ಶಿವಮೊಗ್ಗ (ಜು.25): ಸಂಸದರಾಗಿ ಬಿ.ವೈ.ರಾಘವೇಂದ್ರ ಅವಧಿ ಇನ್ನೂ 3 ವರ್ಷವಿದ್ದು, ಆದಷ್ಟು ಶೀಘ್ರ ಅವರು ಸಚಿವರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ನಗರದ ಕುವೆಂಪು ರಂಗಮಂದಿರಲ್ಲಿ ಶನಿವಾರ ಜಿಲ್ಲೆಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿ, ತಮ್ಮ ಭಾಷಣದ ಉದ್ದಕ್ಕೂ ರಾಘವೇಂದ್ರರನ್ನು ಹೊಗಳಿದರು. ಸಂಸದರಾಗಿ ರಾಘವೇಂದ್ರ ಉತ್ತಮ ಕೆಲಸ ಮಾಡಿದ್ದಾರೆ. ಜಿಲ್ಲೆ ಅಭಿವೃದ್ಧಿಯಲ್ಲಿ ಸಂಸದರ ಪಾತ್ರ ಸಾಕಷ್ಟಿದೆ. ಕೇಂದ್ರ ಸರ್ಕಾರದಿಂದ ಅವರು ಸಾಕಷ್ಟುಅನುದಾನ ತಂದಿದ್ದಾರೆಂದು ಹೇಳಿದರು.
'ಈಶ್ವರಪ್ಪಗೆ ಮುಖ್ಯಮಂತ್ರಿ ಸ್ಥಾನ ನೀಡಿ'
ನನ್ನ ಅಂದಾಜಿನ ಪ್ರಕಾರ ಜಿಲ್ಲೆಗೆ 10 ಸಾವಿರ ಕೋಟಿ ರು.ಗಳಿಗೂ ಹೆಚ್ಚಿನ ಅನುದಾನವನ್ನು ತಮ್ಮ ಕ್ಷೇತ್ರಕ್ಕೆ ತರುವಲ್ಲಿ ಹಾಗೂ ಅಭಿವೃದ್ಧಿ ಮಾಡುವಲ್ಲಿ ಸಂಸದ ರಾಘವೇಂದ್ರ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಈ ಬಾರಿ ಸಚಿವ ಸ್ಥಾನ ಪಡೆದರೆ ಎಲ್ಲರಿಗೂ ಸಂತಸ ಎಂದರು.