6 ಎಕರೆ ಕಾಫಿ ತೋಟ 20 ನಿಮಿಷದಲ್ಲಿ ಸಂಪೂರ್ಣ ಭಸ್ಮ
ವಿದ್ಯುತ್ ಅವಘಡದಿಂದ ಸುಟ್ಟು ಕರಕಲಾದ ಕಾಫಿತೋಟ
ಚಿಕ್ಕಮಗಳೂರು ತಾಲೂಕಿನ ಗ್ರಾಮದಲ್ಲಿ ಕೇಸರಿಕೆ ಘಟನೆ
ವರದಿ- ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಫೆ.27): ವಿದ್ಯುತ್ ತಂತಿಗಳು ಗಾಳಿಗೆ ತೂರಾಡಿ ಒಂದಕ್ಕೊಂದು ತಾಗಿದ ಪರಿಣಾಮ ಉಂಟಾದ ಬೆಂಕಿಯ ಕಿಡಿತಾಗಿ ಕಾಫಿ ತೋಟ ಭಸ್ಮವಾದ ಘಟನೆ ನಡೆದಿದೆ. ಚಿಕ್ಕಮಗಳೂರು ತಾಲ್ಲೂಕು ಮೈಲಿಮನೆ ಸಮೀಪದ ಕೇಸರಿಕೆ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಇಂದು ಬೆಳಿಗ್ಗೆ ಈ ಘಟನೆ ನಡೆದಿದ್ದು ಬೆಂಕಿಯ ಕೆನ್ನಾಲಿಗೆಗೆ ಸುಮಾರು 6 ಎಕರೆ ಅರೇಬಿಕ ಕಾಫಿ ತೋಟ ಸುಟ್ಟು ಭಸ್ಮವಾಗಿದೆ.
ಬೆಂಕಿಯ ಕೆನ್ನಾಲಿಗೆಗೆ ಚಿಕ್ಕಮಗಳೂರು ತಾಲ್ಲೂಕು ಮೈಲಿಮನೆ ಸಮೀಪದ ಕೇಸರಿಕೆ ಗ್ರಾಮದ ಶ್ರೀಧರ್ ಶೆಟ್ಟಿ, ಮಂಜುನಾಥ್ ಶೆಟ್ಟಿ, ಗೌರಪ್ಪ, ಲಕ್ಷ್ಮಣ್ ಎಂಬುವವರಿಗೆ ಸೇರಿದ ಕಾಫಿ ತೋಟಗಳು ಸಂಪೂರ್ಣ ನಾಶವಾಗಿದೆ. ಎಲ್ಲರೂ ಸಣ್ಣ ಬೆಳೆಗಾರರಾಗಿದ್ದು 1-2 ಎಕರೆ ಹಿಡುವಳಿಯನ್ನು ಮಾತ್ರ ಹೊಂದಿದ್ದಾರೆ. ಇಷ್ಟು ಸಣ್ಣ ಹಿಡುವಳಿಯ ಭೂಮಿಯಲ್ಲಿಯೇ ತೋಟಗಾರಿಕೆ ಮಾಡಿಕೊಂಡು ತಮ್ಮ ಬದುಕು ಕಟ್ಟಿಕೊಂಡಿದ್ದರು. ಇದೀಗ ಅವರ ತೋಟದ ಕಾಫಿ ಗಿಡಗಳು, ಕಾಳುಮೆಣಸು ಬಳ್ಳಿಗಳು, ಇತರೆ ಮರಗಳು ಎಲ್ಲಾ ಸುಟ್ಟುಕರಕಲಾಗಿ ನಿಂತಿರುವ ದೃಶ್ಯ ಕಂಡು ದಿಕ್ಕುತೋಚದಂತಾಗಿದ್ದಾರೆ.
ಚಿಕ್ಕಮಗಳೂರು ಜೋಡಿ ಕೊಲೆ: ಚುನಾವಣೆ ಹೊಸ್ತಿಲಲ್ಲಿ ಪೊಲೀಸ್ ಹೈ ಅಲರ್ಟ್
16 ವರ್ಷಗಳಿಂದ ಬೆಳೆ ಕಾಫಿ ಬೆಳೆ ನಷ್ಟ: ಹಲವು ವರ್ಷಗಳಿಂದ ಕಷ್ಟಪಟ್ಟು ಸಾಗುವಳಿ ಮಾಡಿದ್ದ ತೋಟ ಕಣ್ಣೆದುರೆ ಆಕಸ್ಮಿಕ ಬೆಂಕಿಗೆ ಸುಟ್ಟು ಕರಕಲಾಗಿದ್ದು ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ತೋಟದಲ್ಲಿ 16 ವರ್ಷಗಳಿಂದ 6 ಎಕರೆ ಜಮೀನಿನಲ್ಲಿ ಕಾಫಿಯನ್ನು ಬೆಳೆಸಲಾಗಿತ್ತು. ತಮ್ಮ ಕುಟುಂಬ ಸದಸ್ಯರಲ್ಲಿ ಒಬ್ಬರಿಗೆ ಆಹಾರಕ್ಕೆ ಕೊರತೆ ಆದರೂ ಕಾಫಿ ತೋಟಕ್ಕೆ ಏನೊಮದೂ ಕೊರತೆ ಆಗದಂತೆ ಪೋಷಣೆ ಮಾಡಿ ಬೆಳೆಸಲಾಗಿತ್ತು. ಈಗ ಅಡಿಕೆ, ಕಾಫಿ ನಾಶ ಆಗಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಸಂತ್ರಸ್ತ ಕುಟುಂಬ ಸದಸ್ಯರು ಅವಲತ್ತುಕೊಂಡಿದ್ದಾರೆ.
15 ಸಾವಿರಕ್ಕೂ ಅಧಿಕ ಕಾಫಿ ಗಿಡಗಳು ಬೆಂಕಿಗಾಹುತಿ: ತೋಟದಲ್ಲಿ ಏಕಾಏಕಿ ಆಕಸ್ಮಿಕ ಬೆಂಕಿ ಹತ್ತಿದ ಪರಿಣಾಮ ಕೇವಲ 20 ನಿಮಿಷದಲ್ಲಿ ಇಡೀ ತೋಟ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದೆ. ಸುಮಾರು 15 ಸಾವಿರಕ್ಕೂ ಅಧಿಕ ಕಾಫಿ ಗಿಡಗಳು, 20ಸಾವಿರ ಅಡಿಕೆ ಗಡಿಗಳು, ಸಾವಿರಾರು ಸ್ವಿಲರ್ ಮರಗಳು, ನೂರಾರು ಕಾಡು ಜಾತಿ ಮರಗಳು ಬೆಂಕಿಗೆ ಸುಟ್ಟು ಭಸ್ಮವಾಗಿದೆ. ವಿಷಯ ತಿಳಿದ ಕೊಡಲೇ ಸ್ಥಳೀಯರ ಬೆಂಕಿಯನ್ನು ನಂದಿಸಿದ್ದಾರೆ. ಇನ್ನು ಬೆಂಕಿಗಾಹುತಿಯಾದ ಮರಗಳು ಸಂಪೂರ್ಣ ಸುಟ್ಟು ಹೋಗಿದ್ದು, ಮತ್ತೆ ಚಿಗುರೊಡೆಯುವ ಸಾಧ್ಯತೆ ಕಡಿಮೆಯಿದೆ. ಇವುಗಳನ್ನು ಕಡಿದು ಮಾರಾಟ ಮಾಡಿದರೂ ಇವುಗಳಿಗೆ ಉತ್ತಮ ಬೆಲೆಯೂ ಸಿಗುವುದಿಲ್ಲ.
Chikkamagaluru: ಅಸ್ಸಾಂ ಕಾರ್ಮಿಕರಿಂದ ಸ್ಥಳೀಯ ಕಾರ್ಮಿಕರ ಮೇಲೆ ಹಲ್ಲೆ, ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ
ಸರ್ಕಾರದಿಂದ ಪರಿಹಾರಕ್ಕೆ ಆಗ್ರಹ : ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಈ ಗ್ರಾಮಕ್ಕೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿಯರು ಭೇಟಿ ನೀಡಿ ನೊಂದ ರೈತರಿಗೆ ಸಾಂತ್ವಾನ ಹೇಳಿದ್ದಾರೆ. ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಕರೆಮಾಡಿ ನಷ್ಟ ಹೊಂದಿದ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ. ಅಧಿಕಾರಿಗಳು ಸ್ಥಳಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಈ ಸಂಬಂಧ ಬೆಳೆಗಾರರಾದ ಮಂಜುನಾಥ್ ಮಲ್ಲಂದೂರು ಪೊಲೀಸ್ ಠಾಣೆ ದೂರು ನೀಡಿದ್ದಾರೆ. ಈಗ ಲಕ್ಷಾಂತರ ರೂ. ಬೆಳೆ ನಾಶವಾಗಿದ್ದು ಸರ್ಕಾರ ನೀಡುವ ಪರಿಹಾರದ ನಿರೀಕ್ಷೆಯಲ್ಲಿ ಬೆಳೆಗಾರರ ಕುಟುಂಬವಿದೆ.