ಮಹಿಳೆ ವಂಚಿಸಿದ 'ಸಿಎಂ ಆಪ್ತ' ಜೈಲು ಪಾಲು!

By Web Desk  |  First Published Jun 22, 2019, 12:37 PM IST

ಸಿಎಂ ಆಪ್ತ ನಾನೆಂದು ಎಚ್.ಡಿ.ಕುಮಾರಸ್ವಾಮಿಯೊಂದಿಗೆ ಇರುವ ಫೋಟೋ ತೋರಿಸಿ, ಮಹಿಳೆಯನ್ನು ಹೊಟೇಲ್‌ಗೆ ಕರೆದು ಚಿನ್ನಾಭರಣ ದೋಚಿದವನನ್ನು ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದಾರೆ.


ಮೈಸೂರು (ಜೂ.22): ಸಿಎಂ ಆಪ್ತನೆಂದು ಹೇಳಿಕೊಂಡು ಫೇಸ್‌ಬುಕ್ ಮೂಲಕ ಪರಿಚಯ ಮಾಡಿಕೊಂಡ ಮಹಿಳೆಯನ್ನು ಖಾಸಗಿ ಹೊಟೇಲ್‌ಗೆ ಕರೆಯಿಸಿ ಬ್ಲಾಕ್‌ಮೇಲ್ ಮಾಡಿದವನೀಗ ಪೊಲೀಸ್ ಅತಿಥಿಯಾಗಿದ್ದಾನೆ. 

ಸಿರಸಿ ಮೂಲದ ಆರೋಪಿ ಕೀರ್ತಿ ಹೆಗ್ಡೆ ಬಂಧಿತ ಆರೋಪಿ. ಫೇಸ್ ಬುಕ್‌ನಲ್ಲಿ ಸಿರಸಿ ಮೂಲದ ಮಹಿಳೆ ಪರಿಚಯ ಮಾಡಿಕೊಂಡಿದ್ದ ಕೀರ್ತಿ. ಮಹಿಳೆಯೊಬ್ಬರನ್ನು ಖಾಸಗಿ ಹೊಟೇ‌ಲ್‌ಗೆ ಕರೆಸಿ, ಬ್ಲಾಕ್‌ಮೇಲ್ ಮಾಡಿ, ಚಿನ್ನಾಭರಣ ದೋಚಿದ್ದಾನೆಂಬ ಆರೋಪವಿದೆ. 

Latest Videos

undefined

ಘಟನೆ ಹಿನ್ನೆಲೆ:
ಫೇಸ್‌ಬುಕ್ ಮೂಲಕ ಪರಿಚಯವಾಗಿ, ಫೋನ್‌ನಲ್ಲಿ ಸಂಪರ್ಕದಲ್ಲಿದ್ದ ಮಹಿಳೆಯನ್ನು ಕೀರ್ತಿ ಜೂ.18ರಂದು ಜೆಡಿಎಸ್ ಮಹಿಳಾ ಸಮಾವೇಶವಿರುವುದಾಗಿ ಹೇಳಿ, ಹೊಟೇಲ್‌ಗೆ ಕರೆಯಿಸಿಕೊಂಡಿದ್ದ. ಮಹಿಳಾ ಜೆಡಿಎಸ್ ಘಟಕದ ಪದಾಧಿಕಾರಿಗಳನ್ನು ಪರಿಚಯಿಸುವ ಭರವಸೆ ನೀಡಿದ್ದ. 

ಕೀರ್ತಿ ಮಾತು ನಂಬಿ ಹೊಟೇಲ್‌ಗೆ ಬಂದಿದ್ದ ಮಹಿಳೆಗೆ ಆಚ್ಚರಿಯೊಂದು ಕಾದಿತ್ತು. ಹೊಟೇಲ್‌ನಲ್ಲಿ ಯಾವ ಮಹಿಳೆಯೂ ಇರಲಿಲ್ಲ. ಆಗ ಎಲ್ಲಿ‌ ಜೆಡಿಎಸ್ ಪದಾಧಿಕಾರಿಗಳೆಂದು ಕೇಳಿದಾಗ, ಹೊರಗೆ ಹೋಗಿದ್ದಾರೆಂದು ಸುಳ್ಳು ಹೇಳಲಾಗಿತ್ತು. ಬಳಿಕ ನೀನು ಹೋಟೆಲ್ ಗೆ ಬಂದಿರುವ ಬಗ್ಗೆ ನಿನ್ನ ಗಂಡನಿಗೆ ಹೇಳುತ್ತೇನೆಂದು ಬ್ಲಾಕ್ ಮೇಲ್ ಮಾಡಿದ್ದಾನೆ. ಗಂಡನಿಗೆ ಹೇಳಬಾರದೆಂದರೆ ಚಿನ್ನದ ಮಾಂಗಲ್ಯ ಸರ, ಉಂಗುರ ಕೊಡುವಂತೆ ಹೆದರಿಸಿದ್ದಾನೆ.

 ಆರೋಪಿಯ ಬ್ಲಾಕ್‌ಮೇಲ್‌ಗೆ ಭಯಬಿದ್ದು ಚಿನ್ನಾಭರಣಗಳು ಕೊಟ್ಟಿದ್ದರು ಮಹಿಳೆ. ಈ ವಿಚಾರ ಹೊರಗಡೆ ಹೇಳದಂತೆ ಪ್ರಾಣ ಬೆದರಿಕೆ ಹಾಕಿದ್ದನೆಂಬ ಆರೋಪವೂ ಕೀರ್ತಿ ವಿರುದ್ಧ ಇದೆ. ಬಳಿಕ ಜೂನ್ 19 ರಂದು ಮೈಸೂರು ಲಷ್ಕರ್ ಠಾಣೆಗೆ ತೆರಳಿ ಮಹಿಳೆ ದೂರು ನೀಡಿದ್ದರು. ದೂರು ನೀಡಿದ 24 ಗಂಟೆಗಳಲ್ಲಿಯೇ ಐಪಿಸಿ 348 ಅಡಿ ಆರೋಪಿಯನ್ನು ಬಂಧಿಸಲಾಗಿದೆ. 

CRIME ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಂಧಿತ ಆರೋಪಿಯಿಂದ ಸುಮಾರು 1.30 ಲಕ್ಷ ರೂ.  ಮೌಲ್ಯದ ಚಿನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಆರೋಪಿ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಪೊಲೀಸರು ಮಾಡಿದ್ದಾರೆ.

click me!