20 ವರ್ಷಗಳಿಂದ ಉಳುಮೆ ಮಾಡ್ತಿದ್ದ ಜಮೀನಿಗೆ ಅರಣ್ಯ ಇಲಾಖೆ ಕಣ್ಣು. ರೈತರ ಪಹಣಿ, ಸಾಗುವಳಿ ಇದ್ದರೂ ರೈತರ ಮೇಲೆ ದಬ್ಬಾಳಿಕೆ ಯಾಕೆ?
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜೂ.19): ಆ ರೈತರ ಜಮೀನುಗಳಿಗೆ ಪಹಣಿ, ಸಾಗುವಳಿ ಬಂದು 20 ವರ್ಷ ಕಳೆದರೂ ಬಗೆ ಹರಿಯುತ್ತಿಲ್ಲ ಆ ಸಮಸ್ಯೆ. ನಮ್ಮ ಭೂಮಿ ನಮಗೆ ಬಿಡಿ ಇಲ್ಲವಾದರೆ ಉಗ್ರವಾಗಿ ಹೋರಾಟ ಮಾಡ್ತೀವಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ಹೊರಹಾಕ್ತಿದ್ದಾರೆ.
undefined
ಚಿತ್ರದುರ್ಗ ತಾಲ್ಲೂಕಿನ ಹುಣಸೇಕಟ್ಟೆ ಗ್ರಾಮದ ಬಳಿ. ಕಳೆದ ಇಪ್ಪತ್ತು ವರ್ಷಗಳಿಂದಲೂ ನಾವು ಈ ಗ್ರಾಮದಲ್ಲಿ ಜಮೀನು ಉಳುಮೆ ಮಾಡಿಕೊಂಡು ಬರ್ತಿದ್ದೇವೆ. ಅದಕ್ಕೆ ಸರಿಯಾಗಿಯೇ ಕಂದಾಯ ಇಲಾಖೆಯಿಂದ ಅಧಿಕೃತವಾಗಿ ಪಹಣಿ, ಸಾಗುವಳಿ ಚೀಟಿಯನ್ನೂ ನೀಡಲಾಗಿದೆ. ಆದ್ರೆ ಈಗ ಏಕಾಏಕಿ ಅರಣ್ಯ ಇಲಾಖೆ ಅಧಿಕಾರಿಗಳು ನಮ್ಮ ಸುಮಾರು 15 ಕ್ಕೂ ಅಧಿಕ ದಲಿತರಿಗೆ ಸೇರಿದ ಜಮೀನುಗಳಲ್ಲಿ ಗುಂಡಿ ತೆಗೆದು ಗಿಡ ನೆಡಲು ಮುಂದಾಗಿರುವುದು ಅಕ್ಷಮ್ಯ ಅಪರಾದ. ಇದನ್ನು ಅಧಿಕಾರಿಗಳ ಬಳಿ ಪ್ರಶ್ನೆ ಮಾಡಿದ್ರೆ ಉಡಾಫೆ ಉತ್ತರ ನೀಡ್ತಿದ್ದಾರೆ. ನಮ್ಮ ಜಮೀನು ನಮಗೆ ಬಿಟ್ಟು, ನಿಮ್ಮ ಪಾಡಿಗೆ ನೀವು ಇದ್ದರೆ ಅನುಕೂಲ ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ನೊಂದ ರೈತರು ಆಕ್ರೋಶ ವ್ಯಕ್ತಪಡಿಸಿದರು.
ದರ್ಶನ್ ನ ರಕ್ಷಣೆಗೆ ಬಿಜೆಪಿ ಶಾಸಕರು, ಸಂಸದರಿಂದ ಒತ್ತಡವಿತ್ತು: ಶಾಸಕ ಪೊನ್ನಣ್ಣ
ಇನ್ನೂ ಅರಣ್ಯ ಇಲಾಖೆ ಅಧಿಕಾರಿಗಳ ದಬ್ಬಾಳಿಕೆ ಇಂದು ಮೊನ್ನೆಯದಲ್ಲ. ಸುಮಾರು ವರ್ಷಗಳಿಂದಲೂ ನೊಂದ, ದಲಿತ ಕುಟುಂಬಗಳ ಜಮೀನುಗಳ ಮೇಲೆ ಕಣ್ಣಾಕುತ್ತಾರೆ. ಆದ್ರೆ ಜಿಲ್ಲಾಡಳಿತವೇ ಜಮೀನುಗಳು ನಮ್ಮ ಗ್ರಾಮದವರವು ಎನ್ನುವ ನಿಟ್ಟಿನಲ್ಲಿ ಪಹಣಿ ನೀಡಿದೆ. ಆದ್ರೆ ಕೆಲ ಕಿಡಿಗೇಡಿಗಳು ಮಾಡಿರುವ ತಪ್ಪಿನಿಂದಾಗಿ, ರೈತರ ಮೇಲೆ ದಬ್ಬಾಳಿಕೆ ಮಾಡಲು ಮುಂದಾಗಿರೋದು ಖಂಡನೀಯ. ಸುಮಾರು 20 ವರ್ಷಗಳಿಂದ ರೈತರು ಉಳುಮೆ ಮಾಡುವಾಗ ಅರಣ್ಯ ಇಲಾಖೆ ಅಧಿಕಾರಿಗಳು ಎಲ್ಲಿ ಹೋಗಿದ್ರು ಎಂದು ರೈತರು ಪ್ರಶ್ನೆ ಮಾಡಿದರು. ಆದ್ದರಿಂದ ಕೂಡಲೇ ಜಿಲ್ಲಾಡಳಿತ ಅರಣ್ಯ ಇಲಾಖೆಗೆ ಎಚ್ಚರಿಕೆ ನೀಡಿ ರೈತರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.
ನೆದರ್ಲ್ಯಾಂಡ್ ಮೂಲದ ವಿಶಿಷ್ಟ ತಳಿಯ ಹಾಲು ಬಳಸುತ್ತಿದೆ ಅಂಬಾನಿ ಕುಟುಂಬ, ಲೀಟರ್ ಹಾಲಿನ ಬೆಲೆ ಇಷ್ಟೊಂದಾ!?
ಒಟ್ಟಾರೆಯಾಗಿ ಇರೋ ಜಮೀನಿನಲ್ಲಿ ಅಲ್ಪ ಸ್ವಲ್ಪ ಬೆಳೆ ಬೆಳೆದು ಜೀವನ ಸಾಗಿಸಬೇಕು ಎಂದು ಆಸೆ ಕಟ್ಕೊಂಡಿದ್ದ ರೈತರ ಹೊಟ್ಟೆ ಮೇಲೆ ಅರಣ್ಯ ಇಲಾಖೆ ಮುಂದಾಗಿರೋದು ಖಂಡನೀಯ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರೈತರ ಸಮಸ್ಯೆಗೆ ಪರಿಹಾರ ಒದಗಿಸಬೇಕಿದೆ.