ಜಾತಿ ಗಣತಿ ವರದಿ ಜಾರಿಗೆ ತರಬೇಕು

By Kannadaprabha News  |  First Published Oct 15, 2023, 8:03 AM IST

ಕಾಂತರಾಜ್ ಆಯೋಗದ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ ಜಾರಿಗೆ ತರಬೇಕು ಮತ್ತು ಮುಸ್ಲಿಮರ 2 ಬಿ, ಮೀಸಲಾತಿಯ ಪ್ರಮಾಣವನ್ನು ಶೇಕಡ 8ಕ್ಕೆ ಏರಿಸಲು ಆಗ್ರಹಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸಿದರು. ಜಿಲ್ಲಾ ಎಸ್.ಡಿ.ಪಿ.ಐ ಜಿಲ್ಲಾ ಅಧ್ಯಕ್ಷ ಉಮ್ರೋದ್ದೀನ್ ಮಾತನಾಡಿ, ಸರ್ಕಾರದ ಯೋಜನೆಯಲ್ಲಿ ಸಮರ್ಪಕ ಪಾಲು ಪಡೆಯಬೇಕಾದರೆ ಆಯಾ ಸಮುದಾಯಗಳ ವಸ್ತು ಸ್ಥಿತಿ ಅರಿಯುವುದು ಮುಖ್ಯ ಎಂದರು.


 ತುಮಕೂರು :  ಕಾಂತರಾಜ್ ಆಯೋಗದ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ ಜಾರಿಗೆ ತರಬೇಕು ಮತ್ತು ಮುಸ್ಲಿಮರ 2 ಬಿ, ಮೀಸಲಾತಿಯ ಪ್ರಮಾಣವನ್ನು ಶೇಕಡ 8ಕ್ಕೆ ಏರಿಸಲು ಆಗ್ರಹಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸಿದರು. ಜಿಲ್ಲಾ ಎಸ್.ಡಿ.ಪಿ.ಐ ಜಿಲ್ಲಾ ಅಧ್ಯಕ್ಷ ಉಮ್ರೋದ್ದೀನ್ ಮಾತನಾಡಿ, ಸರ್ಕಾರದ ಯೋಜನೆಯಲ್ಲಿ ಸಮರ್ಪಕ ಪಾಲು ಪಡೆಯಬೇಕಾದರೆ ಆಯಾ ಸಮುದಾಯಗಳ ವಸ್ತು ಸ್ಥಿತಿ ಅರಿಯುವುದು ಮುಖ್ಯ ಎಂದರು.

ಎಲ್ಲಾ ಸಮುದಾಯಗಳ , ಶೈಕ್ಷಣಿಕ, ಆರ್ಥಿಕ ಸಾಮಾಜಿಕ ಸ್ಥಿತಿಗತಿ ಅರಿಯದ ಹೊರತು ಅದು ಸಾಧ್ಯವಿಲ್ಲ. ಇದನ್ನು ಮನಗಂಡು ಸಿದ್ದರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ, 2014ರಲ್ಲಿ ಕಾಂತರಾಜ್ ಆಯೋಗ ನೇಮಿಸಿ, ಜಾತಿ ಗಣತಿಗೆ ಆದೇಶಿಸಿದ್ದೀರಿ. ಅದರಂತೆ ಆಯೋಗವು 2018ರಲ್ಲಿ ತನ್ನ ವರದಿಯನ್ನು ಸಿದ್ಧಪಡಿಸಿತ್ತು. ಕಾರಣಾಂತರ ಆ ವರದಿಯನ್ನು ಸಾರ್ವಜನಿಕಗೊಳಿಸಿರಲಿಲ್ಲ ಎಂದರು.

Latest Videos

undefined

ಬಿಹಾರ ಸರ್ಕಾರ ಜಾತಿಗಣತಿಯನ್ನು 2 ವರ್ಷಗಳಲ್ಲಿ ಪೂರ್ಣಗೊಳಿಸಿ, ಅದನ್ನ ಅಂಗೀಕರಿಸಿ ಸಾರ್ವಜನಿಕ ಗೊಳಿಸಿದೆ, ಅದೇ ಮಾದರಿಯಲ್ಲಿ ಯಾವುದೇ ಒತ್ತಡಗಳಿಗೆ ಮಣಿಯದೆ ಕಾಂತರಾಜ್ ಆಯೋಗದ ವರದಿಯನ್ನು ತಕ್ಷಣವೇ ಅಂಗೀಕರಿಸಿ ಸಾರ್ವಜನಿಕ ಗೊಳಿಸಬೇಕು ಎಂದರು.

2ಬಿ ಮೂಲಕ ಮುಸ್ಲಿಮರಿಗೆ ಒದಗಿಸಲಾಗಿದ್ದ ಮೀಸಲಾತಿ ರದ್ದು ಮಾಡುವ ಕಾರ್ಯ ನಡೆಯುತ್ತಿದೆ. ಇದು ಕೋರ್ಟ್ ನಲ್ಲಿದೆ. ಆದ್ದರಿಂದ ಸಚಿವ ಸಂಪುಟ ಸಭೆಯ ಮೂಲಕ ನಿರ್ಣಯ ಕೈಗೊಂಡು ಅಂದಿನ ಬಿಜೆಪಿ ಸರ್ಕಾರದ ನಿರ್ಣಯ ಹಿಂಪಡೆಯಬೇಕು ಎಂದರು. ಪ್ರತಿಭಟನಾ ಧರಣಿಯಲ್ಲಿ ಡಿ.ಎಸ್.ಎಸ್ ಅಧ್ಯಕ್ಷರು ಪಿ.ಎನ್ ರಾಮಯ್ಯ, ಅಂಬೇಡ್ಕರ್ ಸೇನೆಯ ಶ್ರೀಮತಿ ಸುಮಾ, ಬಿ.ಟಿ ರಾಮಸುಬ್ಬಯ್ಯ ಪಾವಗಡ, ಅಲ್ತಾಫ್ ಸಾಬ್, ಹೆಚ್ ಎಂ ಎಸ್ ಸಮಿತಿಯ ಸದಸ್ಯ ಅಫ್ಸರ್ ಖಾನ್, ಎಸ್.ಡಿ.ಪಿ.ಐ ಯ ಕಾರ್ಯದರ್ಶಿ ಶಫಿ ಉಲ್ಲಾ ಖಾನ್, ಉಪಾಧ್ಯಕ್ಷ ಅಲೀಮ್ ಉಲ್ಲಾ ಶರೀಫ, ಸದಸ್ಯರಾದ ಮಹಬೊಬ್ ಪಾಷಾ, ಮುಕ್ತಿಯಾರ್ ಅಹಮದ್ ಸೇರಿದಂತೆ ಮತ್ತಿತರರು ಇದ್ದರು.

click me!