ಮಾಜಿ ಸಿಎಂ ಬಂಗಾರಪ್ಪರನ್ನು ಶಾಶ್ವತವಾಗಿರಿಸಲು ಆಯ್ತೊಂದು ಮಹತ್ ಕಾರ್ಯ

By Suvarna NewsFirst Published Oct 26, 2020, 7:58 AM IST
Highlights

ಮಾಜಿ ಸಿಎಂ ದಿ.  ಸಾರೆಕೊಪ್ಪದ ಬಂಗಾರಪ್ಪ ಅವರ 87 ನೇ ಕೈ ಹುಟ್ಟುಹಬ್ಬದ ಅಂಗವಾಗಿ  ಇಂದು ತವರೂರು ಸೊರಬ ಪಟ್ಟಣದಲ್ಲಿ ಬಂಗಾರಪ್ಪ ಉದ್ಯಾನವನ ಹಾಗೂ  ಪ್ರತಿಮೆ ಸಿಎಂ ಬಿ.ಎಸ್.ಯಡಿಯೂರಪ್ಪ ರಿಂದ ಲೋಕಾರ್ಪಣೆಗೊಳ್ಳಲಿದೆ.
 

ಸೊರಬ (ಅ.26):  ಸೊರಬದ ಖಾಸಗಿ ಬಸ್ ನಿಲ್ದಾಣ ಎದುರಿನ ಬಂಗಾರಪ್ಪ ಪಾರ್ಕ್ ಅನ್ನು ಅನ್ ಲೈನ್ ಮೂಲಕ  ಸಿಎಂ ಯಡಿಯೂರಪ್ಪ ಉದ್ಘಾಟನೆ ಮಾಡಲಿದ್ದಾರೆ.

ಮಾಜಿ ಸಿಎಂ ದಿ.  ಸಾರೆಕೊಪ್ಪದ ಬಂಗಾರಪ್ಪ ಅವರ 87 ನೇ ಕೈ ಹುಟ್ಟುಹಬ್ಬದ ಅಂಗವಾಗಿ  ಇಂದು ತವರೂರು ಸೊರಬ ಪಟ್ಟಣದಲ್ಲಿ ಬಂಗಾರಪ್ಪ ಉದ್ಯಾನವನ ಹಾಗೂ  ಪ್ರತಿಮೆ ಸಿಎಂ ಬಿ.ಎಸ್.ಯಡಿಯೂರಪ್ಪ ರಿಂದ ಲೋಕಾರ್ಪಣೆಗೊಳ್ಳಲಿದೆ.

ಸೊರಬ ಪಟ್ಟಣದ ಹೃದಯ ಭಾಗವಾದ ಖಾಸಗಿ ಬಸ್ ನಿಲ್ದಾಣದ ಆವರಣದ ಎದುರಿನಲ್ಲಿ ಕಂಗೊಳಿಸುವಂತೆ ಮಾಡಲಾದ ಉದ್ಯಾನ ಹಾಗೂ ಪ್ರತಿಮೆಯನ್ನು ಉದ್ಘಾಟಿಸಲಿದ್ದಾರೆ.

 ಬಂಗಾರಪ್ಪ ದಿವಂಗತರಾದ ಮೇಲೆ ಅವರ ಸ್ಮಾರಕವನ್ನು ಪಟ್ಟಣದ ಬಂಗಾರಧಾಮದಲ್ಲಿ ನಿರ್ಮಾಣ ಮಾಡಬೇಕೆಂದು ಕಿರಿಯ ಪುತ್ರ ಮಾಜಿ ಶಾಸಕ ಮಧು ಬಂಗಾರಪ್ಪ ಆರಂಭಿಸಿದ ಕಾಮಗಾರಿ ಇನ್ನೂ ಪ್ರಗತಿ ಹಂತದಲ್ಲಿ ಇದೆ. 

‘ಭಾಗ್ಯಲಕ್ಷ್ಮಿ’ ಯೋಜನೆ ಬಗ್ಗೆ BSY ಸರ್ಕಾರದ ಹೊಸ ತೀರ್ಮಾನ

ಹಿರಿಯ ಪುತ್ರ ಕುಮಾರ್ ಬಂಗಾರಪ್ಪ 2018 ಚುನಾವಣೆಯಲ್ಲಿ ಶಾಸಕರಾದ ಮೇಲೆ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆಲೆಸುವಂತೆ ಮಾಡಲು ಬಂಗಾರಪ್ಪನವರ ಹೆಸರಿನಲ್ಲಿ ಉದ್ಯಾನ ಹಾಗೂ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿ ಲೋಕಸಭಾ ಸದಸ್ಯರಿಂದ ಶಂಕುಸ್ಥಾಪನೆ ಮಾಡಿಸಿದ್ದರು. ಇದೀಗ ರಾಜ್ಯದ ಮುಖ್ಯಮಂತ್ರಿ ಕೈಯಲ್ಲಿ ಉದ್ಘಾಟನೆಗೊಳ್ಳಲಿದೆ.

ಸೊರಬ ಖಾಸಗಿ ಬಸ್ ನಿಲ್ದಾಣ ಎದುರಿನಲ್ಲಿ ಸ್ಥಳೀಯ ಪ್ರಾದೇಶಿಕ ಅಭಿವೃದ್ಧಿ ಅನುದಾನ ಹಾಗೂ ಪಪಂನ 2018-19ನೇ ಸಾಲಿನ ವಿಶೇಷ ಅನುದಾನ , 14 ನೇ ಹಣಕಾಸಿನಿಂದ ಹಾಗೂ ಶಾಸಕರ ಸ್ಥಳೀಯ ಅಭಿವೃದ್ಧಿಯ ಹಣವನ್ನು ಕ್ರೋಡೀಕರಿಸಿ 21.15 ರೂ . ಲಕ್ಷದ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ

click me!