ಬಾಗಲಕೋಟೆ: ಬಾದಾಮಿಯೆಂದು ವಿಷಕಾರಿ ಬೀಜ ತಿಂದ ಮಕ್ಕಳು ಅಸ್ವಸ್ಥ

By Kannadaprabha NewsFirst Published Nov 8, 2023, 10:57 AM IST
Highlights

ವಿಷಕಾರಿ ಬೀಜ ಸೇವಿಸಿ ಐವರು ಮಕ್ಕಳು ಅಸ್ವಸ್ಥರಾದ ಘಟನೆ ಬಾಗಲಕೋಟೆ ಜಿಲ್ಲೆಯ ತೇರದಾಳ ವ್ಯಾಪ್ತಿಯಲ್ಲಿ ಜರುಗಿದೆ.

ರಬಕವಿ-ಬನಹಟ್ಟಿ(ನ.08):  ಶಾಲೆಗೆ ಚಕ್ಕರ್‌ ಹಾಕಿ ಬೆಟ್ಟದಲ್ಲಿ ತಿರುಗಾಡುತ್ತಿದ್ದ ವೇಳೆ ಅಲ್ಲಿರುವ ವಿಷಕಾರಿ ಬೀಜ ಸೇವಿಸಿ ಐವರು ಮಕ್ಕಳು ಅಸ್ವಸ್ಥರಾದ ಘಟನೆ ಬಾಗಲಕೋಟೆ ಜಿಲ್ಲೆಯ ತೇರದಾಳ ವ್ಯಾಪ್ತಿಯಲ್ಲಿ ಜರುಗಿದೆ.

ತೇರದಾಳದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಐವರು ಮಂಗಳವಾರ ಮಧ್ಯಾಹ್ನ ಹಳಿಂಗಳಿ ಗ್ರಾಮದಲ್ಲಿರುವ ಭದ್ರಗಿರಿ ಬೆಟ್ಟದಲ್ಲಿ ಆಟವಾಡಿದ್ದಾರೆ. ನಂತರ ಅಲ್ಲಿಯೇ ಇದ್ದ ಗಿಡವೊಂದರ ಬೀಜಗಳನ್ನು ಬಾದಾಮಿ ಬೀಜ ಎಂದು ತಿಳಿದು ತಿಂದು ಅಸ್ವಸ್ಥಗೊಂಡಿದ್ದಾರೆ. 

'ದಲಿತ ಸಿಎಂ ಯಾಕಾಗಬಾರದು' ವಾಲ್ಮೀಕಿ ಸ್ವಾಮೀಜಿ ಹೇಳಿಕೆ; ಕಾಲ ಕೂಡಿ ಬಂದಾಗ ಅವಕಾಶ ಸಿಗುತ್ತೆ ಎಂದ ಸತೀಶ ಜಾರಕಿಹೊಳಿ

ವಿಷಯ ತಿಳಿದ ವಾರ್ಡನ್ ವಸಂತ್‌ ಹಿರೇಮಠ ಸ್ಥಳಕ್ಕೆ ತೆರಳಿ ಮಕ್ಕಳನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಕ್ಕಳು ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

click me!