ಕಾರಿಗೆ ಡಿಕ್ಕಿ ಹೊಡೆದ ಎತ್ತಿನ ಬಂಡಿ: ಓರ್ವನಿಗೆ ಗಾಯ

Suvarna News   | Asianet News
Published : Jan 16, 2020, 12:08 PM ISTUpdated : Jan 16, 2020, 12:11 PM IST
ಕಾರಿಗೆ ಡಿಕ್ಕಿ ಹೊಡೆದ ಎತ್ತಿನ ಬಂಡಿ: ಓರ್ವನಿಗೆ ಗಾಯ

ಸಾರಾಂಶ

ಕಾರಿಗೆ ಡಿಕ್ಕಿ ಹೊಡೆದ ಎತ್ತಿನ ಬಂಡಿ| ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರ ಬ್ರಿಡ್ಜ್ ಮೇಲೆ ನಡೆದ ಘಟನೆ| ದುರ್ಘಟನೆಯಲ್ಲಿ ಗಾಯಗೊಂಡ ಕಾರಿನ ಚಾಲಕ| ಕಾರಿಗೆ ಎತ್ತಿನ ಬಂಡಿ ಡಿಕ್ಕಿ ಹೊಡೆಯುವ ದೃಶ್ಯ ಮೊಬೈಲ್ಲ್‌ನಲ್ಲಿ ಸೆರೆ|

ಬೆಳಗಾವಿ(ಜ.16): ಎತ್ತಿನ ಬಂಡಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಗಾಯಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರ ಬ್ರಿಡ್ಜ್ ಮೇಲೆ ಇಂದು(ಗುರುವಾರ) ನಡೆದಿದೆ. ಗಾಯಗೊಂಡ ಕಾರು ಚಾಲಕನ ಹೆಸರು ತಿಳಿದು ಬಂದಿಲ್ಲ. 

"

ಜಿಲ್ಲೆಯ ಸುಕ್ಷೇತ್ರ ಸವದತ್ತಿ ಯಲ್ಲಮ್ಮ ದೇವಿ ಜಾತ್ರೆ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ನಯಾನಗರ ಬ್ರಿಡ್ಜ್ ಮೇಲೆ ಬರುತ್ತಿದ್ದ ವೇಳೆ ಎತ್ತಿನ ಗಾಡಿಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. ಈ ವೇಳೆ ಒಂದು ಎತ್ತಿನ ಬಂಡಿ ನೇರವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಎತ್ತಿನ ಗಾಡಿಯಲ್ಲಿದ್ದ ಜನರ ಪರಿಸ್ಥಿತಿ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಾರಿಗೆ ಎತ್ತಿನ ಬಂಡಿ ಡಿಕ್ಕಿ ಹೊಡೆಯುವ ದೃಶ್ಯ ಮೊಬೈಲ್ಲ್‌ನಲ್ಲಿ ಸೆರೆಯಾಗಿದೆ. ಗಾಯಗೊಂಡ ಕಾರಿನ ಚಾಲಕನನ್ನ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ ಚಿಕಿತ್ಸೆ ಕೊಡಿಸಲಾಗುತ್ತಿದೆ. 
 

PREV
click me!

Recommended Stories

Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!
ಯಕ್ಷಗಾನ ಕಲಾವಿದರ ಅಪಮಾನ: 'ಬಿಳಿಮಲೆಗೆ ಒಂದು ನೋಟಿಸ್ ಕೊಡೋಕೂ ಕಷ್ಟವೇ? ಸುನೀಲ್ ಕುಮಾರ್ ಪ್ರಶ್ನೆ, ಈ ವಿಷಯ ದೊಡ್ಡದು ಮಾಡೋದು ಬೇಡ ಎಂದ ತಂಗಡಗಿ