ಡೀಸೆಲ್ ಹಾಕಿಸುವಾಗ ಸುಟ್ಟು ಕರಕಲಾದ 34 ಜನರನ್ನು ಹೊತ್ತು ಹೊರಟಿದ್ದ ಬಸ್

Suvarna News   | Asianet News
Published : Jan 30, 2020, 11:03 AM ISTUpdated : Jan 30, 2020, 11:25 AM IST
ಡೀಸೆಲ್ ಹಾಕಿಸುವಾಗ ಸುಟ್ಟು ಕರಕಲಾದ 34 ಜನರನ್ನು ಹೊತ್ತು ಹೊರಟಿದ್ದ ಬಸ್

ಸಾರಾಂಶ

ಡೀಸೆಲ್ ಹಾಕಿಸುವಾಗ ಬಸ್ ಏಕಾ ಏಕಿ ಸುಟ್ಟು ಕರಕಲಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಬೆಂಗಳೂರು [ಜ.30]: ಪೆಟ್ರೋಲ್ ಬಂಕ್ ನಲ್ಲಿ ಇರುವಾಗಲೇ ಬಸ್ಸಿನಲ್ಲಿ ಏಕಾ ಏಕಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

"

ಬೆಂಗಳೂರಿನ ಮಡಿವಾಳದ ಭಾರತ್ ಪೆಟ್ರೋಲ್ ಬಂಕ್ ನಲ್ಲಿ ಬಸ್ಸಿಗೆ ಡೀಸೆಲ್ ಹಾಕಿಸುವಾಗ ಬೆಂಕಿ ಕಾಣಿಸಿಕೊಂಡಿದ್ದು ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. 

ಮಡಿವಾಳ ಪೊಲೀಸ್ ಠಾಣೆ ಪಕ್ಕದಲ್ಲಿಯೇ ಇರುವ ಪೆಟ್ರೋಲ್ ಬಂಕ್ ನಲ್ಲಿ ಈ ದುರ್ಘಟನೆಯಾಗಿದ್ದು, ಆದರೆ ಯಾವುದೇ ರೀತಿಯ ಅನಾಹುತವಾಗಿಲ್ಲ. 

ಚಿಕ್ಕಮಗಳೂರಿನಲ್ಲಿ ಕಾರು ಪಲ್ಟಿ; ಸಿಸಿಟಿವಿಯಲ್ಲಿ ಅಪಘಾತ ದೃಶ್ಯ ಸೆರೆ!...

ಬಸ್ಸನ್ನು ಚಾಲು ಮಾಡುವಾಗ ಏಕಾಕಿ ಬಸ್ಸಿನ ಒಳಗೆ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಬಸ್ಸಿನಲ್ಲಿದ್ದ 34 ಪ್ರಯಾಣಿಕರು ಕೆಳಕ್ಕೆ ಇಳಿದಿದ್ದಾರೆ. 

ಬೆಂಗಳೂರಿನಿಂದ ಕೋಯಮತ್ತೂರು ಕಡೆಗೆ ಹೊರಟಿದ್ದ ವೇಳೆ ಬೆಂಕಿ ಕಾಣಿಸಿಕೊಂಡು ಬಸ್ ಸುಟ್ಟು ಕರಕಲಾಗಿದೆ. ನಾಲ್ಕು ಅಗ್ನಿ ಶಾಮಕ ವಾಹನಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ. 

ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು