ವಿನಯ್ ಗುರೂಜಿ ಗೌರಿಗದ್ದೆಗೆ ಹೊರಟ BSY, ಶೃಂಗೇರಿಗೂ ಭೇಟಿ

By Web Desk  |  First Published Sep 11, 2019, 10:11 PM IST

ಶೃಂಗೇರಿಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಯಡಿಯೂರಪ್ಪ / ಗೌರಿಗದ್ದೆ ಆಶ್ರಮಕ್ಕೂ ಭೇಟಿ/ ಅರ್ಧ ದಿನ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸ


ಬೆಂಗಳೂರು[ಸೆ. 11] ಮುಖ್ಯಮಂತ್ರಿ ಬಿಸ್ ಯಡಿಯೂರಪ್ಪ ಗುರುವಾರ ಸೆ. 12 ರಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದು ಶೃಂಗೇರಿ ಮತ್ತು ವಿನಯ್ ಗುರೂಜಿ ಗೌರಿಗದ್ದೆ  ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ.

ಬೆಳಗ್ಗೆ 9 ಗಂಟೆಗೆ ಬೆಂಗಳೂರು ಜಕ್ಕೂರು ಎರೋ ಡ್ರೋ ನಿಂದ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಲಿದ್ದಾರೆ.  ನಂತರ ಮೆಣಸೆ ಹೆಲಿಪ್ಯಾಡ್ ನಿಂದ ಶೃಂಗೇರಿಗೆ ತೆರಳಲಿದ್ದಾರೆ.

Tap to resize

Latest Videos

ಆ ಬಿಜೆಪಿ ನಾಯಕನ ಭೇಟಿ ಮಾಡಿದ್ರೆ ಹೀಗಾಗ್ತಿರಲಿಲ್ಲ... ಡಿಕೆಶಿಗೆ ಭವಿಷ್ಯ ಹೇಳಿದ್ದ ವಿನಯ್ ಗುರೂಜಿ

ಬೆಳಗ್ಗೆ 11 ಗಂಟೆಗೆ ಕೊಪ್ಪ ತಾಲೂಕಿನ ವಿನಯ್ ಗುರೂಜಿ ಗೌರಿಗದ್ದೆ ಆಶ್ರಮಕ್ಕೂ ಭೇಟಿ ನೀಡಲಿದ್ದಾರೆ. ನಂತರ ಮಧ್ಯಾಹ್ನವೇ ಬೆಂಗಳೂರಿಗೆ ವಾಪಸಾಗಲಿದ್ದಾರೆ.ಎಸ್ ಎಂ ಕೃಷ್ಣ ಅವರ ಅಳಿಯ ಕಾಫಿ ಡೇ ಮಾಲೀಕ ಸಿದ್ಧಾರ್ಥ ಅವರ ಬಗ್ಗೆಯೂ ವಿನಯ್ ಗುರೂಜಿ ಭವಿಷ್ಯ ಹೇಳಿದ್ದರು. ಇನ್ನು ಇಡಿ ವಿಚಾರಣೆ ಎದುರಿಸುತ್ತಿರುವ ಡಿಕೆ ಶಿವಕುಮಾರ್ ಬಗ್ಗೆಯೂ ವಿನಯ್ ಗುರೂಜಿ ಹಿಂದೆ ಎಚ್ಚರಿಕೆಯ ಮಾತುಗಳನ್ನು ಆಡಿದ್ದರು. ಇದೀಗ ಬಿಎಸ್ ವೈ ಸಹ ಆಶ್ರಮಕ್ಕೆ ಭೇಟಿ ನೀಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

click me!