* ಕನ್ನಡಿಗರ ಮೇಲೆ ಅಪಾರ ಪ್ರೀತಿ, ವಿಶ್ವಾಸ ಹೊಂದಿರುವ ಅಮಿತ್ ಶಾ
* ದೇಶದ ಭವಿಷ್ಯ ರೂಪಿಸುವಲ್ಲಿ ಶಾ ಪಾತ್ರವೂ ಪ್ರಮುಖ
* ಜಮ್ಮು-ಕಾಶ್ಮೀರದ ಏಕತೆಗಾಗಿ ದಿಟ್ಟ ಹೆಜ್ಜೆ ಇಟ್ಟ ಅಮಿತ್ ಶಾ
ದಾವಣಗೆರೆ(ಸೆ.03): ಭಾರತದ ಅಖಂಡತೆ, ಐಕ್ಯತೆಗಾಗಿ ದಿಟ್ಟವಾಗಿ ಶ್ರಮಿಸಿದ ಸರ್ದಾರ್ ವಲ್ಲಭಬಾಯಿ ಪಟೇಲ್‌ರ ನಂತರ ಪಟೇಲರಂತೆಯೇ ದೇಶದಲ್ಲಿ ಜಮ್ಮು-ಕಾಶ್ಮೀರದ ಏಕತೆಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದಾರೆ.
ನಗರದ ಜಿಎಂಐಟಿ ಕಾಲೇಜಿನಲ್ಲಿ ಗುರುವಾರ ವಿವಿಧ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಮಿತ್ ಶಾ ಐತಿಹಾಸಿಕ ಸಾಧನೆ ತೋರಿದ್ದಾರೆ ಎನ್ನುತ್ತಾ ಅವರನ್ನು ಭಾರತದ ಮೊದಲ ಉಪಪ್ರಧಾನಿ ಅವರೊಂದಿಗೆ ಹೋಲಿಸಿದರು.
undefined
ದಾವಣಗೆರೆಯಲ್ಲಿ ಅಮಿತ್ ಶಾ; ಕೊರೋನಾ ಹೋರಾಟದಲ್ಲಿ ಭಾರತ ಇತರ ರಾಷ್ಟ್ರಕ್ಕೆ ಮಾದರಿ ಎಂದ ಗೃಹ ಸಚಿವ!
ಗಾಂಧಿ ನಾಡಿನಿಂದ ಬಂದ ಶಾರಿಂದಲೇ ದಾವಣಗೆರೆಯಲ್ಲಿ ಗಾಂಧಿ ಭವನ ಉದ್ಘಾಟನೆಯಾಗುತ್ತಿರುವುದು ನಿಜಕ್ಕೂ ಸಂತಸದ ಸಂಗತಿ. ಕನ್ನಡಿಗರ ಮೇಲೆ ಅಮಿತ್ ಶಾ ಅಪಾರ ಪ್ರೀತಿ, ವಿಶ್ವಾಸ ಹೊಂದಿದ್ದಾರೆ. ದೇಶದ ಭವಿಷ್ಯ ರೂಪಿಸುವಲ್ಲಿ ಅವರ ಪಾತ್ರವೂ ಪ್ರಮುಖವಾಗಿದೆ ಎಂದರು.