'ನನ್ನ ಕಣ್ಣು ಕುರುಡು ಅಂದ್ಕೊಂಡ್ರಾ?..' ನಾಡಗೀತೆ ಹಾಡುತ್ತಿದ್ದರೂ ಎದ್ದು ನಿಲ್ಲದ ಅಧಿಕಾರಿಗಳಿಗೆ ಸಿಎಂ ಕ್ಲಾಸ್!

Kannadaprabha News   | Kannada Prabha
Published : Aug 12, 2026, 09:54 AM IST
CM DK Shivakumar warns Jagalur officials over irresponsibility state anthem rav

ಸಾರಾಂಶ

ವಿಧಾನಸೌಧದಿಂದ ನಡೆಸಿದ ವಿಡಿಯೋ ಸಂವಾದದಲ್ಲಿ, ನಾಡಗೀತೆ ಹಾಡುವಾಗ ಎದ್ದು ನಿಲ್ಲದ ಜಗಳೂರು ತಾಲೂಕಿನ ಅಧಿಕಾರಿಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗಮನಿಸಿದರು. 'ನನ್ನ ಕಣ್ಣು ಕುರುಡಲ್ಲ' ಎಂದು ಹೇಳುವ ಮೂಲಕ, ನಾಡಗೀತೆಗೆ ಅಗೌರವ ತೋರಿದ ಅಧಿಕಾರಿಗಳಿಗೆ ಅವರು ತರಾಟೆಗೆ ತೆಗೆದುಕೊಂಡರು.

 ದಾವಣಗೆರೆ (ಆ.12): ನಾಡಗೀತೆಗೆ ಹಾಡುವಾಗ ಕುಳಿತುಕೊಂಡಿದ್ದ ಜಗಳೂರು ತಾಲೂಕು ಅಧಿಕಾರಿಗಳು, ನೌಕರರಿಗೆ ವಿಧಾನಸಾಧದ ಬ್ಯಾಂಕ್ವೆಟ್ ಹಾಲ್‌ನಿಂದಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ನಾಡಗೀತೆ ಹಾಡುತ್ತಿದ್ದರೂ ಎದ್ದು ನಿಲ್ಲದ ಅಧಿಕಾರಿಗಳು!

ಮಂಗಳವಾರ ಸಿಎಂ ಡಿ.ಕೆ.ಶಿವಕುಮಾರ್‌ ವಿಧಾನಸೌಧದಿಂದ ರಾಜ್ಯದ ಸರ್ಕಾರಿ ಅಧಿಕಾರಿ, ನೌಕರರ ವೀಡಿಯೋ ಸಂವಾದ ಹಮ್ಮಿಕೊಂಡಿದ್ದರು. ಸಂವಾದ ಆರಂಭಕ್ಕೂ ಮುನ್ನ ನಾಡಗೀತೆಯನ್ನು ಹಾಡಲಾಯಿತು. ಈ ವೇಳೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಅಧಿಕಾರಿಗಳು ನಾಡಗೀತೆ ಹಾಡುತ್ತಿದ್ದರೂ ಎದ್ದು ನಿಂತಿರಲಿಲ್ಲ.

ನನ್ನ ಕಣ್ಣು ಕುರುಡು ಅಂದ್ಕೊಂಡಿದ್ದೀರಾ? ಸಿಎಂ ಗರಂ

ಉಪ ವಿಭಾಗಾಧಿಕಾರಿ ಸಂತೋಷ್, ಜಗಳೂರು ತಹಸೀಲ್ದಾರ್ ಗುರುಬಸಪ್ಪ, ತಾಪಂ ಇಒ ಕೆಂಚಪ್ಪ ಸೇರಿದಂತೆ ಹಲವಾರು ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸಿಎಂ, ಬಳಿಕ ‘ನನ್ನ ಕಣ್ಣು ಕುರುಡು ಅಂತಾ ಕೆಲವು ಜನ ತಿಳಿದುಕೊಂಡಿರಬಹುದು. ಜಗಳೂರಿನವರಿಗೆ ಪಾಪ ನಿಂತುಕೊಂಡು ನಾಡಗೀತೆಗೆ ಗೌರವ ಸಲ್ಲಿಸಲಾಗುತ್ತಿಲ್ಲ. ನಾಡಗೀತೆ ನಡೆಯಬೇಕಾದರೆ ಇನ್ನೂ ಕುಳಿತುಕೊಂಡೇ ಇದ್ದರು. ನಾನು ನನ್ನ ಮೇಲೆಯೇ ವಾಚ್ ಇಟ್ಟುಕೊಂಡಿದ್ದೇನೆ. ನನಗೆ ಇಲ್ಲಿಂದ ಜಗಳೂರು ಕಾಣುವುದಿಲ್ಲ ಅಂತಾ ಅಂದುಕೊಳ್ಳಬೇಡಿ’ ಎಂದು ಅವರು ಸೂಚ್ಯವಾಗಿ ಎಚ್ಚರಿಸಿದರು.

PREV
Read more Articles on
click me!

Recommended Stories

‘ನನ್ನನ್ನು ಮುಗಿಸಲು ಸುಪಾರಿ ನೀಡಲೂ ಸಿದ್ಧ’ ಕಿಮ್ಮನೆ ವಿರುದ್ಧ ಆರಗ ಜ್ಞಾನೇಂದ್ರ ಗಂಭೀರ ಆರೋಪ
ಪರಪ್ಪನ ಅಗ್ರಹಾರದಲ್ಲಿ ಸಿಸಿಬಿ ದಾಳಿ, ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್, ಪೆನ್‌ಡ್ರೈವ್ ಪತ್ತೆ!