'ಕಾಫಿ ಡೇ ಮಾಲೀಕ ಸಿದ್ಧಾರ್ಥ ಸಾವಿನ ಕಾರಣವೇ ಇದು'

By Kannadaprabha News  |  First Published Mar 18, 2021, 3:11 PM IST

ಸಾವಿರಾರು ಎಕರೆ ಕಾಫಿ ತೋಟವಿದ್ದ ಸಿದ್ಧಾರ್ಥ ಹೆಗ್ಡೆ ಸಾವಿಗೆ ಕಾರಣವೇ ಇದು ಎಂದು  ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ, ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಆರ್‌.ಎಂ. ಮಂಜುನಾಥಗೌಡ  ಆರೋಪಿಸಿದ್ದಾರೆ. 


ಶಿವಮೊಗ್ಗ (ಮಾ.18): ಕೃಷಿ ಪೂರಕ ಉದ್ಯಮಿ ಸಿದ್ಧಾರ್ಥ ಸಾವಿಗೆ ಕೇಂದ್ರ ಸರ್ಕಾರದ ನೀತಿ ನಿಲುವುಗಳೇ ಕಾರಣ ಎಂದು ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ, ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಆರ್‌.ಎಂ. ಮಂಜುನಾಥಗೌಡ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡಿನ ರೈತರ ಆಶಾಕಿರಣವಾಗಿದ್ದ ಸಿದ್ಧಾರ್ಥ್ ಸಾವು ರೈತರ ಸಂಕಷ್ಟಕ್ಕೆ ಉದಾಹರಣೆ. ಸಾವಿರಾರು ಎಕರೆ ಕಾಫಿ ತೋಟ ಹೊಂದಿದ್ದ ಸಿದ್ಧಾರ್ಥ ಕೇಂದ್ರ ಸರ್ಕಾರದ ಕೆಟ್ಟನೀತಿಗಳಿಂದಾಗಿ ಆರ್ಥಿಕ ದುಸ್ಥಿತಿಗೆ ಸಿಲುಕಿದರು. ಅವರು ಮಲೆನಾಡಿನ ಕಾಫಿ ಬೆಳೆಗಾರರ ಆಶಾಕಿರಣವಾಗಿದ್ದರು. ಅವರಿಂದ ಕಾಫಿಗೆ ಉತ್ತಮ ಬೆಲೆ ಸಿಗುವಂತಾಗಿತ್ತು. ಆದರೆ, ಈಗ ಕಾಫಿ ಬೆಳೆಗಾರರು ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದರು.

Tap to resize

Latest Videos

ತಾವು ಪೂಜಿಸುವ ಬುದ್ಧ ವಿಗ್ರಹ ಸಿದ್ಧಾರ್ಥ ಹೆಗ್ಡೆ ಸಮಾಧಿ ಬಳಿ ತಂದಿಟ್ಟ ವಿನಯ್ ಗುರೂಜಿ ...

ಸ್ವಾಮಿನಾಥನ್‌ ವರದಿ ಜಾರಿಗೊಳಿಸುವ ವಾಗ್ದಾನ ನೀಡಿದ್ದ ಕೇಂದ್ರ ಮಾತು ತಪ್ಪಿತು. ಕೃಷಿ ಪರಿಕರಗಳ ಬೆಲೆ ಗಗನಕ್ಕೇರಿದ್ದು ರೈತರು ಕೊಳ್ಳಲಾಗದ ಸ್ಥಿತಿಯಿದೆ. ಪಿವಿಸಿ ಪೈಪ್‌, ಗೊಬ್ಬರ, ಟಿಲ್ಲರ್‌, ಟ್ರ್ಯಾಕ್ಟರ್‌ ಎಲ್ಲದರ ಬೆಲೆಯೂ ಗಗನದತ್ತ ಮುಖ ಮಾಡಿವೆ. 

ಕೃಷಿಕರ ಆದಾಯ ದುಪ್ಪಟ್ಟು ಮಾಡುವ ಮಾತು ನೀಡಿದ್ದ ಪ್ರಧಾನಿಗಳು ಕೃಷಿ ಪರಿಕರಗಳ ದರವನ್ನು ದುಪ್ಪಟ್ಟು ಮಾಡಿದ್ದಾರೆ. ರೈತರ ಸಾವಿನ ಸಂಖ್ಯೆಯನ್ನು ದ್ವಿಗುಣಗೊಳಿಸಿದ್ದಾರೆ ಎಂದು ದೂರಿದದ ಅವರು, ಬರೀ ಸುಳ್ಳು ಭರವಸೆಯನ್ನು ಮಾತ್ರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

click me!