ಟೆರರಿಸ್ಟ್ ಆಗುತ್ತೇನೆ, ದರ್ಶನ್ ಪಕ್ಕದ ಸೆಲ್ ಗೆ ಹಾಕಿ ಎಂದವನು ಸರ್ಕಾರಿ ಕಾರಿಗೆ ಬೆಂಕಿ ಹಚ್ಚಿದ!

By Sathish Kumar KHFirst Published Sep 5, 2024, 1:22 PM IST
Highlights

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಯುವಕನೊಬ್ಬ ತಹಸೀಲ್ದಾರ್ ಜೀಪ್‌ಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾನೆ. ತನ್ನ ತಾಯಿಗೆ ಪೊಲೀಸರು ನಿಂದನೆ ಮಾಡಿದ್ದಾರೆಂದು ಆರೋಪಿಸಿ ಈತ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಈ ಹಿಂದೆಯೂ ಈತ ಬೆಂಗಳೂರಿನಲ್ಲಿ ಇದೇ ರೀತಿ ಬೈಕ್‌ಗೆ ಬೆಂಕಿ ಹಚ್ಚಿ ಸುದ್ದಿಯಾಗಿದ್ದ.

ಚಿತ್ರದುರ್ಗ (ಸೆ.05): ಇತ್ತೀಚೆಗೆ ವಿಧಾನಸೌಧದ ಮುಂದೆ ಬೈಕ್ ಒಂದಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದ ಕಿಡಿಗೇಡಿ ಈಗ ನಾನು ಟೆರರಿಸ್ಟ್ ಆಗುತ್ತೇನೆ ನನ್ನನ್ನು ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಸೆಲ್‌ನ ಪಕ್ಕದ ಸೆಲ್‌ಗೆ ಹಾಕಿ ಎಂದು ಚಿತ್ರದುರ್ಗದ ಪೃಥ್ವಿ ಎಂಬ ಯುವಕ ಹುಚ್ಚಾಟ ಆರಂಭಿಸಿದ್ದಾನೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಯುವಕ ಪೃಥ್ವಿರಾಜನ ಹುಚ್ಚಾಟ ಮುಂದುವರೆದಿದೆ. ಚಳ್ಳಕೆರೆ ತಾಲೂಕು ಕಚೇರಿ ಬಳಿ ನಿಲ್ಲಿಸಿದ್ದ ತಹಸೀಲ್ದಾರ್ ಜೀಪ್‌ಗೆ ಬೆಂಕಿ ಹಂಚಿ ವಿಕೃತಿ ಮೆರೆದಿದ್ದಾನೆ. ಹೀಗೆ ಹುಚ್ಚಾಟ ಮಾಡುತ್ತಿರುವ ಯುವಕ ಚಳ್ಳಕೆರೆ ಪಟ್ಟಣದ ಗಾಂಧಿನಗರದ ಪೃಥ್ವಿರಾಜ್. ಇತ್ತೀಚೆಗೆ ಕೆಲ ದಿನಗಳ ಹಿಂದೆ ಬೆಂಗಳೂರಿನ ವಿಧಾನಸೌಧ ಬಳಿ ಬೈಕ್‌ಗೆ ಬೆಂಕಿಯಿಟ್ಟಿದ್ದನು. ಆಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ನಾನು ಪ್ರತಿಭಟನೆ ಮಾಡುವ ಉದ್ದೇಶದಿಂದ ಬೈಕ್‌ಗೆ ಬೆಂಕಿ ಹಚ್ಚಿದ್ದೇನೆ ಎಂದು ಹೇಳಿದ್ದನು. ಆಗ ಪೊಲೀಸರು ಈತನಿಗೆ ನಾಲ್ಕು ಬಾರಿಸಿ ಬುದ್ಧಿ ಹೇಳಿ, ಮುಚ್ಚಳಿಕೆ ಬರೆಸಿಕೊಂಡು ಬೆಂಗಳೂರಿನಿಂದ ಊರಿಗೆ ಕಳಿಸಿದ್ದರು.

Latest Videos

ಬೆಂಗಳೂರು ಏರ್‌ಪೋರ್ಟ್ ನೋಡಿ ಅಮೇರಿಕಾಕ್ಕಿಂತಲೂ ಸೂಪರ್ ಆಗಿದೆ ಎಂದ ಯುಎಸ್ ಖ್ಯಾತ ಯ್ಯೂಟೂಬರ್!

ಆದರೆ, ಇಷ್ಟಕ್ಕೆ ಸುಮ್ಮನಾಗಲೇ ಈಗ ಚಳ್ಳಕೆರೆಯ ತಹಶೀಲ್ದಾರ್ ಕಚೇರಿ ಮುಂದೆ ನಿಲ್ಲಿಸಿದ್ದ ಜೀಪಿಗೆ ಬೆಂಕಿ ಹಚ್ಚಿದ್ದಾರೆ. ಇನ್ನು ಈತ ಸರ್ಕಾರದ ವಿರುದ್ಧ ಇಷ್ಟೊಂದು ಆಕ್ರೋಶ ವ್ಯಕ್ತಪಡಿಸಲು ಕಾರಣವೇನೆಂದು ಕೇಳಿದರೆ ಇದಕ್ಕೆಲ್ಲ ಪೊಲೀಸರೇ ಕಾರಣ ಎಂದು ಹೇಳುತ್ತಾರೆ. ಕೆಲವು ದಿನಗಳ ಹಿಂದೆ ನನ್ನ ಮಗ ಪೃಥ್ವಿರಾಜ್ ಮೂರ್ನಾಲ್ಕು ದಿನಗಳಿಂದ ಕಾಣೆಯಾಗಿದ್ದಾನೆ ಎಂದು ಈತನ ತಾಯಿ ಮಗ ಕಾಣೆಯಾದ ದೂರು ಕೊಡಲು ಹೋಗಿದ್ದಾರೆ. ಆಗ ಚಳ್ಳಕೆರೆ ಪೊಲೀಸರು ತನ್ನ ತಾಯಿಗೆ ನಿಂದನೆ ಮಾಡಿದ್ದಾರೆ ಎಂಬ ಆರೋಪಿಸುತ್ತಿದ್ದಾನೆ.

ಹೀಗಾಗಿ, ನನ್ನ ತಾಯಿಗೆ ನಿಂದನೆ ಮಾಡಿರುವ ಪೊಲೀಸರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ತನ್ನ ತಾಯಿಗೆ ಅವಮಾನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮಾಡಿದ್ದನು. ಇದಕ್ಕೆ ಯಾರೂ ಸ್ಪಂದಿಸದ ಹಿನ್ನೆಲೆಯಲ್ಲಿ ನಾನು ಟೆರರಿಸ್ಟ್ ಆಗುತ್ತೇನೆ, ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್ ಪಕ್ಕದ ಸೆಲ್‌ಗೆ ನನ್ನನ್ನೂ ಹಾಕಿ ಎಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ. ಆಗ, ಪೊಲೀಸರು ಈತನನ್ನು ವಶಕ್ಕೆ ಪಡೆದು ಬುದ್ಧಿವಾದ ಹೇಳಿ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ಕಳಿಸಿದ್ದರು.

ಸ್ವಲ್ಪ ದಯೆ ತೋರಿ ಬಿಟ್ಟಿದ್ರೂ, ಸಾಯೋ ತನಕ ಮಗನನ್ನ ಚೆನ್ನಾಗಿ ನೋಡಿಕೊಳ್ತಿದ್ವಿ: ತಾಯಿ ರತ್ನಪ್ರಭಾ ಕಣ್ಣೀರು!

ಇದರ ನಂತರ ಪುನಃ ಬೆಂಗಳೂರಿನ ವಿಧಾನಸೌಧದ ಮುಂದೆ ಬೈಕಿಗೆ ಬೆಂಕಿ ಹಚ್ಚಿ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದನು. ಈಗ ತಹಸೀಲ್ದಾರ ಜೀಪಿಗೂ ಬೆಂಕಿ ಹಚ್ಚಿದ್ದಾನೆ. ಈ ಘಟನೆಯ ಬೆನ್ನಲ್ಲಿಯೇ ಸ್ಥಳೀಯರು ಪೃಥ್ವಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

click me!