಾವಿ ಜಿಲ್ಲೆಯ ಸವದತ್ತಿಯ ಅನೀಲ ಕರಿಗೌಡ (28) ಮೃತಪಟ್ಟ ದುರ್ದೈವಿಗಳು. 

ಇನ್ನೆರಡು ವರ್ಷದಲ್ಲಿ ವಿಜಯಪುರ ಗಾರ್ಡ್‌ನ್‌ ಸಿಟಿ: ಶಾಸಕ ಯತ್ನಾಳ

ಗೂಡ್ಸ್‌ ವಾಹನ ವಿಜಯಪುರದಿಂದ ಮಹಾರಾಷ್ಟ್ರದ ಸೋಲಾಪುರ ಕಡೆಗೆ ಹಾಗೂ ಲಾರಿ ಸೋಲಾಪುರ ಕಡೆಯಿಂದ ವಿಜಯಪುರ ಕಡೆಗೆ ಹೊರಟಿತ್ತು. ಈ ಕುರಿತು ಝಳಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
click me!

Recommended Stories

ಬೆಂಗಳೂರಿನಲ್ಲಿ ಭಾರತ-ವೆಸ್ಟ್ ಇಂಡೀಸ್ ಪಂದ್ಯ ವೀಕ್ಷಿಸುವವರಿಗೆ ಗುಡ್‌ನ್ಯೂಸ್; ಮುಂಜಾನೆ 1.30ರವರೆಗೆ ಮೆಟ್ರೋ ಸಂಚಾರ!
4 ದಿನದಲ್ಲಿ E-Kyc ಮಾಡದಿದ್ದರೆ ರೇಷನ್​ ಬಂದ್​! ಮೊಬೈಲ್​ನಲ್ಲೇ ಹೀಗೆ ಮಾಡಿ- ಹಂತ ಹಂತದ ಮಾಹಿತಿ