Haveri: ಬಡವರ ಪರ ಕಳಕಳಿ: ಕೊಟ್ಟ ಮಾತಿನಂತೆ ವೃದ್ಧೆಗೆ ಮನೆ ನೀಡಿದ ಬೊಮ್ಮಾಯಿ

By Kannadaprabha NewsFirst Published Jan 16, 2022, 9:32 AM IST
Highlights

*   ಫೋನ್‌ ಮಾಡಿ ಮನೆ ಕೇಳಿದ್ದ ನೆರೆ ಸಂತ್ರಸ್ತೆ
*   ಹೆಬಿಟ್ಯಾಟ್‌ ಸೆಂಟರ್‌ ಮೂಲಕ ನಿರ್ಮಿಸಲಾದ ಸುಸಜ್ಜಿತ ಮನೆ
*   ಸಿಎಂ ಬೊಮ್ಮಾಯಿ ಅವರ ಬಡವರ ಪರ ಕಳಕಳಿಯನ್ನು ಸ್ಮರಿಸಿದ ವೃದ್ಧೆ 
 

ಹಾವೇರಿ(ಜ.15):  ಪ್ರವಾಹದಲ್ಲಿ(Flood) ಬಿದ್ದ ಮನೆಗೆ ಪರಿಹಾರ ಕಲ್ಪಿಸುವಂತೆ ಸ್ವಕ್ಷೇತ್ರದ ವೃದ್ಧೆಯೊಬ್ಬರು(Old Age Woman) ಸಲ್ಲಿಸಿದ್ದ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಸ್ಪಂದಿಸಿ, ವೃದ್ಧೆಗೆ ಸೂರು ಕಲ್ಪಿಸಿಕೊಟ್ಟಿದ್ದಾರೆ. 

ಕಳೆದ ಸೆಪ್ಟೆಂಬರ್‌ನಲ್ಲಿ ಮಾಧ್ಯಮ ಸಂವಾದ ಕಾರ್ಯಕ್ರಮದ ವೇಳೆ ಶಿಗ್ಗಾಂವಿ(Shiggaon) ತಾಲೂಕಿನ ಮಂಚಿನಕೊಪ್ಪದ ಕಮಲವ್ವ ತಿಮ್ಮನಗೌಡ್ರ(Kamalavva Timmanagoudar) ಎಂಬ ವೃದ್ಧೆ ಕರೆ ಮಾಡಿದ್ದರು. ಮಳೆಯಿಂದ ಮನೆ(Home) ಬಿದ್ದು ಹೋಗಿದ್ದು, ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದ್ದರು. 

Latest Videos

Haveri Road Accident: ರಟ್ಟಿಹಳ್ಳಿ ಬಳಿ ಭೀಕರ ಅಪಘಾತ: 4 ಮಂದಿ ಸಾವು

ತಕ್ಷಣವೇ ಸ್ಪಂದಿಸಿದ ಸಿಎಂ ಬಸವರಾಜ ಬೊಮ್ಮಾಯಿ, ವೃದ್ಧೆಗೆ ಮನೆ ನಿರ್ಮಿಸಿ ಕೊಡುವಂತೆ ಜಿಲ್ಲಾಡಳಿತಕ್ಕೆ(District Administration) ಸೂಚಿಸಿದ್ದರು. ಹೆಬಿಟ್ಯಾಟ್‌ ಸೆಂಟರ್‌(Habitat Center) ಮೂಲಕ ನಿರ್ಮಿಸಲಾದ ಸುಸಜ್ಜಿತ ಮನೆಯನ್ನು ಶನಿವಾರ ಕಮಲವ್ವಗೆ ನೀಡಲಾಯಿತು. 

ಸವಣೂರು ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಕಮಲವ್ವ ಗೃಹ ಪ್ರವೇಶ ಮಾಡಿ ಆನಂದಬಾಷ್ಪ ಸುರಿಸಿದರು. ನಮ್ಮೂರ ಮಗನಾಗಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ಬಡವರ ಪರ ಕಳಕಳಿಯನ್ನು ಸ್ಮರಿಸಿದರು.

ವಸತಿರಹಿತರಿಗೆ ಪ್ರಧಾನಿ ಆವಾಸ್‌ ಮನೆ: ಮೋದಿಗೆ ಸಿಎಂ ಕೃತಜ್ಞತೆ

ಗ್ರಾಮೀಣ ಭಾಗದ(Rural Area) ವಸತಿ ರಹಿತರ ಮತ್ತು ನಿವೇಶನ ರಹಿತರ ಪಟ್ಟಿಯನ್ನು ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ(Pradhan Mantri Awas Yojana) ನಮೂದಿಸಲು ಅನುಮೋದನೆ ನೀಡುವ ಬಹುದಿನದ ಬೇಡಿಕೆಯನ್ನು ಈಡೇರಿಸಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು ಕೇಂದ್ರದ ಆವಾಸ್‌ ಪ್ಲಸ್‌ ಡಾಟಾಬೇಸ್‌ನಲ್ಲಿ ಕರ್ನಾಟಕದ(Karnataka) ಗ್ರಾಮೀಣ ಬಡ ವರ್ಗದ 18,78,671 ವಸತಿ ರಹಿತ ಮತ್ತು 6,61,535 ನಿವೇಶನ ರಹಿತರ ಪಟ್ಟಿ ಸೇರಿಸುವ ಬಹುದಿನಗಳ ಬೇಡಿಕೆಯನ್ನು ಅನುಮೋದಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಇದು ನಿಜವಾಗಿ ಆ ಎಲ್ಲ ಜನರ ಜೀವನದಲ್ಲಿ ಹೊಸ ಸಂತೋಷವನ್ನು ತರುವುದರ ಜತೆಗೆ ಮಕರ ಸಂಕ್ರಾಂತಿಯನ್ನು(Makar Santranti) ಇನ್ನಷ್ಟು ವಿಶೇಷವಾಗಿಸಿದೆ ಎಂದು ತಿಳಿಸಿದ್ದಾರೆ.

Omicron Threat: ಹಾವೇರಿ ಮತ್ತೊಮ್ಮೆ ಕೊರೋನಾ ಮುಕ್ತ

ಕರ್ನಾಟಕದ ಬೇಡಿಕೆ ಏನಿತ್ತು?:

ರಾಜ್ಯ ಗ್ರಾಮೀಣ ಪ್ರದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ವಸತಿ ರಹಿತರಿಗೆ ವಸತಿ ಕಲ್ಪಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಆವಾಸ್‌ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗಿದೆ. ಸಾಮಾಜಿಕ, ಆರ್ಥಿಕ ಜಾತಿ ಜನಗಣತಿ ಪಟ್ಟಿಯಲ್ಲಿ ಕೈಬಿಟ್ಟಿದ್ದ ವಸತಿ ರಹಿತ ಮತ್ತು ನಿವೇಶನ ರಹಿತರ ಸಮೀಕ್ಷೆಯನ್ನು ಕೇಂದ್ರದ ಸರ್ಕಾರದ(Central Government) ಮಾರ್ಗಸೂಚಿಯನ್ವಯ ರಾಜ್ಯಾದ್ಯಂತ 2018ರಲ್ಲಿ ಕೈಗೊಳ್ಳಲಾಗಿತ್ತು. ಅದರಂತೆ ರಾಜ್ಯದಲ್ಲಿ 18,78,671 ವಸತಿ ರಹಿತರು ಮತ್ತು 6,61535 ನಿವೇಶನ ರಹಿತರು ಕಂಡುಬಂದಿದ್ದಾರೆ. ಇವರ ವಿವರಗಳನ್ನು ಕೇಂದ್ರದ ಆವಾಸ್‌ ಪ್ಲಸ್‌ ಡಾಟಾಬೇಸ್‌ನಲ್ಲಿ ನಮೂದು ಮಾಡುವಂತೆ ರಾಜ್ಯ ಸರ್ಕಾರ(Government of Karnataka) ಪ್ರಸ್ತಾವನೆ ಸಲ್ಲಿಸಿತ್ತು. ಹಲವು ವರ್ಷಗಳಿಂದ ಇದು ಕೇಂದ್ರದ ಪರಿಶೀಲನೆಯಲ್ಲಿತ್ತು. ಇದೀಗ ಕೇಂದ್ರ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.

ಕರ್ನಾಟಕದ ಸಬಲೀಕರಣಕ್ಕೆ ನಿರಂತರ ಶ್ರಮ: ಮೋದಿ ಮೆಚ್ಚುಗೆ

ಬೊಮ್ಮಾಯಿ ಅವರ ಕೃತಜ್ಞತಾ ಟ್ವೀಟ್‌ಗೆ ಪ್ರತಿಯಾಗಿ ಕನ್ನಡ(Kannada) ಭಾಷೆಯಲ್ಲಿ ಟ್ವೀಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ರಾಷ್ಟ್ರೀಯ ಪ್ರಗತಿಗೆ ಅಭೂತಪೂರ್ವ ಕೊಡುಗೆಗಳನ್ನು ನೀಡುತ್ತಿರುವ ಕರ್ನಾಟಕದ ನನ್ನ ಸಹೋದರ, ಸಹೋದರಿಯರಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜ್ಯದ ಜನರ ಸಬಲೀಕರಣಕ್ಕಾಗಿ ನಿರಂತರವಾಗಿ ಶ್ರಮಿಸಲಿವೆ’ ಎಂದಿದ್ದಾರೆ.
 

click me!