
ಚಿಕ್ಕಮಗಳೂರು: ನಗರದ ಎ.ಐ.ಟಿ. ವೃತ್ತದ ಬಳಿಯ ಎಂ.ಇ.ಎಸ್. ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಈದ್ ಮಿಲಾದ್ ಆಚರಣೆ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿ, ಹಿಂದೂ ಪರ ಸಂಘಟನೆಗಳ ಮುಖಂಡರು ಹಾಗೂ ಶಾಲಾ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದ ಘಟನೆ ಶನಿವಾರ ನಡೆದಿದೆ.
ಶಾಲೆಯಲ್ಲಿ ಈದ್ ಮಿಲಾದ್ ಆಚರಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಿಂದೂ ಪರ ಸಂಘಟನೆಗಳ ಮುಖಂಡರು ಹಾಗೂ ವಿದ್ಯಾರ್ಥಿಗಳ ಪೋಷಕರು ಶಾಲೆ ಬಳಿ ಜಮಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ ಕಾರ್ಯ ಕ್ರಮವನ್ನು ನಿಲ್ಲಿಸಲಾಗಿದೆ.
ಈ ವೇಳೆ ಸಂಘಟನೆಗಳ ಮುಖಂಡರು, ಶಿಕ್ಷಕರು ಹಾಗೂ ಶಾಲಾ ಆಡಳಿತದೊಂದಿಗೆ ಮಾತಿನ ಚಕಮಕಿ ನಡೆಸಿದ್ದು, ಈದ್ ಮಿಲಾದ್ ಆಚರಣೆಗೆ ಮಕ್ಕಳಿಗೆ ಜುಬ್ಬಾ ಧರಿಸಿ ಬರುವಂತೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ನೀಡಲಾಗಿದೆ ಎಂದು ಆರೋಪಿಸಿದರು. ಆದರೆ, ಶಾಲಾ ನಿಯಮದಂತೆ ವಿದ್ಯಾರ್ಥಿಗಳು ಕಲರ್ ಡ್ರೆಸ್‌ನಲ್ಲಿ ಬಂದಿದ್ದರು ಎಂದು ಪ್ರಾಂಶುಪಾಲೆ ಅಕ್ಷತಾ ಸ್ಪಷ್ಟಪಡಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. ಪ್ರಾಂಶುಪಾಲೆಯನ್ನು ಅವಾಚ್ಯವಾಗಿ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ ಅಕ್ಷತಾ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
BNS 329(4), 352 ಹಾಗೂ 190ರ ಅಡಿಯಲ್ಲಿ ಕೋಟೆ ಪ್ರಸಾದ್, ಬೆಣ್ಣೆ ಕೃಷ್ಣ, ಶಿವಣ್ಣ, ದಿಲೀಪ್ ಶೆಟ್ಟಿ, ಸುನಿಲ್, ರಾಜೇಗೌಡ ಸೇರಿದಂತೆ ಹಲವರ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Chikkamgaluru: ಟಿಪ್ಪು ಕಟೌಟ್‌ಗೆ ಪಾಕಿಸ್ತಾನ ಹಾಡು, ಚಿಕ್ಕಮಗಳೂರಿನಲ್ಲಿ ಪಾಕ್ ಪ್ರೇಮಿಗಳಿಗೆ ಪೊಲೀಸರ ಶಾಕ್!
ಚಿಕ್ಕಮಗಳೂರು: ಸೆ.4 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕಡ್ಡಾಯವಾಗಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ಸರ್ಕಾರಿ ಸುತ್ತೋಲೆಯಂತೆ ನಿಷೇದಿಸಲಾಗಿದೆ. ಕೋಳಿ, ಕುರಿ, ಮೀನು ಮಾಂಸ ಮಾರಾಟಗಾರರು ಮತ್ತು ಮಾಂಸಾಹಾರಿ ಹೋಟೆಲ್‌ಗಳನ್ನು ಈ ದಿನದಂದು ತೆರೆಯಬಾರದು. ತಪ್ಪಿದಲ್ಲಿ ಅಂತಹ ಮಾಂಸ ಮಾರಾಟ ಮಾಡುವವರ ಮತ್ತು ಮಾಂಸಾಹಾರಿ ಹೋಟೆಲ್ ಮಾಲೀಕರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಪೌರಾಯುಕ್ತ ಬಿ.ಸಿ.ಬಸವರಾಜು ತಿಳಿಸಿದ್ದಾರೆ.
ಇದನ್ನೂ ಓದಿ : ಈದ್ ಮಿಲಾದ್ ವೇಳೆ ಪ್ಯಾಲೆಸ್ತೇನ್ ಧ್ವಜ ಹಾರಾಟ; ಸುಮೋಟೋ ಕೇಸ್ ದಾಖಲಿಸಿ ಬೆಕ್ಕು ಅರೆಸ್ಟ್ ಮಾಡಿದ ಪೊಲೀಸರು!