ಚಿಕ್ಕಮಗಳೂರು: 275 ಕಾರ್ಯಾಚರಣೇಲಿ ಭಾಗಿ, 61 ಪ್ರಕರಣಗಳನ್ನು ಭೇದಿಸಿದ್ದ ಪೊಲೀಸ್‌ ಶ್ವಾನ ದತ್ತ ನಿಧನ

Kannadaprabha News   | Kannada Prabha
Published : Nov 08, 2026, 06:46 AM IST
Chikkamagaluru Police dog Datta dies

ಸಾರಾಂಶ

ಚಿಕ್ಕಮಗಳೂರು ಪೊಲೀಸ್ ಇಲಾಖೆಯ ಅಪರಾಧ ಪತ್ತೆ ಶ್ವಾನ 'ದತ್ತ' ಅನಾರೋಗ್ಯದಿಂದ ಮೃತಪಟ್ಟಿದೆ. 275 ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದ ಈ ಶ್ವಾನವು, ನಾಪತ್ತೆಯಾಗಿದ್ದ ವೃದ್ಧರೊಬ್ಬರನ್ನು ಜೀವಂತವಾಗಿ ರಕ್ಷಿಸುವ ಮೂಲಕ ವಿಶೇಷ ಸಾಧನೆ ಮಾಡಿತ್ತು.

ಚಿಕ್ಕಮಗಳೂರು (ನ.8): ಪೊಲೀಸ್‌ ಇಲಾಖೆಯಲ್ಲಿ 275 ಪ್ರಕರಣಗಳ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಹೆಮ್ಮೆಯ ಶ್ವಾನ ‘ದತ್ತ’ ಅನಾರೋಗ್ಯದಿಂದ ಶನಿವಾರ ಮೃತಪಟ್ಟಿದೆ.

ಬೆಂಗಳೂರಲ್ಲಿ ಕಠಿಣ ತರಬೇತಿ ಪಡೆದಿದ್ದ ದತ್ತ

2019ರ ಮೇ ತಿಂಗಳಲ್ಲಿ ಜನಿಸಿದ್ದ ದತ್ತ, ಅದೇ ವರ್ಷ ಅಪರಾಧ ಪತ್ತೆ ಶ್ವಾನವಾಗಿ ಪೊಲೀಸ್ ಇಲಾಖೆಗೆ ಸೇರ್ಪಡೆ ಗೊಂಡಿತ್ತು. ಬೆಂಗಳೂರಿನಲ್ಲಿ ಕಠಿಣ ತರಬೇತಿ ಪಡೆದಿದ್ದ ದತ್ತ, ಹ್ಯಾಂಡ್ಲರ್‌ಗಳಾದ ರಾಜಪ್ಪ ಎಲ್.ಜಿ. ಹಾಗೂ ಮಂಜುನಾಥ್ ಎ.ಎಂ. ಅವರ ಮಾರ್ಗದರ್ಶನದಲ್ಲಿ ಕರ್ತವ್ಯ ನಿರ್ವಹಿಸಿತ್ತು.

61 ಪ್ರಕರಣಗಳಲ್ಲಿ ಪೊಲೀಸರಿಗೆ ಮಹತ್ವದ ಸುಳಿವು

ಕಳ್ಳತನ, ದರೋಡೆ, ಕೊಲೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿ 61 ಪ್ರಕರಣಗಳಲ್ಲಿ ಪೊಲೀಸರಿಗೆ ಮಹತ್ವದ ಸುಳಿವು ನೀಡಿತ್ತು. ಅಲ್ಲದೆ, 9 ಪ್ರಕರಣಗಳಲ್ಲಿ ಆರೋಪಿಗಳನ್ನು ನಿಖರವಾಗಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿತ್ತು.

70 ವರ್ಷದ ವೃದ್ಧನನ್ನ ಜೀವಂತ ರಕ್ಷಿಸಿದ್ದ ಶ್ವಾನ

2025ರಲ್ಲಿ ಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ 70 ವರ್ಷದ ವೃದ್ಧರೊಬ್ಬರನ್ನು ಸತತ 3 ದಿನಗಳ ಕಾರ್ಯಾಚರಣೆ ಬಳಿಕ ದಟ್ಟ ಅರಣ್ಯದಲ್ಲಿ ಜೀವಂತವಾಗಿ ಪತ್ತೆಹಚ್ಚುವ ಮೂಲಕ ವಿಶೇಷ ಸಾಧನೆ ಮಾಡಿತ್ತು. 2 ಬಾರಿ ವಲಯ ಮಟ್ಟದ ಬೆಳ್ಳಿ ಪದಕ ಗಳಿಸಿದ್ದ ದತ್ತ, ರಾಜ್ಯಮಟ್ಟದ ಸ್ಪರ್ಧೆಯಲ್ಲಿಯೂ ಪ್ರತಿನಿಧಿಸಿತ್ತು.

ದತ್ತನ ನಿಧನಕ್ಕೆ ಅಧಿಕಾರಿಗಳು, ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ.

PREV
Read more Articles on
click me!

Recommended Stories

ಬಂಜೆತನದಿಂದ ಬಳಲುತ್ತಿರುವ ಮಹಿಳೆಯರಿಗೆ ಗುಡ್‌ನ್ಯೂಸ್! 4 ಸರ್ಕಾರಿ ಆಸ್ಪತ್ರೆಗಳಲ್ಲಿ ಐವಿಎಫ್‌ ಕೇಂದ್ರ, ಯಾವಾಗ ಆರಂಭ? ಎಲ್ಲೆಲ್ಲಿ?
ಮೇಖ್ರಿ ಸರ್ಕಲ್ -ಹೆಬ್ಬಾಳ ಕಾಮಗಾರಿ: BDA ಸ್ಪಷ್ಟನೆಯಿಂದ ನಿಟ್ಟುಸಿರು ಬಿಟ್ಟ ಜನರು