Chikkamagaluru: ಬಸ್ ನಿರ್ವಾಹಕನ ಬೇಜವಾಬ್ದಾರಿತನಕ್ಕೆ ಯುವತಿ ಬಲಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ

By Govindaraj SFirst Published Sep 21, 2022, 10:23 PM IST
Highlights

ಆಕೆ ಬಡ ಕುಟುಂಬದ ಹುಡುಗಿ. ಅಂದ-ಚಂದ-ಬುದ್ಧಿ-ಗುಣಕ್ಕೇನು ಬಡತನವಿರಲಿಲ್ಲ. ಅಪ್ಪ-ಅಮ್ಮ ಕೂಲಿ ಮಾಡಿ ಮಗಳನ್ನ ಹಾಸ್ಟೆಲ್‌ನಲ್ಲಿ ಬಿಟ್ಟು ಓದಿಸುತ್ತಿದ್ದರು. ಮಗಳನ್ನ ಮುಂದೊಂದು ದಿನ ಒಳ್ಳೆ ಸ್ಥಾನದಲ್ಲಿ ಕೂರಿಸ ನೋಡ್ಬೇಕು ಅಂತ ಕನಸೊತ್ತಿದ್ದರು.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಸೆ.21): ಆಕೆ ಬಡ ಕುಟುಂಬದ ಹುಡುಗಿ. ಅಂದ-ಚಂದ-ಬುದ್ಧಿ-ಗುಣಕ್ಕೇನು ಬಡತನವಿರಲಿಲ್ಲ. ಅಪ್ಪ-ಅಮ್ಮ ಕೂಲಿ ಮಾಡಿ ಮಗಳನ್ನ ಹಾಸ್ಟೆಲ್‌ನಲ್ಲಿ ಬಿಟ್ಟು ಓದಿಸುತ್ತಿದ್ದರು. ಮಗಳನ್ನ ಮುಂದೊಂದು ದಿನ ಒಳ್ಳೆ ಸ್ಥಾನದಲ್ಲಿ ಕೂರಿಸ ನೋಡ್ಬೇಕು ಅಂತ ಕನಸೊತ್ತಿದ್ದರು. ಆದರೆ ಯಾವ ಬಸ್ಸಿನಲ್ಲಿ ಕಾಲೇಜಿಗೆ ಬರ್ತಿದ್ಲೋ ಅದೇ ಬಸ್ ಆಕೆಯ ಪ್ರಾಣಕ್ಕೆ ಸಂಚರಕಾರ ತಂದಿದೆ. ಡ್ರೈವರ್ ಮಾಡಿದ ಅದೊಂದು ಸಣ್ಣ ತಪ್ಪಿಗೆ ಹುಡುಗಿ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡಿದೆ. ಹೆತ್ತವರ ಎದೆಯಲ್ಲಿ ಬೆಂಕಿಯುರಿಯುತ್ತಿದ್ದರೂ ಆ ಬಡಕಾರ್ಮಿಕರು ಮಹಾನ್ ಕಾರ್ಯಕ್ಕೆ ಮುಂದಾಗಿದ್ದಾರೆ. ಮಗಳ ಸಾವಿನ ನೋವಿನಲ್ಲೂ ಸಾವಿಗೆ ಸಾರ್ಥಕತೆ ಮೆರೆದಿದ್ದಾರೆ. 

ಕಾಫಿನಾಡು ಇತಿಹಾಸದ ಅಪರೂಪದ ಕ್ಷಣಕ್ಕೆ ಸಾಕ್ಷಿ: ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸೋಮನಹಳ್ಳಿ ತಾಂಡ್ಯಾದ ರಕ್ಷಿತಾ ಐಸಿಯು ಬೆಡ್ ಮೇಲೆ ಹೋರಾಟ ನಡೆಸುತ್ತಿದ್ದಾಳೆ. ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಕಾರಿಡಾರ್ನಲ್ಲಿ ಮಗಳು ಉಳಿಯಲಿ ಎಂದು ಹೆತ್ತವರು ದೇವರಲ್ಲಿ ಪ್ರಾರ್ಥನೆ ಮಾಡಿದರೆ ಗ್ರಾಮದಲ್ಲಿ 400ಕ್ಕೂ ಅಧಿಕ ಜನ ಆಕೆಗಾಗಿ ಕಾದುಕೂತಿದ್ದಾರೆ. ಆದರೆ, ಯಾರ ಪ್ರಾರ್ಥನೆಯೂ ಫಲಿಸಿಲ್ಲ. ಹೌದು! ವಿಧಿ ಯುವತಿಯ ಬಾಳಿನಲ್ಲಿ ಚೆಲ್ಲಾಟವಾಡಿದೆ. ಚಿಕ್ಕಮಗಳೂರು ನಗರದ ಬಸವನಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಕಲ್ಲಿ ಫಸ್ಟ್ ಇಯರ್ ಕಾಮರ್ಸ್ ಓದುತ್ತಿದ್ದಳು. 

ಚಿಕ್ಕಮಗಳೂರು: ರಸಗೊಬ್ಬರ ಅಧಿಕ ಬೆಲೆಗೆ ಮಾರಾಟ, ಕೃಷಿ ಅಧಿಕಾರಿಗಳಿಂದ ದಾಳಿ

ಮೊನ್ನೆ ಮನೆಗೆ ಹೋಗುವಾಗ ಬಸ್ಸಿನಿಂದ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಗಾಯಗೊಂಡಿದ್ದ ರಕ್ಷಿತಾಳನ್ನ ಸ್ಥಳೀಯರು-ಸಂಬಂಧಿಕರು ಆಸ್ಪತ್ರೆಗೆ ಸೇರಿಸಿದ್ರು. ಆದ್ರೆ, ತಲೆಗೆ ಗಂಭೀರ ಗಾಯವಾದ ಹಿನ್ನೆಲೆ ಬದುಕಿಸಲು ಸಾಧ್ಯವೇ ಇಲ್ಲ ಅಂತ ವೈದ್ಯರು ಕೈಚೆಲ್ಲಿದರು. ಕೊನೆಗೆ ರಕ್ಷಿತಾಳ ಬೇರೆಲ್ಲಾ ಅಂಗಾಂಗಗಳಿಗೆ ಯಾವುದೇ ತೊಂದರೆಯಾಗದ ಹಿನ್ನೆಲೆ ಅವುಗಳ ದಾನಕ್ಕೆ ನೀವು ಮುಂದಾಗಬಹುದು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಎದೆಮಟ್ಟದ ಮಗಳನ್ನ ಕಳೆದುಕೊಂಡ ನೋವಲ್ಲೂ ಅಪ್ಪ ಶೇಖರ್ ನಾಯ್ಕ್-ಅಮ್ಮ ಲಕ್ಷ್ಮಿ ಬಾಯಿ ರಕ್ಷಿತಾಳ ಎಲ್ಲಾ ಅಂಗಾಂಗ ದಾನಕ್ಕೆ ಮುಂದಾಗಿ ಮಗಳ ಸಾವಿಗೆ ಸಾರ್ಥಕತೆ ಮೆರೆದಿದ್ದಾರೆ. 

ಎರಡು ಹೆಲಿಕ್ಯಾಪ್ಟರ್ ಮೂಲಕ ರಕ್ಷಿತಾಳ ಅಂಗಾಂಗಗಳ ರವಾನೆ: ಹೃದಯ, ಎರಡು ಕಿಡ್ನಿ, ಎರಡು ಕಣ್ಣುಗಳು, ಎರಡು ಶ್ವಾಸಕೋಶ ಸೇರಿ ಒಟ್ಟು ಒಂಭತ್ತು ಮಂದಿಗೆ ರಕ್ಷಿತಾಳ ಅಂಗಾಂಗಗಳನ್ನ ಜೋಡಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿಯೇ ಈಗಾಗಲೇ ಚಿಕ್ಕಮಗಳೂರಿಗೆ ಬೆಂಗಳೂರು, ಚೆನ್ನೈನಿಂದ ನುರಿತ ವೈದ್ಯರ ತಂಡವೂ ಆಗಮಿಸಿದೆ. ನಾಳೆ ಬೆಳಗ್ಗೆ 10.30ರಿಂದ 12 ಗಂಟೆಯೊಳಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಐಸಿಯುನಲ್ಲಿರುವ ರಕ್ಷಿತಾಳ ಅಂಗಾಂಗಳನ್ನ ತೆಗೆಯುವ ಪ್ರಕ್ರಿಯೆ ನಡೆಯಲಿದೆ. ಕೂಡಲೇ ಎರಡು ಹೆಲಿಕ್ಯಾಪ್ಟರ್ ಮೂಲಕ ರಕ್ಷಿತಾಳ ಅಂಗಾಂಗಗಳನ್ನ ರವಾನೆ ಮಾಡಲು ಜಿಲ್ಲಾಡಳಿತ ಸಿದ್ದತೆ ನಡೆಸಿದೆ. 

Chikkamagaluru: ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಿ: ಸಿ.ಟಿ.ರವಿ

ಒಟ್ಟಾರೆ, ಮಗಳ ಸಾವಿನ ನೋವಿನಲ್ಲೂ ಆಕೆಯ ಅಂಗಾಂಗಗಳನ್ನ ದಾನ ಮಾಡಲು ನಿರ್ಧರಿಸಿರುವ ಹೆತ್ತವರಿಗೆ ಹ್ಯಾಟ್ಸಾಫ್ ಹೇಳಲೇಬೇಕು. 9 ಮಂದಿಯ ಜೀವಕ್ಕೆ ಬೆಳಕಾಗಿ ಸಾವಿನಲ್ಲೂ ಸಾರ್ಥಕತೆ ತೋರುತ್ತಿರುವ ಯುವತಿ ರಕ್ಷಿತಾ ಸಮಾಜಕ್ಕೆ ಮಾದರಿಯೇ ಸರಿ. ಇತಿಹಾಸದಲ್ಲಿ ಮೊದಲ ಬಾರಿಗೆ ಕಾಫಿನಾಡು ಇಂತಹದ್ದೊಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ಆದರೆ, ರಕ್ಷಿತಾಳ ಒಂದೊಂದು ಅಂಗವೂ ಒಬ್ಬರ ಜೀವ ಉಳಿಸುತ್ತೆ. ಆಕೆ ಎದೆಬಡಿತ ಮತ್ತೊಬ್ಬರಿಗೆ ಕೇಳಿಸುತ್ತೆ. ಆದರೆ, ನಮಗೆ ಕೇಳಿಸಲ್ಲ ಅನ್ನೋದು ನೋವು ಕುಟುಂಬಸ್ಥರದ್ದು.

click me!