ಮಂಡ್ಯ: ಜೋಡೆತ್ತುಗಳ ಗಾಡಿ ಓಟದ ಪುಳಕ..!

Kannadaprabha News   | Asianet News
Published : Jan 28, 2020, 11:53 AM IST
ಮಂಡ್ಯ: ಜೋಡೆತ್ತುಗಳ ಗಾಡಿ ಓಟದ ಪುಳಕ..!

ಸಾರಾಂಶ

ಜೋಡೆತ್ತುಗಳನ್ನು ನೋಡುವುದೇ ಚಂದ..! ಅದರಲ್ಲೂ ಜೋಡೆತ್ತುಗಳ ಗಾಡಿ ಓಟದ ಸ್ಪರ್ಧೆ ಅಂದ್ರೆ ಅದನ್ನು ವೀಕ್ಷಿಸುವುದಕ್ಕೆ ಜನ ದೂರದೂರಿಂದಲೂ ಬಂದು ಸೇರುತ್ತಾರೆ. ಮಂಡ್ಯದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಜೋಡೆತ್ತುಗಳ ಗಾಡಿ ಓಟ ನಡೆಸಲಾಗಿತ್ತು.

ಭಾರತೀನಗರ(ಜ.28): ಗುರುದೇವರಹಳ್ಳಿಯಲ್ಲಿ 71ನೇ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ರಾಜ್ಯಮಟ್ಟದ ಜೋಡಿಎತ್ತಿನ ಗಾಡಿ ಓಟದ ಸ್ಪರ್ಧೆ ಜರುಗಿತು. ಸ್ಪರ್ಧೆಯಲ್ಲಿ 46 ಜೋಡಿ ಎತ್ತುಗಳು ಭಾಗವಹಿಸಿದ್ದರು. ಜೋಡಿ ಎತ್ತುಗಳ ಓಟ ಎಲ್ಲರನ್ನು ರೋಮಾಂಚನಗೊಳಿಸಿದವು.

ಈ ಮಿಂಚಿನ ಓಟವನ್ನು ನೋಡಲು ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧಾಳುಗಳು ಗೆಲುವಿನ ಗೆರೆ ದಾಟಲು ಚಾಟಿಬೀಸಿ ಮುನ್ನುಗ್ಗುತ್ತಿದ್ದಾಗ ಸೀಟಿ, ಚಪ್ಪಾಳೆ ಸದ್ದುಗಳು ಕೇಳಿಬರುತ್ತಿದ್ದವು. ಮೊಬೈಲ್‌ಗಳಲ್ಲಿ ಗೇಮ್‌ ಆಡುವ ಮೂಲಕ ರೋಚಕತೆಯ ಅನುಭವ ಪಡೆಯುತ್ತಿದ್ದ ನಗರ ಪ್ರದೇಶದ ಯುವಜನರು ಕೆಲ ಯುವಕರು ಎತ್ತಿನ ಗಾಡಿ ಓಟದ ಸ್ಪರ್ಧೆ ಕಂಡು ರೋಮಾಂಚನಗೊಂಡರು.

ಮೈಸೂರು ಮೇಲ್ ಮಂಜು..! ಚಿಲ್ ಎನ್ನುತ್ತಿದೆ ಸಾಂಸ್ಕೃತಿಕ ನಗರ

ಎತ್ತುಗಳ ಓಟವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಂತಸಪಟ್ಟರು. ಈ ಸ್ಪರ್ಧೆಗೆ ಮಂಡ್ಯ ಜಿಲ್ಲೆ ಸೇರಿದಂತೆ ತುಮಕೂರು, ಚಾಮರಾಜನಗರ, ಬೆಂಗಳೂರು, ಕೋಲಾರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

PREV
click me!

Recommended Stories

ಸಿದ್ಧರಾಮಯ್ಯ ಮಾತು ಎತ್ತಿದ್ರೆ ಸಾಬ್ರು ಸಾಬ್ರು ಅಂತ ಜಪ ಮಾಡ್ತಾರೆ: ಶಾಸಕ ಯತ್ನಾಳ್ ವ್ಯಂಗ್ಯ!
ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ