ಟ್ರಾಫಿಕ್ ಪೊಲೀಸ್ ಕಿರಿಕಿರಿ: ರಿಸಿಪ್ಟ್ ಕೇಳಿದ್ದಕ್ಕೆ ಬಿತ್ತು ಗೂಸಾ..!

By Kannadaprabha News  |  First Published Sep 29, 2019, 11:41 AM IST

ಹೊಸ ಸಂಚಾರ ನಿಯಮಗಳು ಜಾರಿಯಾದ ಬೆನ್ನಲ್ಲೇ ಟ್ರಾಫಿಕ್ ಪೊಲೀಸರ ದರ್ಪ ಮಿತಿ ಮೀರುತ್ತಿದೆ ಎನ್ನುವುದಕ್ಕೆ ಸಾಕ್ಷಿ ಎಂಬಂತಹ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ದಂಡ ನೀಡಿ ರಿಸಿಪ್ಟ್ ಕೇಳಿದ್ದಕ್ಕಾಗಿ ವ್ಯಕ್ತಿಯೊಬ್ಬರ ಮೇಲೆ ಟ್ರಾಫಿಕ್ ಪೊಲೀಸ್ ಹಲ್ಲೆ ಮಾಡಿದ್ದಾರೆ.


ಚಿಕ್ಕಮಗಳೂರು(ಸೆ.29): ಟ್ರಾಫಿಕ್ ಪೊಲೀಸರ ಕಿರಿಕಿರಿ ಮಿತಿ ಮೀರಿದ್ದು, ಸಂಚಾರ ನಿಯಮಗಳು ಬದಲಾಗಿ ಟ್ರಾಫಿಕ್ ಪೊಲೀಸರ ದರ್ಪ ಹೆಚ್ಚಾಗಿದೆ. ಚಿಕ್ಕಮಗಳೂರಿನಲ್ಲಿ ವ್ಯಕ್ತಿಯೊಬ್ಬರಿಂದ ದಂಡ ಪಡೆದ ಪೊಲೀಸರು ರಿಸಿಪ್ಟ್ ನೀಡಲು ನಿರಾಕರಿಸಿದ್ದಾರೆ.

ದಂಡ ಕಟ್ಟಿ ರಿಸಿಪ್ಟ್ ಕೇಳಿದ್ರೆ ಬೀಳ್ತಾವೆ ಗೂಸಾ:

Latest Videos

undefined

ದಂಡ ಕಟ್ಟಿದ ಮೇಲೆ ರಿಸಿಪ್ಟ್ ಪಡೆಯಬೇಕಾಗಿದ್ದು, ರಿಸಿಪ್ಟ್ ಕೇಳಿದ ವ್ಯಕ್ತಿಗೆ ಬೇಕಾಬಿಟ್ಟಿ ಒದೆ ಬಿದ್ದಿದೆ. ರಿಸಿಪ್ಟ್ ಕೇಳಿದ್ದಕ್ಕೆ ಕೆಂಡಾಮಂಡಲವಾದ ಟ್ರಾಫಿಕ್ ಪೊಳೀಸ್ ವ್ಯಕ್ತಿಯ ಮೇಲೆಯೇ ಹಲ್ಲೆ ನಡೆಸಿದ್ದಾರೆ. ವಾಹನ ಸವಾರರಿಗೆ ಪೊಲೀಸ್ ಸಿಬ್ಬಂದಿ ಹೊಡೆಯುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ದಂಡ ಕಟ್ಟಿದ್ಮೇಲೆ ರಶೀದಿ ಕೇಳಿದ್ದಕ್ಕೆ ಟ್ರಾಫಿಕ್ ಪೇದೆ ಸಿಕ್ಕಾಪಟ್ಟೆ ಸಿಟ್ಟುಮಾಡಿ ಜಗಳ ಮಾಡಿದ್ದಾರೆ. ತಾಳ್ಮೆ ಕಳೆದುಕೊಂಡ ಪೊಲೀಸ್ ಅವಾಚ್ಯವಾಗಿ ವಾಹನ ಸವಾರನಿಗೆ ಬೈದು ಹೊಡೆದಿದ್ದಾರೆ.

ಮಂಗಳೂರು: ನಡೆದುಕೊಂಡು ಹೋಗ್ತಿದ್ದ ವ್ಯಕ್ತಿಗೆ ದಂಡ..!

ಟ್ರಾಫೀಕ್ ಪೊಲೀಸ್ ಪೇದೆ ಮಂಗಲ್ ದಾಸ್ ದೌರ್ಜನ್ಯದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದು, ಘಟನೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ಅನ್ಯಾಯ ಪ್ರಶ್ನಿಸಿದ್ರೆ ಠಾಣೆಗೆ ಕರೆದೊಯ್ದು ಹಿಗ್ಗಾಮುಗ್ಗಾ ಗೂಸಾ ಕೊಡುವ ಪೊಲೀಸರ ನೀತಿಯ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಂಡ ಕಟ್ಟಿದ್ರು ಪೊಲೀಸರ ದೌರ್ಜನ್ಯ ನಿಲ್ಲುತ್ತಿಲ್ಲ ಎನ್ನೋದು ವಿಪರ್ಯಾಸ.

'ಶಿವಮೊಗ್ಗ ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಗೆ ಆದ್ಯತೆ'

click me!