ಆಸಿಡ್ ಲಾರಿ ಪಲ್ಟಿ : ಇಬ್ಬರು ಸಜೀವ ದಹನ

Suvarna News   | Asianet News
Published : Mar 21, 2021, 11:07 AM ISTUpdated : Mar 21, 2021, 11:10 AM IST
ಆಸಿಡ್ ಲಾರಿ ಪಲ್ಟಿ : ಇಬ್ಬರು ಸಜೀವ ದಹನ

ಸಾರಾಂಶ

ಕೆಮಿಕಲ್ ಸಾಗಿಸುತ್ತಿದ್ದ ಲಾರಿ ಉರುಳಿ ಬಿದ್ದು ಬೆಂಕಿ ಹೊತ್ತಿಕೊಂಡಿದ್ದು ಇದರಿಂದ ಸ್ಥಳದಲ್ಲೇ ಇಬ್ಬರು ಸಾವಿಗೀಡಾದ ಘಟನೆ ಹಾಸನದಲ್ಲಿ ನಡೆದಿದೆ. 

ಹಾಸನ (ಮಾ.21): ಆಸಿಡ್ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ಇಬ್ಬರು ಸಜೀವ ದಹನವಾಗಿದ್ದು ಮತ್ತೋರ್ವ ಆಸ್ಪತ್ರೆಯಲ್ಲಿ ಸಾವಿಗೀಡಾದ ಘಟನೆ ಹಾಸನದಲ್ಲಿ ನಡೆದಿದೆ. 

ಹಾಸನ ಜಿಲ್ಲೆ  ಅರಕಲಗೂಡು ತಾಲೂಕು ಬಸವನಹಳ್ಳಿ ಬಳಿ ಭೀಕರ ಅವಘಡ ಸಂಭವಿಸಿದೆ.

ಆಸಿಡ್ ಸಾಗಿಸುತ್ತಿದ್ದ ಲಾರಿ ರಾತ್ರಿ ಸಮಯದಲ್ಲಿ ಪಲ್ಟಿಯಾಗಿದ್ದು, ಅರಕಲಗೂಡು ತಾಲ್ಲೂಕಿನ ಗೊರವನಹಳ್ಳಿ ಗ್ರಾಮದ ಲಾರಿ ಚಾಲಕ ಪುಟ್ಟರಾಜು (42), ಪ್ರಮೋದ್ (18), ಪರಮೇಶ್ (40) ಮೃತಪಟ್ಟಿದ್ದಾರೆ. 

ಮೈಸೂರಿನಿಂದ ಹಾಸನದ ಹಿಮತ್ ಸಿಂಗ್ ಬಟ್ಟೆ ಕಾರ್ಖಾನೆಗೆ ವಿಷಕಾರಿ ಪೌಡರ್ ಚೀಲಗಳು, ಕೆಮಿಕಲ್ ಬಾಕ್ಸ್ ಗಳನ್ನು ಲಾರಿಯಲ್ಲಿ ತರಲಾಗುತಿತ್ತು.  ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. 

ಚಿನ್ನ ದೋಚಿದ್ದ ಗ್ಯಾಂಗ್‌: 400 ಕಿ.ಮೀ ಚೇಸ್‌ ಮಾಡಿ ಕಳ್ಳನ ಬಂಧನ

ಲಾರಿ ಉರುಳಿ ಬಿದ್ದ ರಭಸಕ್ಕೆ ಭಾರೀ ಬೆಂಕಿ ಹೊತ್ತಿಕೊಂಡಿದ್ದು, ಲಾರಿಯೊಳಗೆ ಇಬ್ಬರು ಸಜೀವ ದಹನವಾಗಿದ್ದಾರೆ. ಲಾರಿಯಿಂದ ಕೆಳಕ್ಕೆ ಜಿಗಿದು ಗಾಯಗೊಡಿದ್ದ ಚಾಲಕ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. 

ಕೆಮಿಕಲ್ ಸುಟ್ಟಿದ್ದು  ದುರ್ವಾಸನೆ ಬರುತ್ತಿದ್ದ ಸಮೀಪ ಸುಳಿಯಲು ಸಾಧ್ಯವಾಗುತ್ತಿಲ್ಲ. ಸ್ಥಳಕ್ಕೆ ಅರಕಲಗೂಡು ಪೊಲೀಸರು ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.

PREV
click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ