ತುಮಕೂರು ನಗರದಲ್ಲಿ ಮತ್ತೊಂದು ಮತಾಂತರ ಪ್ರಕರಣ ಬೆಳಕಿಗೆ ಬಂದಿದ್ದು, ಮೂವರನ್ನ ಬಂಧಿಸಲಾಗಿದೆ. ಇಷ್ಟು ದಿನ ಸೈಲೆಂಟ್ ಆಗಿದ್ದ ಕ್ರೈಸ್ತ ಮತಾಂತರಿಗಳು ಕ್ರಿಸ್ಮಸ್ ಹಬ್ಬ ಹತ್ತಿರವಾಗ್ತಿದ್ದಂತೆ ಆಕ್ಟಿವ್ ಆಗಿದ್ದಾರಂತೆ.
ತುಮಕೂರು (ಡಿ.19): ಕಲ್ಪತರು ನಾಡು ತುಮಕೂರಿನಲ್ಲಿ ಮತಾಂತರ ಜಾಲವೊಂದು ಸದ್ದಿಲ್ಲದೇ ಕೆಲಸ ಮಾಡ್ತಿದ್ಯಾ ಅನ್ನೋ ಅನುಮಾನ ಇದೀಗ ವ್ಯಕ್ತವಾಗ್ತಿದೆ. ಯಾಕಂದ್ರೆ ಜಿಲ್ಲೆಯಲ್ಲಿ ಮತಾಂತರ ಸಂಬಂಧಿ ಚಟುವಟಿಕೆಗಳು ಮೇಲಿಂದ ಮೇಲೆ ಪತ್ತೆಯಾಗ್ತಿವೆ. ಇದೀಗ ತುಮಕೂರು ನಗರದಲ್ಲಿ ಮತ್ತೊಂದು ಮತಾಂತರ ಪ್ರಕರಣ ಬೆಳಕಿಗೆ ಬಂದಿದ್ದು, ಮೂವರನ್ನ ಬಂಧಿಸಲಾಗಿದೆ. ಇಷ್ಟು ದಿನ ಸೈಲೆಂಟ್ ಆಗಿದ್ದ ಕ್ರೈಸ್ತ ಮತಾಂತರಿಗಳು ಕ್ರಿಸ್ಮಸ್ ಹಬ್ಬ ಹತ್ತಿರವಾಗ್ತಿದ್ದಂತೆ ಆಕ್ಟಿವ್ ಆಗಿದ್ದಾರಂತೆ. ಕ್ರಿಸ್ಮಸ್ ಶುಭಾಶಯ ಹೇಳುವ ನೆಪದಲ್ಲಿ ಮನೆ ಮನೆಗಳಿಗೆ ತೆರಳಿ, ಕ್ರೈಸ್ತ ಧರ್ಮ ಪ್ರಚಾರ ಮಾಡ್ತಿದ್ದಾರಂತೆ. ಅಷ್ಟೇ ಅಲ್ಲ, ನೀವು ಕ್ರೈಸ್ತ ಧರ್ಮಕ್ಕೆ ಮತಾಂತರವಾದ್ರೆ ನಿಮಗೆ ಆರ್ಥಿಕ ನೆರವು ನೀಡ್ತೀವಿ ಅಂತಾ ಆಮಿಷಗಳನ್ನ ಒಡ್ದುತ್ತಿದ್ದಾರಂತೆ. ನಗರದ ಮರಳೂರು ದಿಣ್ಣೆ ಬಳಿ ಇದೇ ರೀತಿಯ ಗುಂಪೊಂದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದೆ.
ಇನ್ನು ಯುವಕರೇ ಈ ಮತಾಂತರಿಗಳ ಮೇನ್ ಟಾರ್ಗೆಟ್ ಅನ್ನೋ ವಿಚಾರವೂ ಬೆಳಕಿಗೆ ಬಂದಿದೆ. ಯಾಕಂದ್ರೆ ಮೊದಲು ರವಿ ಎಂಬ ಆಟೋ ಚಾಲಕನನ್ನ ಪರಿಚಯ ಮಾಡಿಕೊಂಡ ಈ ಮತಾಂತರಿಗಳು, ನಿಮ್ಮ ಮನೆಗೆ ಬಂದು ಯೇಸುವಿನ ಬಗ್ಗೆ ಭೋದನೆ ಮಾಡ್ತೀವಿ. ಬೈಬಲ್ ಬಗ್ಗೆ ತಿಳಿಸ್ತೀವಿ ದಯವಿಟ್ಟು ಅವಕಾಶ ಮಾಡಿಕೊಡಿ ಅಂತಾ ಕೇಳಿಕೊಂಡಿದ್ದಾರಂತೆ. ಅಷ್ಟೇ ಅಲ್ಲ, ನಿಮ್ಮ ಸ್ನೇಹಿತರನ್ನು ಸೇರಿಸಿ. ನೀವೆಲ್ಲರೂ ಮತಾಂತರ ಆದ್ರೆ ನಿಮಗೆ ಹಣ ನೀಡ್ತೀವಿ ಅಂತಲೂ ಆಮಿಷ ಒಡ್ಡಿದ್ದಾರಂತೆ. ಬಳಿಕ ಮರಳೂರು ದಿಣ್ಣೆ ಬಳಿಯಿರುವ ರವಿ ಮನೆಗೆ ಬಂದಿದ್ದ ಈ ಮತಾಂತರಿಗಳು ಮೊದಲು ಪ್ರೇಯರ್ ಮಾಡಿ, ನಂತರ ಬೈಬಲ್ ಪಠಣವನ್ನೂ ಮಾಡಿಸಿದ್ದಾರೆ. ಅಷ್ಟೇ ಅಲ್ಲ. ನೀವು ಗಣಪನ ಮೂರ್ತಿ ಮಾಡುವಾಗ ಅವನನ್ನ ಕಾಲಿನಲ್ಲಿ ತುಳಿಯುತ್ತಿರಿ. ಬಳಿಕ ಅವನನ್ನ ಎತ್ತಿಕೊಂಡು ಹೋಗಿ ನೀರಿನಲ್ಲಿ ಎಸೆಯುತ್ತೀರಿ. ಗಣಪ ನಿಜವಾದ ದೇವರೇ ಆಗಿದ್ದಿದ್ರೆ ಹೀಗೆಲ್ಲ ಮಾಡುವಾಗ ಗಣಪನೆ ಬರ್ತಿದ್ನಲ್ವಾ ಅಂತಾ ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರಂತೆ. ಕೊನೆಯಲ್ಲಿ ಶನಿವಾರ ಬೇರೆ ಕಡೆ ಕರೆಯುತ್ತೀವಿ. ಅಲ್ಲಿಗೆ ಬಂದ್ರೆ ಮುಂದೆ ಏನು ಮಾಡ್ಬೇಕು ಅಂತಾ ಹೇಳ್ತಿವಿ ಅಂದಿದ್ದಾರಂತೆ.
ಮಹಿಳೆ, ಮಕ್ಕಳೇ ವಿದೇಶಿ ದೇಣಿಗೆ ಪಡೆದ ಸಂಸ್ಥೆಗಳ ಮತಾಂತರ ಟಾರ್ಗೆಟ್: ಸುಪ್ರೀಂಕೋರ್ಟ್‌ಗೆ ಹೇಳಿಕೆ
ಮತಾಂತರಿಗಳ ಉದ್ದೇಶ ಅರ್ಥ ಆಗ್ತಿದ್ದಂತೆ ರವಿ ಮತ್ತು ಸ್ನೇಹಿತರು ಭಜರಂಗ ದಳದ ಕಾರ್ಯಕರ್ತರಿಗೆ ಕರೆ ಮಾಡಿದ್ದಾರೆ. ಆಗ ಬಜರಂಗದಳದವ್ರು ಪ್ಲಾನ್ ಮಾಡಿ, ಪೊಲೀಸರನ್ನು ಕರೆದುಕೊಂಡು ಹೋಗಿ ಸೀನಿಮಿಯ ಶೈಲಿಯಲ್ಲಿ ಈ ಮತಾಂತರಿಗಳನ್ನ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ಮತಾಂತರಿಗಳ ವಿರುದ್ಧ ಮತಾಂತರ ನಿಷೇಧ ಕಾಯ್ದೆಯಡಿಯಲ್ಲಿ ದೂರು ಕೂಡ ದಾಖಲಾಗಿದ್ದು, ಜಸ್ಸಿ, ಸಾರಾ, ಚೇತನ್ ಎಂಬ ಮೂವರು ಮತಾಂತರಿಗಳನ್ನ ಜಯನಗರ ಪೊಲೀಸರು ಬಂಧಿಸಿದ್ದಾರೆ.
Love Jihad: ಲವ್ ಜಿಹಾದ್ ತಡೆಗೆ ವಿಶೇಷ ಪೊಲೀಸ್ ದಳ ಸ್ಥಾಪನೆ ಆಂದೋಲನ
ಈ ಮತಾಂತರಿಗಳ ಹಿಂದೆ ತುಮಕೂರು ನಗರದ ಶಿರಾ ಗೇಟ್ ಬಳಿ ಇರುವ ಟ್ಯಾಮ್ ಲಿನ್ ಸನ್ ಚರ್ಚ್ ಪ್ರಭಾವ ಇದೆ ಅನ್ನೋ ಆರೋಪ ಕೂಡ ಕೇಳಿಬಂದಿದೆ. ಅದೇನೆ ಇರಲಿ, ಆದಷ್ಟು ಬೇಗನೆ ಸರ್ಕಾರ ಎಚ್ಛೆತ್ತುಕೊಂಡು ಈ ಮತಾಂತರಿಗಳಿಗೆ ಕಡಿವಾಣ ಹಾಕಬೇಕಿದೆ.