ಹುಬ್ಬಳ್ಳಿ (ಸೆ.16): ಉದ್ಯಮಿ, ಇಲ್ಲಿಯ ಮಂಜುನಾಥ ನಗರದ ಶಕ್ತಿನಗರದ ನಿವಾಸಿ ರಾಜು (ಯಲ್ಲಪ್ಪಗೌಡ) ಬಿ. ಪಾಟೀಲ (63) ಬುಧವಾರ ಸ್ವ ಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ, ಪುತ್ರಿ ಇದ್ದಾರೆ.
ಮೃತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕುಟುಂಬ ವರ್ಗದ ಸ್ನೇಹಿತರಾಗಿದ್ದು, ಗುರುವಾರ ಬೆಳಗ್ಗೆ ಬೆಂಗಳೂರಿನಿಂದ ನಗರಕ್ಕೆ ಬಂದು ಮೃತರ ಅಂತ್ಯಕ್ರಿಯೆಯಲ್ಲಿ ಸಿಎಂ ಪಾಲ್ಗೊಳ್ಳಲಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬಗ್ಗೆ ಆತಂಕ ಬೇಡ, ಮುಕ್ತ ಚರ್ಚೆಗೆ ಸಿದ್ಧ ಎಂದ ಸಿಎಂ
ಸಿಎಂ ಸಂತಾಪ: ರಾಜು ಪಾಟೀಲ ನನ್ನ ಆತ್ಮೀಯ ಸ್ನೇಹಿತರಾಗಿದ್ದರು. ಬಾಲ್ಯದಿಂದಲೇ ಇಬ್ಬರು ಕೂಡಿ ಬೆಳೆದವರು. ಅವರ ಅಗಲಿಕೆ ನನಗೆ ತೀವ್ರ ದುಃಖವಾಗಿದೆ. ಆ ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.