ತುಮಕೂರು: ಹುಂಡಿ ಮುಟ್ಟಿದ್ದಕ್ಕೆ ದೇಗುಲ ಸಿಬ್ಬಂದಿಗೆ ಅರ್ಚಕನಿಂದ ಜಾತಿ ನಿಂದನೆ, ಹಲ್ಲೆ

By Kannadaprabha News  |  First Published Oct 9, 2024, 9:46 AM IST

ಕುಣಿಗಲ್ ತಾಲೂಕಿನ ಮೆಣಸಿನಹಳ್ಳಿ ಪಾರ್ಥರಾಜು ಎಂಬಾತ ರಂಗಸ್ವಾಮಿ ದೇವಾಲಯದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿ ಸುತ್ತಿದ್ದರು. ಅ.5 ರಂದು ಪಾರ್ಥರಾಜು ದೇವಾಲಯದ ಹುಂಡಿಯನ್ನು ದೇವಸ್ಥಾನದ ಹಾಲ್‌ನಲ್ಲಿ ತಂದಿಟ್ಟಿದ್ದರು. ಈ ಕುರಿತು ಮರುದಿನ ಅಂದರೆ ಅ.6ರಂದು ಅರ್ಚಕ ರಾಕೇಶ್ ಆಕ್ಷೇಪ ವ್ಯಕ್ತಪಡಿಸಿದ್ದಷ್ಟೇ ಅಲ್ಲದೆ, ದೊಣ್ಣೆಯಿಂದ ಪಾರ್ಥರಾಜು ಮೇಲೆ ಹಲ್ಲೆ ಮಾಡಿದ್ದಾರೆ. ಜತೆಗೆ ಜಾತಿ ನಿಂದನೆಯನ್ನೂ ಮಾಡಿದ್ದಾರೆ. 


ಕುಣಿಗಲ್(ಅ.09):  ಹುಂಡಿ ಮುಟ್ಟಿದ ಕಾರಣಕ್ಕೆ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಭದ್ರತಾ ಸಿಬ್ಬಂದಿಗೆ ಜಾತಿ ನಿಂದನೆ ಮಾಡಿದ್ದಲ್ಲದೆ, ಹಲ್ಲೆ ಮಾಡಿದ ಆರೋಪದಡಿ ಅರ್ಚಕರೊಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಕುಣಿಗಲ್ ತಾಲೂಕಿನಲ್ಲಿ ನಡೆದಿದೆ. 

ಕುಣಿಗಲ್ ತಾಲೂಕಿನ ಬೆಟ್ಟದ ರಂಗಸ್ವಾಮಿ ದೇವಸ್ಥಾನದ ಅರ್ಚಕ ರಾಕೇಶ್‌ ಬಂಧನಕ್ಕೊಳಗಾದ ಅರ್ಚಕರು. ದೇವಸ್ಥಾನದ ಹುಂಡಿ ಮುಟ್ಟಿದ ಭದ್ರತಾ ಸಿಬ್ಬಂದಿ ಪದ್ಮರಾಜುಗೆ ಅರ್ಚಕ ಜಾತಿ ನಿಂದನೆ ಮಾಡಿದ್ದಲ್ಲದೆ, ಕೋಲಿನಿಂದ ಹಲ್ಲೆ ಮಾಡಿದ ಆರೋಪ ಮಾಡಲಾಗಿದೆ. ಈ ಕುರಿತು ಕುಣಿಗಲ್ ಠಾಣೆಗೆ ಸಲ್ಲಿಕೆಯಾದ ದೂರಿನಂತೆ ಕುಣಿಗಲ್ ಪೊಲೀಸರು ಅರ್ಚಕನನ್ನು ಬಂಧಿಸಿ, ಕ್ರಮ ಕೈಗೊಂಡಿದ್ದಾರೆ. 

Tap to resize

Latest Videos

undefined

ತುಮಕೂರಲ್ಲಿ ರಾಯಲ್ ಮೂವಿ ಸಾಂಗ್ ರಿಲೀಸ್‌: ಡಿ. ಬಾಸ್ ಫ್ಯಾನ್ಸ್‌ಗೆ ದೊಡ್ಡ ಥ್ಯಾಂಕ್ಸ್‌ ಎಂದ ದಿನಕರ್‌!

ಘಟನೆ ಹಿನ್ನೆಲೆ: 

ಮೂಲತಃ ಕುಣಿಗಲ್ ತಾಲೂಕಿನ ಮೆಣಸಿನಹಳ್ಳಿ ಪಾರ್ಥರಾಜು ಎಂಬಾತ ರಂಗಸ್ವಾಮಿ ದೇವಾಲಯದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿ ಸುತ್ತಿದ್ದರು. ಅ.5 ರಂದು ಪಾರ್ಥರಾಜು ದೇವಾಲಯದ ಹುಂಡಿಯನ್ನು ದೇವಸ್ಥಾನದ ಹಾಲ್‌ನಲ್ಲಿ ತಂದಿಟ್ಟಿದ್ದರು. ಈ ಕುರಿತು ಮರುದಿನ ಅಂದರೆ ಅ.6ರಂದು ಅರ್ಚಕ ರಾಕೇಶ್ ಆಕ್ಷೇಪ ವ್ಯಕ್ತಪಡಿಸಿದ್ದಷ್ಟೇ ಅಲ್ಲದೆ, ದೊಣ್ಣೆಯಿಂದ ಪಾರ್ಥರಾಜು ಮೇಲೆ ಹಲ್ಲೆ ಮಾಡಿದ್ದಾರೆ. ಜತೆಗೆ ಜಾತಿ ನಿಂದನೆಯನ್ನೂ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 

ಅರ್ಚಕ ರಾಕೇಶ್ ಅವರು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಹಾಗೂ ಮಹಿಳೆ ಜೊತೆ ಅಸಭ್ಯವಾಗಿ ಮಾತನಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿಗಳು ಕೂಡ ಅರ್ಚಕನ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

click me!