ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಸೀದಿಯಲ್ಲಿ ಸ್ವಚ್ಛತಾ ಕಾರ್ಯ

By Kannadaprabha NewsFirst Published Aug 11, 2021, 2:22 PM IST
Highlights
  • ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ಸ್ವಚ್ಛತಾ ಕಾರ್ಯ
  • ಮಸೀದಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ಸ್ವಚ್ಛತೆ
  • 75ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕೊಡ್ಲಿಪೇಟೆಯ ಜಾಮೀಯಾ ಮಸ್ಜಿದ್‌ನಲ್ಲಿ ಸ್ವಚ್ಛತಾ ಕಾರ್ಯ

 ಶನಿವಾರಸಂತೆ (ಆ.11):  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೊಡ್ಲಿಪೇಟೆ ಸ್ವಸಹಾಯ ಸಂಘದ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕೊಡ್ಲಿಪೇಟೆಯ ಜಾಮೀಯಾ ಮಸ್ಜಿದ್‌ನಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಯಿತು.

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೊಡ್ಲಿಪೇಟೆ ವಲಯ ಮೇಲ್ವೀಚಾರಕ ಭರತ್‌ಕುಮಾರ್‌ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಹಲವಾರು ಕಾರ್ಯಕ್ರಮಗಳು ಅನುಷ್ಠಾನಗೊಂಡಿದ್ದು ರಾಜ್ಯದಲ್ಲಿ ಸ್ವಸಹಾಯ ಸಂಘಗಳ ಮೂಲಕ ಜನಮನ್ನಣೆಗೊಂಡಿದೆ ಎಂದರು.

ಧರ್ಮಸ್ಥಳ, ಕಟೀಲು, ಕುಕ್ಕೆಯಲ್ಲಿ ದೇಗುಲ ಬಂದ್‌ : ಯಾವಾಗ..?

ಕಳೆದ ಮತ್ತು ಪ್ರಸ್ತುತ ವರ್ಷ ಕೋವಿಡ್‌ ಸಂಧಿಘ್ನ ಪರಿಸ್ಥಿತಿಯಲ್ಲಿ ಬಡವರಿಗೆ ಆಹಾರ ಕಿಟ್‌ ವಿತರಣೆ ಮಾಡುವ ಮೂಲಕ ಸಮಾಜ ಸೇವೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಯೋಜನೆ ವತಿಯಿಂದ ದೇವಸ್ಥಾನ, ಮಸೀದಿ, ಚರ್ಚ್ ಮುಂತಾದ ಧಾರ್ಮಿಕ ಕೇಂದ್ರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದರು.

ಸಂಘದ ಸದಸ್ಯರು ಶ್ರಮದಾನದ ಮೂಲಕ ಮಸೀದಿಯ ಹೊರಂಗಾಣ ಆವರಣದಲ್ಲಿ ಬೆಳೆದಿದ್ದಂತ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಿದರು. ಜಾಮೀಯಾ ಮಸ್ಜಿದ್‌ ಅಧ್ಯಕ್ಷ ಮುಷಾಹಿದ್‌, ಕಾರ್ಯದರ್ಶಿ ಸಮೀವುಲ್ಲಾ, ಸ್ವಸಹಾಯ ಸಂಘದ ಸೇವಾ ಪ್ರತಿನಿಧಿ ಶಂಸಾದ್‌ ಹಾಜರಿದ್ದರು.

ಸ್ವಸಹಾಯ ಸಂಘದ ಸುಮಾರು 15 ಮಂದಿ ಸದಸ್ಯರು ಶ್ರಮದಾನ ಕಾರ್ಯದಲ್ಲಿ ಭಾಗವಹಿಸಿದ್ದರು.

click me!