ಚಿತ್ರದುರ್ಗದಿಂದ ಪುಷ್ಪ-2 ಸಿನಿಮಾಗೆ ಗೇಟ್‌ಪಾಸ್ ನೀಡುವಂತೆ ಕನ್ನಡಿಗರ ಆಗ್ರಹ

By Sathish Kumar KH  |  First Published Dec 4, 2024, 7:28 PM IST

ಚಿತ್ರದುರ್ಗದಲ್ಲಿ ಪುಷ್ಪ-2 ಸಿನಿಮಾ ಪ್ರದರ್ಶನಕ್ಕೆ ಹೆಚ್ಚಿನ ಚಿತ್ರಮಂದಿರಗಳಲ್ಲಿ ಅವಕಾಶ ನೀಡಬಾರದು ಹಾಗೂ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಕನ್ನಡಪರ ಸಂಘಟನೆಗಳು ಮತ್ತು ಕನ್ನಡ ಚಿತ್ರ ನಿರ್ಮಾಪಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. 'ಧೀರ ಭಗತ್ ರಾಯ್' ಸಿನಿಮಾ ಬಿಡುಗಡೆಯ ಹಿನ್ನೆಲೆಯಲ್ಲಿ ಈ ಬೇಡಿಕೆ ಮುನ್ನೆಲೆಗೆ ಬಂದಿದೆ.


ಚಿತ್ರದುರ್ಗ (ಡಿ.04): ಕೋಟೆನಾಡು ಚಿತ್ರದುರ್ಗದ ನಗರದಲ್ಲಿ ಪುಷ್ಪ-2 ಸಿನಿಮಾ ಪ್ರದರ್ಶನಕ್ಕೆ ಹೆಚ್ಚಿನ ಚಿತ್ರಮಂದಿರಗಳಲ್ಲಿ ಅವಕಾಶ ಮಾಡಿಕೊಡಬಾರದು. ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಕನ್ನಡಪರ ಸಂಘಟನೆಗಳಿಂದ ಹಾಗೂ ಕನ್ನಡ ಚಿತ್ರ ನಿರ್ಮಾಪಕರಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಪುಷ್ಪ-2 ಸಿನಿಮಾ ನಾಳೆ ವಿಶ್ವದಾದ್ಯಂತ ಬಿಡುಗಡೆ ಆಗಿತ್ತಿದ್ದು, ವಿವಿಧ ಭಾಷೆಗಳನ್ನು ಪ್ರದರ್ಶನ ಆಗುತ್ತಿದೆ. ಆದರೆ, ಪುಷ್ಪ-2 ಸಿನಿಮಾದ ಅಬ್ಬರಕ್ಕೆ ಕನ್ನಡ ಚಿತ್ರಗಳನ್ನು ಬಲಿ ಕೊಡಬಾರದು ಎಂಬುದು ಕನ್ನಡಿಗರು ಹಾಗೂ ಕನ್ನಡಪರ ಸಂಘಟನೆಗಳ ಆಗ್ರಹವಾಗಿದೆ. ಈ ಹಿನ್ನೆಲೆಯಲ್ಲಿ ಡಿ.5ರಂದು ನಾಳೆ ಚಿತ್ರದುರ್ಗದ ಪ್ರಮುಖ ಚಿತ್ರಮಂದಿರಗಳಲ್ಲಿ ಪುಷ್ಪ-2 ಸಿನಿಮಾ ಇಲೀಸ್ ಮಾಡಿದಲ್ಲಿ ಡಿ.6ರಂದು ಬಿಡುಗಡೆ ಆಗುವ ಕನ್ನಡದ 'ಧೀರ ಭಗತ್ ರಾಯ್' ಸಿನಿಮಾಗೆ ಥಿಯೇಟರ್ ಸಮಸ್ಯೆ ಕಾಡಲಿದೆ. ಹೀಗಾಗಿ, ಪುಷ್ಪ-2 ಸಿನಿಮಾವನ್ನು ಚಿತ್ರದುರ್ಗದ ಹೆಚ್ಚಿನ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡುವುದಕ್ಕೆ ಅವಕಾಶ ನೀಡಬಾರದು ಎಂದು ಕನ್ನಡಪರ ಸಂಘಟನೆಗಳಾದ ಕರುನಾಡ ವಿಜಯಸೇನೆ ಮತ್ತು ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಚಿತ್ರದುರ್ಗದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ.

Tap to resize

Latest Videos

ಚಿತ್ರದುರ್ಗ ನಗರದಲ್ಲಿರುವ ದುರ್ಗದ ಪ್ರಸನ್ನ, ಛೋಟಾ ಮಹಾರಾಜ್ ಮತ್ತು ವೆಂಕಟೇಶ್ವರ ಪ್ರಸಿದ್ಧ ಚಿತ್ರಮಂದಿರಗಳಲ್ಲಿ ನಾಳೆ (ಡಿ.05)  ಪುಷ್ಪ-2 ಸಿನಿಮಾವನ್ನು ಪ್ರದರ್ಶನ ಮಾಡಲಾಗುತ್ತಿದೆ. ಆದರೆ, ಇದೇ ಡಿಸೆಂಬರ್‌ 6ರಂದು ಕನ್ನಡದ 'ಧೀರ ಭಗತ್ ರಾಯ್' ಸಿನಿಮಾ ರಿಲೀಸ್ ಆಗುತ್ತಿದ್ದು, ಈ ಸಿನಿಮಾ ಪ್ರದರ್ಶನಕ್ಕೆ ಚಿತ್ರದುರ್ಗ ನಗರದ ಪ್ರಸಿದ್ಧ ಚಿತ್ರಮಂದಿರಗಳಲ್ಲಿ ಅವಕಾಶ ಇಲ್ಲದಂತಾಗಲಿದೆ. ಆದರೆ, ನಗರದ ಚಿತ್ರಮಂದಿರಗಳ ಮಾಲಕರು ಲಾಭದಾಸೆಗೆ ಕನ್ನಡ ಅಭಿಮಾನಿಗಳು, ಕನ್ನಡ ಕಲಾವಿದರು, ಕನ್ನಡ ಸಿನಿಮಾಗಳು ಸೇರಿದಂತೆ ಕನ್ನಡ ಭಾಷೆಗೆ ಅವಮಾನಿಸುತ್ತಿದ್ದಾರೆ.

ಇದನ್ನೂ ಓದಿ: ಬಗ್ಗೋದೇ ಇಲ್ಲ ಅಂತಿದ್ದ ಪುಷ್ಪರಾಜ್‌ನನ್ನು ಬಗ್ಗಿಸಿದ ಕರ್ನಾಟಕ ಸರ್ಕಾರ!

ಹೀಗಾಗಿ, 'ಧೀರ ಭಗತ್ ರಾಯ್' ನಮ್ಮ‌‌ ಕನ್ನಡದ ಸಿನಿಮಾಗೆ ಹೆಚ್ಚಿನ‌ ಸಂಖ್ಯೆಯಲ್ಲಿ ಚಿತ್ರಮಂದಿರಗಳನ್ನು ನೀಡುವಂತೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕನ್ನಡ ಸಿನಿಮಾಗೆ ಮೊದಲ ಆದ್ಯತೆ ನೀಡಬೇಕು ಎಂದು ಕನ್ನಡ ಸಿನಿಮಾಗಳ ಸಹ ನಿರ್ಮಾಪಕ ಎಸ್. ಕರಿಯಪ್ಪ ಹಾಗೂ ಕರುನಾಡ ವಿಜಯಸೇನೆ ಮತ್ತು ಜಯ ಕರ್ನಾಟಕ ಜನಪರ ವೇದಿಕೆಗಳ ಸದಸ್ಯರು ಆಗ್ರಹಿಸಿದ್ದಾರೆ.

click me!