ಮಾನ್ವಿಯಲ್ಲಿ ಗಮನ ಸೆಳೆದ ಗಾಂಧಿ ವೇಷಧಾರಿ ಚಿಣ್ಣರು

Published : Oct 03, 2019, 11:27 AM IST
ಮಾನ್ವಿಯಲ್ಲಿ ಗಮನ ಸೆಳೆದ ಗಾಂಧಿ ವೇಷಧಾರಿ ಚಿಣ್ಣರು

ಸಾರಾಂಶ

ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆಯ ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ 150ನೇ ಜಯಂತಿ, ಮಾಜಿ ಪ್ರಧಾನಿ ದಿ.ಲಾಲ್‌ಬಹದ್ದೂರ್‌ ಶಾಸ್ತ್ರಿ 114ನೇ ಜಯಂತಿ ಆಚರಣೆ| ಶಾಲೆಯ 150 ವಿದ್ಯಾರ್ಥಿಗಳು ಗಾಂಧಿ ವೇಷ ಧರಿಸಿ ವಿಶಿಷ್ಟ ರೀತಿಯಲ್ಲಿ ಕಂಗೊಳಿಸಿದರು| ವಿದ್ಯಾರ್ಥಿಗಳು ಗಾಂಧಿ ವೇಷ ಹಾಕಿರುವುದು ನೋಡುಗರ ಕಣ್ಮನ ಸೆಳೆಯುವಂತಿತ್ತು|   

ಮಾನ್ವಿ(ಅ.3): ನೇತಾಜಿ ಶಿಕ್ಷಣ ಸಂಸ್ಥೆಯ ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ 150ನೇ ಜಯಂತಿ, ಮಾಜಿ ಪ್ರಧಾನಿ ದಿ.ಲಾಲ್‌ಬಹದ್ದೂರ್‌ ಶಾಸ್ತ್ರಿ 114ನೇ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಶಾಲೆಯ 150 ವಿದ್ಯಾರ್ಥಿಗಳು ಗಾಂಧಿ ವೇಷ ಹಾಕಿಕೊಂಡು ವಿಶಿಷ್ಟ ರೀತಿಯಲ್ಲಿ ಕಂಗೊಳಿಸಿದರು.

ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ನೇತಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಈ.ನರಸಿಂಹ ಅವರು ಗಾಂಧೀಜಿಯವರ 150ನೇ ಜಯಂತಿ ಅಂಗವಾಗಿ ವಿದ್ಯಾರ್ಥಿಗಳು ಗಾಂಧಿ ವೇಷ ಹಾಕಿರುವುದು ನೋಡುಗರ ಕಣ್ಮನ ಸೆಳೆಯುವಂತಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಈ ವೇಳೆ ಪಕ್ಷಿಪ್ರೇಮಿ ಸಲ್ಲಾವುದ್ದೀನ್‌, ಸಂಸ್ಥೆಯ ಕಾರ್ಯದರ್ಶಿ ಕೆ.ವಿಜಯಲಕ್ಷ್ಮೀ, ಮುಖ್ಯೋಫಾಧ್ಯಯನಿ ಅನೀಸ್‌ ಫಾತಿಮಾ, ಬಸವರಾಜ, ಸಾವಿತ್ರಿ, ಶೀಲಾ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ಮಾನ್ವಿ ಪಟ್ಟಣದ ನೇತಾಜಿ ಶಾಲೆಯ 150 ವಿದ್ಯಾರ್ಥಿಗಳು ಗಾಂಧಿ ವೇಷದಾರಿಯಾಗಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
 

PREV
click me!

Recommended Stories

ಗಲಾಟೆ ಪ್ರಕರಣದಲ್ಲಿ ಗುಂಡಿನ ದಾಳಿ, ತನ್ನ ಹತ್ಯೆಗೆ ಯತ್ನ ಎಂದು ಆರೋಪಿಸಿದ ಜನಾರ್ಧನ ರೆಡ್ಡಿ
ಬ್ಯಾನರ್ ವಿಚಾರದಲ್ಲಿ ಕಲ್ಲುತೂರಾಟ, ಜನಾರ್ಧನ ರೆಡ್ಡಿ ಮನೆ ಮುಂದೆ ಬಿಗುವಿನ ವಾತಾವರಣ