ಈ ಬಾರಿ ಹೇಗಿರಲಿದೆ ದಸರಾ ಆಚರಣೆ ?

Published : Aug 22, 2020, 06:43 AM IST
ಈ ಬಾರಿ  ಹೇಗಿರಲಿದೆ ದಸರಾ ಆಚರಣೆ ?

ಸಾರಾಂಶ

ಈ ಬಾರಿ ದೇಶದಲ್ಲಿಕೊರೋನಾ ಆತಂಕವಿದ್ದು, ದಸರಾ ಆಚರಣೆ ಹೇಗಿರಲಿದೆ ಎನ್ನುವ ಕುತೂಹಲ ಎಲ್ಲರಲ್ಲಿದೆ. ಈ ಬಗ್ಗೆ ಮುಖ್ಯಮಂತ್ರಿ ಸುಳಿವನ್ನು ನೀಡಿದ್ದಾರೆ.

ಸರಗೂರು (ಮೈಸೂ​ರು​) (ಆ.22): ಕೋವಿಡ್‌ ಕರಿ​ನೆ​ರಳು ನಾಡ​ಹಬ್ಬ, ವಿಶ್ವ​ವಿ​ಖ್ಯಾ​ತ ಮೈಸೂ​ರು​ ದರಸಾ ಮೇಲೂ ಬೀಳ​ಲಿದೆ. ಪ್ರತಿ​ಬಾರಿ ಅದ್ಧೂ​ರಿ​ಯಾಗಿ ನಡೆ​ಯುವ ದಸ​ರಾ ಮಹೋ​ತ್ಸ​ವ​ವನ್ನು ಈ ಬಾರಿ ಸರಳವಾಗಿ ಹೇಗೆ ಆಚರಿಸಬಹುದು ಎಂಬ ಕುರಿತು ಚರ್ಚಿಸಿ ತೀರ್ಮಾನಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ಬೀಚನಹಳ್ಳಿಯ ಕಬಿನಿ ಜಲಾಶಯ ಬಳಿ ಶುಕ್ರ​ವಾ​ರ ಮಾತನಾಡಿ, ದಸರಾ ಮಹೋತ್ಸವವನ್ನು ಸರಳವಾಗಿ ಹೇಗೆ ಆಚರಿಸಬೇಕೆಂಬ ಕುರಿತು ಚರ್ಚೆ ನಡೆ​ಸ​ಲಾ​ಗು​ವುದು. 

ಸಾರ್ವಜನಿಕವಾಗಿ ಆಚರಿಸಲ್ಪಡುವ ಹಬ್ಬಗಳಿಗೆ ರಾಜ್ಯ ಸರ್ಕಾರ ಕಡಿವಾಣ ..?...

ಮೈಸೂ​ರು ಜಿಲ್ಲಾ ಉಸ್ತುವಾರಿ ಸಚಿವರ ಜತೆ​ಗೆ ಈ ಕುರಿತು ಮಾತುಕತೆ ನಡೆಸಿ ಉನ್ನತ ಮಟ್ಟದ ಸಮಿತಿಯ ಸಭೆ ನಡೆಸಲಾಗುವುದು ಎಂದು ಯಡಿ​ಯೂ​ರಪ್ಪ ಮಾಹಿತಿ ನೀಡಿ​ದ​ರು.

ಕೆಆರ್‌ಎಸ್‌ಗೆ ಬಾಗೀನ ಅರ್ಪಿಸಲು ಆಗಮಿಸಿದ್ದ ವೇಳೆ ಈ ವಿಚಾರ ತಿಳಿಸಿದರು.

PREV
click me!

Recommended Stories

PM Kisan : ಈ ಮಹಿಳಾ ರೈತರಿಗೆ ಪಿಎಂ ಕಿಸಾನ್ ಹಣ ಸಿಗಲ್ಲ.. ಯಾಕೆ ಗೊತ್ತಾ?
Motor Vehical: ರಸ್ತೆಯಲ್ಲಿ ನಿಮ್ಮ ವಾಹನ ತಡೆದರೆ ತಕ್ಷಣ ದಾಖಲೆ ಕೊಡಬೇಕಾ? ಟ್ರಾಫಿಕ್ ಪೊಲೀಸ್‌-RTO ಅಧಿಕಾರದ ಅಸಲಿ ಸತ್ಯ ಇಲ್ಲಿದೆ!