ಗಣಪತಿ ವಿಸರ್ಜನೆಗೆ ಜಿಲ್ಲಾಡಳಿತ - ಮಂಡಳಿ ನಡುವೆ ಜಟಾಪಟಿ

By Kannadaprabha NewsFirst Published Sep 20, 2021, 9:46 AM IST
Highlights
  • ವಿದ್ಯಾ ಗಣಪತಿ ವಿಸರ್ಜನಾ ಮಹೋತ್ಸವ ವಿಚಾರಕ್ಕೆ ಸಂಬಂಧಿಸಿದಂತೆ ಜಟಾಪಟಿ  
  • ಚಾಮರಾಜನಗರ ಜಿಲ್ಲಾಡಳಿತ ಹಾಗು ವಿದ್ಯಾಗಣಪತಿ ಮಂಡಳಿ ನಡುವೆ ಜಟಾಪಟಿ

ಚಾಮರಾಜನಗರ (ಸೆ.20):  ವಿದ್ಯಾ ಗಣಪತಿ ವಿಸರ್ಜನಾ ಮಹೋತ್ಸವ ವಿಚಾರಕ್ಕೆ ಸಂಬಂಧಿಸಿದಂತೆ ಜಟಾಪಟಿ ನಡೆದಿದೆ. 

ಚಾಮರಾಜನಗರ ಜಿಲ್ಲಾಡಳಿತ ಹಾಗು ವಿದ್ಯಾಗಣಪತಿ ಮಂಡಳಿ ನಡುವೆ ಜಟಾಪಟಿ ಮುಂದುವರಿದಿದೆ.  

ಇಂದು  ಸರಳವಾಗಿ ನಡೆಯಬೇಕಿದ್ದ ವಿಸರ್ಜನಾ ಮಹೋತ್ಸವದಲ್ಲಿ  ಮೆರವಣಿಗೆಗೆ ಜಿಲ್ಲಾಡಲಿತ ಅವಕಾಶ ನೀಡದ ಹಿನ್ನೆಲೆ ಜಟಾಪಟಿ ನಡೆದಿದೆ. 

ಸ್ವಪ್ನ ಶಾಸ್ತ್ರ: ಕನಸಿನಲ್ಲಿ ಗಣಪತಿಯ ಇಂತಹ ಚಿತ್ರ ನೋಡಿದರೆ ಏನಾಗುತ್ತೆ?

ವಿಸರ್ಜನೆ ಮಾಡದೇ ಇರಲು ವಿದ್ಯಾಗಣಪತಿ ಮಂಡಳಿ  ನಿರ್ಧಾರ ಮಾಡಿದ್ದು, ಅನಿರ್ಧಿಷ್ಟಾವಧಿವರೆಗೆ ಗಣಪತಿ ವಿಸರ್ಜನೆ ಮುಂದೂಡಲಾಗಿದೆ.

ಕೋವಿಡ್ ನಿಯಮಗಳೊಂದಿಗೆ ಸರಳ ಮೆರವಣಗೆಗೆ ಜಿಲ್ಲಾಡಳಿತ ಸಮ್ಮತಿ ಸೂಚಿಸಿತ್ತು. ಆದರೆ ಇದೀಗ ಏಕಾಏಕಿ ಮೆರವಣಿಗೆ ನಿಷೇಧ ಮಾಡಿದ ಹಿನ್ನೆಲೆ  ಮೆರವಣಿಗೆಗೆ ಅವಕಾಶ ನೀಡುವವರೆಗೂ ಗಣಪತಿ ವಿಸರ್ಜನೆ ಮಾಡುವುದಿಲ್ಲ ಎಂದು ವಿದ್ಯಾಗಣಪತಿ ಮಂಡಳಿ ಪಟ್ಟು ಹಿಡಿದಿದೆ. 

click me!