ದೆಹಲಿ ದಂಗೆ: ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ

By Suvarna NewsFirst Published Feb 29, 2020, 3:05 PM IST
Highlights

ದೆಹಲಿಯಲ್ಲಿ ನಡೆಯುತ್ತಿರುವ ದಂಗೆ ಕುರಿತು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಸಿಎಎ ಪರ, ವಿರೋಧ ದಂಗೆ ಪೂರ್ವ ನಿಯೋಜಿತ ಎಂದು ಅವರು ಆರೋಪಿಸಿದ್ದಾರೆ.

ಮೈಸೂರು(ಫೆ.29): ದೆಹಲಿಯಲ್ಲಿ ನಡೆಯುತ್ತಿರುವ ದಂಗೆ ಕುರಿತು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಸಿಎಎ ಪರ, ವಿರೋಧ ದಂಗೆ ಪೂರ್ವ ನಿಯೋಜಿತ ಎಂದು ಅವರು ಆರೋಪಿಸಿದ್ದಾರೆ.

ಸಿಎಎ ಪರ, ವಿರೋಧ ದಂಗೆ ವಿಚಾರವಾಗಿ ಮಾತನಾಡಿದ ಅವರು, ದೆಹಲಿಯಲ್ಲಿ ನಡೆಯುತ್ತಿರುವುದು ಪೂರ್ವ ನಿಯೋಜಿತ ದಂಗೆ. ದೆಹಲಿ ಗಲಾಟೆ ಒಂದೊಂದು ವಿಡಿಯೋಗಳು ಹೋರಬಂದಾಲೂ ಅದು ಎಲ್ಲರಿಗೂ ತಿಳಿಯುತ್ತಿದೆ‌. ದೇಶದಲ್ಲಿ ಅಸಹಿಷ್ಣುತೆ ಇದೆ ಎಂಬುದನ್ನು ಪ್ರಗತಿಪರರು ಹಿಂದಿನಿಂದಲೂ ಹೇಳುತ್ತಿದ್ದಾರೆ. ಒಂದು ಧರ್ಮದ ಕಾರಣಕ್ಕಾಗಿ ಆಗುತ್ತಿರುವುದು ನಿಚ್ಚಳವಾಗಿ ಕಾಣುತ್ತಿದೆ. ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳುವ ಅಗತ್ಯೆ ಇದೆ ಎಂದು ಹೇಳಿದ್ದಾರೆ.

ಬಂಡೀಪುರದಲ್ಲಿ ಡ್ರೋನ್ ಕಣ್ಗಾವಲು, ಬೈಕ್, ಜೀಪ್ ಗಸ್ತು

ಹಿರಿಯ ಸ್ವತಂತ್ರ ಹೋರಾಟಗಾರ ದೊರೆಸ್ವಾಮಿಗೆ ಕೇವಲವಾಗಿ ಮಾತನಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಹಿರಿಯರನ್ನ ಗೌರವಿಸುವುದು ಭಾರತದ ಪರಂಪರೆ. ಹಿರಿಯರನ್ನು ಗೌರವಿಸುವುದನ್ನ ಪ್ರತಿಯೊಬ್ಬರು ಕಲಿಯಬೇಕು ಎಂದಿದ್ದಾರೆ.

ಕನ್ನಡ ಮತ್ತು ಮರಾಠಿ ವಿಚಾರಕ್ಕೆ ಬಂದ್ರೆ ಯಾರು ಪ್ರತ್ಯೇಕರಲ್ಲ. ಭಾರತದ ಅಡಿಯಲ್ಲಿ ನಾವೆಲ್ಲರೂ ಒಂದೇ. ಭಾಷೆ ವಿಚಾರದಲ್ಲಿ ಕಿತ್ತಾಡುವುದು ಬೇಡ. ಜನರನ್ನ ಬೇರ್ಪಡಿಸುವುದು ಬೇಡ. ಭಾಷೆ, ಸಂಸ್ಕೃತಿ ಮತ್ತು ನಮ್ಮ ಗಡಿ ಜಗಳವಾಡದೆ ನಾವೆಲ್ಲರೂ ಒಂದೇ ಎಂಬುದನ್ನ ಕಲಿಯಬೇಕು ಎಂದು ಹೇಳಿದ್ದಾರೆ.

click me!