ಸ್ಕೂಟಿಗೆ ಡಿಕ್ಕಿ ಹೊಡೆದು ಬಸ್ಸೊಂದು ಉರುಳಿ ಬಿದ್ದು 21 ಮಂದಿ ಗಾಯಗೊಂಡಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ.
ರಾಮನಗರ [ಜು.14]: ಸ್ಕೂಟಿಗೆ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ಕಳೆದುಕೊಂಡ ಖಾಸಗಿ ಗಾರ್ಮೆಂಟ್ಸ್‌ಗೆ ಸೇರಿದ ಬಸ್ಸೊಂದು ಉರುಳಿ ಬಿದ್ದು 21 ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಜಯಪುರ ಗ್ರಾಮದ ಬಳಿ ಶನಿವಾರ ನಡೆದಿದೆ.
ಘಟನೆಯಲ್ಲಿ ಸ್ಕೂಟಿ ಚಾಲನೆ ಮಾಡುತ್ತಿದ್ದ ರಾಮನಗರ ತಾಲೂಕಿನ ಹೊಸೂರು ಗ್ರಾಮದ ಶ್ವೇತಾ ಹಾಗೂ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕೆ.ಬ್ಯಾಡರಹಳ್ಳಿಯ ಸವಿತಾ, ಶಾರದಮ್ಮ, ಉಜಿನಿಯ ಸೀತಮ್ಮ, ಸುಮಿತ್ರಾ, ಚಿಕ್ಕಬ್ಯಾಡರಹಳ್ಳಿಯ ಸುಮಿತ್ರಮ್ಮ, ಜಯಮ್ಮ, ಜ್ಯೋತಿ, ಲಕ್ಷ್ಮಿ, ಜೈಶೀಲಾ, ಲೀಲಾವತಿ, ಲಕ್ಷ್ಮಿದೇವಿ, ರಾಮನಗರ ತಾಲೂಕಿನ ಕ್ಯಾಸಾಪುರ ಗ್ರಾಮದ ಲಕ್ಷ್ಮಿ, ಸುನಿತಾ, ಮಂಗಳಗೌರಿ, ಚೌಡೇಶ್ವರಿ ಹಳ್ಳಿಯ ರೂಪಾ, ಶೈಲಜಾ, ಪ್ರಭಾವತಿ, ಸುಮಾ, ಹಿಪ್ಪೆ ಮರದದೊಡ್ಡಿ ಗ್ರಾಮದ ಅನಿತಾ, ಚಾಮನಹಳ್ಳಿಯ ರತ್ನ ಗಾಯಗೊಂಡಿದ್ದಾರೆ.
ತೀವ್ರವಾಗಿ ಗಾಯಗೊಂಡಿರುವ ಶ್ವೇತಾ, ಜ್ಯೋತಿ ಸೇರಿದಂತೆ ಐದಾರು ಮಹಿಳೆಯರಿಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.